ದಾಂಡೇಲಿಯಲ್ಲಿ ಕಾಳಿ ನದಿ ರಕ್ಷಣೆಗೆ ಪರಿಸರ ಪ್ರೇಮಿಗಳ ಅಭಿಯಾನ
Environmentalists' campaign to protect the Kali River in Dandeli
ಲೋಕದರ್ಶನ ವರದಿ
ದಾಂಡೇಲಿ 18: ದಾಂಡೇಲಿಯ ಫಾರೀಕ್ ಪ್ರಸಂಟೇಶನ್ ವತಿಯಿಂದ ಶನಿವಾರ ಕಾಳಿನದಿ ಸೇತುವೆ ಮೇಲೆ ಕಾಳಿನದಿ ಸಂರಕ್ಷಣೆಗೆ ಜಾಗ್ರತಿ ಅಭಿಯಾನ ಕೈಗೊಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. ಅಭಿಯಾನದಲ್ಲಿ ಯುವ ಕಾರ್ಯಕರ್ತರು ಕಾಳಿನದಿ
ನಮ್ಮ ಜೀವನಾಡಿ - ಸ್ವಚ್ಚವಾಗಿಡುವದು ನಮ್ಮೇಲ್ಲರ ಹೊಣೆ, ನದಿಗೆ ಕಸ ಎಸೆಯಬೇಡಿ, ಪರಿಸರ ಉಳಿಸಿ- ಕಾಳಿನದಿ ಬೆಳೆಸಿ ಎಂಬ ಸಂದೇಶಗಳಿರುವ ಜಾಗ್ರತಿ ಫಲಕಗಳನ್ನು ಹಿಡಿದು ಸಾರ್ವಜನಿಕರಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಿದರು.
ಅಲ್ಲದೆ ಕಾಳಿ ಸೇತುವೆಯ ಮೇಲೆ ಸಾರ್ವಜನಿಕರಿಗೆ ನಿರಂತರವಾಗಿ ಜಾಗ್ರತಿ ಮೂಡಿಸುವ ಉದ್ದೇಶದಿಂದ ಶಾಶ್ವತ ಜಾಗ್ರತಿ ಫಲಕಗಳನ್ನು ಅಳವಡಿಸಲಾಯಿತು. ಈ ಸಂದರ್ಭದಲ್ಲಿ ಆಯೋಜಕರಾದ ಗೋವಿಂದ ಫಾರೀಕ್ ಮಾತನಾಡಿ ಕಾಳಿನದಿ ದಾಂಡೇಲಿಯ ಜೀವನಾಡಿಯಾಗಿದ್ದು , ಅದರ ಸ್ವಚ್ಚತೆ ಕಾಪಾಡುವದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದರು.
ಅಭಿಯಾನದಲ್ಲಿ ಫಾರೀಕ್ ಪ್ರಸೆಂಟೇಶನ್‌ನ ಸುನೀಲ ಎಮ್.ಎಚ್, ರಾಕೇಶ ಸಾರಡಾ, ಮಂಜುನಾಥ ದೇಸಾಯಿ, ಶಬ್ಬೀರ್ ಪಾನವಾಲೇ, ಶಾನೂರ್, ಅಭಿಷೇಕ ಪಾಟೀಲ್, ಮತ್ತಿತರರು ಪಾಲ್ಗೊಂಡಿದ್ದರು. ಸಾರ್ವಜನಿಕರು ಈ ಜಾಗೃತಿ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಕಾಳಿನದಿ ಸಂರಕ್ಷಣೆಗೆ ಸಹಕರಿಸುವ ಭರವಸೆ ನೀಡಿದರು.
ಸ್ಕೈರೂಟ್ ಏರೋಸ್ಪೇಸ್ನ ವಿಕ್ರಮ್-1 ಉಡಾವಣೆ ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಮಹತ್ವದ ಮೈಲುಗಲ್ಲು: ಪ್ರಧಾನಿ ಮೋದಿ
ಜೊಡಿ ಹತ್ಯೆಗೆ ತಿರುವು: ಆಸ್ತಿಗಾಗಿ ಇಬ್ಬರು ಮೈದುನರ ಹತ್ಯೆ ಮಾಡಿಸಿದ ಅತ್ತಿಗೆ : ಪೊಲೀಸ ತನಿಖೆಯಲ್ಲಿ ಬಹಿರಂಗ
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ 