ಬೆಳೆಗಾವಿ 25: ಕೆ.ಎಲ್.ಎಸ್. ಗೋಗ್ಟೆ ತಂತ್ರಜ್ಞಾನ ಸಂಸ್ಥೆಯು ಜಿಐಟಿ ಕ್ಯಾಂಪಸ್ನಲ್ಲಿ 24 ಸೆಪ್ಟೆಂಬರ್ 2018 ರಂದು ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ, "ಸ್ಮಾಟರ್್ ರೀಡಿಂಗ್ ಜೋನ್ಅನ್ನು ಸ್ಥಾಪಿಸಿದ್ದಾರೆ.
ಈ ರೀಡಿಂಗ್ ಜೋನ್ನ್ನು ಗವನರ್ಿಂಗ್ ಕೌನ್ಸಿಲ್ ಅಧ್ಯಕ್ಷರಾದ ಯು.ನ್. ಕಲ್ಕುಂಡ್ರಿಕರ್ ಉದ್ಘಾಟಿಸಿದರು. ಡಾ. ಎಸ್. ದೇಶ್ಪಾಂಡೆ, ಪ್ರಿನ್ಸಿಪಾಲ್, ಕೆಎಲ್ಎಸ್ಜಿಐಟಿ, ಶ್ರೀ ಅರುಣೆ ಆಡರಾಕಟ್ಟೆ, ಗ್ರಂಥಪಾಲಕ, ಡೀನ್ಸ್ ಹಾಗೂ ಎಚ್ಓಡಿ ಉಪಸ್ಥಿತರಿದ್ದರು.
ಇ-ರೀಡಿಂಗ್ ಜೋನ್ 1.5 ದಶಲಕ್ಷ ಇ-ಪುಸ್ತಕಗಳನ್ನು ಅನ್ವೇಪಿಸುವ ಕಿಂಡಲ್ಗಳನ್ನು ಒಳಗೊಂಡಿದೆ, ವಿಜ್ಞಾನ, ಎಂಜಿನಿಯರಿಂಗ್, ತಂತ್ರಜ್ಞಾನ, ಅರ್ಥಶಾಸ್ತ್ರ, ವ್ಯಾಪಾರ, ವಾಣಿಜ್ಯ, ಸಾಮಾಜಿಕ ವಿಜ್ಞಾನ, ಸಾಹಿತ್ಯ ಇತ್ಯಾದಿ ಪುಸ್ತಕಗಳನು ಒಳಗೊಂಡಿದೆ.