ಮೇಲ್ಛಾವಣಿ ಕುಸಿದು ಇಡೀ ಕುಟುಂಬವೇ ಸಾವು: ಶ್ರೀಶೈಲಗೌಡ ಬಿರಾದಾರ ಸಾಂತ್ವನ

ಮೇಲ್ಛಾವಣಿ ಕುಸಿದು ಇಡೀ ಕುಟುಂಬವೇ ಸಾವು: ಶ್ರೀಶೈಲಗೌಡ ಬಿರಾದಾರ ಸಾಂತ್ವನ Entire family dies in roof collapse: Srisailagouda's brother offers condolences

ಲೋಕದರ್ಶನ ವರದಿ 

ಸಿಂದಗಿ 19: ಮತಕ್ಷೇತ್ರದ ಮೊರಟಗಿ ಗ್ರಾಮದಲ್ಲಿ ಏರಡು ದಿನಗಳ ಹಿಂದೆ ಸುರಿದ ಅಕಾಲಿಕ ಗಾಳಿ-ಮಳೆಯ ಭೀಕರ ಆರ್ಭಟಕ್ಕೆ ತುತ್ತಾಗಿ ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಗುರುನಾಥ ಬಡಿಗೇರ ಮತ್ತು ಅವರ ಇಡೀ ಕುಟುಂಬವೇ ಸಾವನ್ನಪ್ಪಿದ್ದ ಈ ಹಿನ್ನೆಲೆಯಲ್ಲಿ ಸಿಂದಗಿ ವಿಧಾನಸಭಾ ಮತಕ್ಷೇತ್ರದ  ಬಿಜೆಪಿ ಪಕ್ಷದ ಮುಖಂಡ ಶ್ರೀಶೈಲಗೌಡ ಬಿರಾದಾರ ಅವರು ಇಂದು ಮೃತರ ಮನೆಗೆ ಖುದ್ದಾಗಿ ಭೇಟಿ ನೀಡಿ, ಮೃತರ ಉಳಿದ ಕುಟುಂಬದ ಸದಸ್ಯರನ್ನು ಹಾಗೂ ಸಮಾಜದ ಮುಖಂಡರನ್ನು ಭೇಟಿಯಾಗಿ ಅಗಲಿದ ಆತ್ಮಗಳಿಗೆ ಶ್ರದ್ಧಾಂಜಲಿ ಸಲ್ಲಿಸಿ ಕುಟುಂಬಸ್ಥರಿಗೆ ನಿಮ್ಮ ದುಃಖದಲ್ಲಿ ನಾವೂ ಭಾಗಿಗಳಾಗಿದ್ದೇವೆ. ದೇವರು ನಿಮಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಸಾಂತ್ವನ ಹೇಳಿದರು.  ಘಟನಾ ಸ್ಥಳವನ್ನು ವೀಕ್ಷಿಸಿ ಅವರು, ಮೃತರ ಹತ್ತಿರದ ಬಂಧುಗಳು ಹಾಗೂ ಗ್ರಾಮಸ್ಥರೊಂದಿಗೆ ಮಾತನಾಡಿ ದುಃಖ ಹಂಚಿಕೊಂಡರು. ಪ್ರಕೃತಿಯ ಈ ವಿಕೋಪಕ್ಕೆ ಹಸನ್ಮುಖಿಯಾಗಿದ್ದ ಇಡೀ ಕುಟುಂಬವೇ ಬಲಿಯಾಗಿರುವುದು ಅತ್ಯಂತ ಕರುಣಾಜನಕ ಹಾಗೂ ಸಮಾಜಕ್ಕೆ ಭರಿಸಲಾಗದ ನಷ್ಟವಾಗಿದೆ ಮತ್ತು ಗ್ರಾಮವನ್ನೇ ಕಣ್ಣೀರಿಡುವಂತೆ ಮಾಡಿದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದರು.  

ಇಡೀ ಕುಟುಂಬವನ್ನು ಕಳೆದುಕೊಂಡ ಈ ಮಗುವಿನ ನೋವು ಯಾರಿಗೂ ಬಾರದಿರಲಿ. ಈ ವಯಸ್ಸಿನಲ್ಲಿ ಹೆತ್ತವರನ್ನು ಕಳೆದುಕೊಂಡ ಮಗುವಿಗೆ ಆರ್ಥಿಕ ಆಸರೆಗಿಂತ ಹೆಚ್ಚಾಗಿ ಸಾಮಾಜಿಕ ಭದ್ರತೆಯ ಅಗತ್ಯವಿದೆ....  ಮಗುವಿನ ಮುಂದಿನ ಜೀವನ ಮತ್ತು ಶೈಕ್ಷಣಿಕ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಶ್ರೀಶೈಲಗೌಡ ಬಿರಾದಾರ ಅವರು ತಮ್ಮ ಬಿಎನ್‌ಬಿ ಫೌಂಡೇಶನ್ಸ್‌ ವತಿಯಿಂದ ಮಗುವಿಗೆ ಧನಸಹಾಯ ಮಾಡಿ ಮಗುವಿನ ಶಿಕ್ಷಣಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಫೌಂಡೇಶನ್ ವತಿಯಿಂದ ಅಗತ್ಯವಿರುವ ಸಂಪೂರ್ಣ ಶೈಕ್ಷಣಿಕ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಭರವಸೆಯನ್ನು ನೀಡಿದರು. ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಪರಮ ಪೂಜ್ಯಶ್ರೀ ರಾಮಚಂದ್ರ ಮಹಾಸ್ವಾಮಿಗಳು, ಸಿಂದಗಿ ತಾಲೂಕ ಗಾಣಿಗ ಸಮಾಜದ ಮಾಜಿ ಅದ್ಯಕ್ಷ ಮಲ್ಲಣ್ಣ ಮನಗೂಳಿ, ಗ್ರಾಮದ ನಮ್ಮ ಪಕ್ಷದ ಕಾರ್ಯಕರ್ತರಾದ ನವೀನಕುಮಾರ ನೆಲ್ಲಗಿ, ತಮ್ಮಣ್ಣಗೌಡ ಬೋನಾಳ, ವಿಶ್ವನಾಥ ಬೆಳಗುಂಪಿ, ಅನೀಲ ಕೊಣಶಿರಸಗಿ, ಇರ​‍್ಾನ ಜಾಲೀಗೀಡ, ಕನ್ನಯ ಕೇರಿಗೊಂಡ, ಈರಣ್ಣ ವಿಶ್ವಕರ್ಮ, ಭಗವಂತ್ರಾಯ ಕಕ್ಕಳಮೇಲಿ ರಾವುತರಾಯ ಗುಗ್ಗರಿ, ಅವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.