ಲೋಕದರ್ಶನವರದಿ
ಮಹಾಲಿಂಗಪುರ19: ತಾಂತ್ರಿಕ ವಿದ್ಯಾಥರ್ಿಗಳು ಸಾಮಾನ್ಯ ಜನರು ಹಾಗೂ ರೈತರು ದಿನನಿತ್ಯ ಎದುರಿಸುತ್ತಿರುವ ಸಮಸ್ಯೆಗಳನ್ನ ಪರಿಹರಿಸುವಂತಹ ಪ್ರೊಜೆಕ್ಟಗಳನ್ನು ಮಾಡಿ ಸಮಾಜದ ಋಣ ತೀರಿಸಬೇಕು ಎಂದು ಕರೆಕೊಟ್ಟರು ಎಂದು ವಿದ್ಯಾಥರ್ಿಗಳನ್ನು ಉದ್ದೇಶಿಸಿ ಮಹಾಲಿಂಗಪುರದ ಕನರ್ಾಟಕ ಹೈವೆ ಮೆಂಟೆನನ್ಸ ಇಂಜಿನಿಯರ್ ರಾಘವೇಂದ್ರ ಮಾತನಾಡಿದರು.
ನಗರದ ಕೆ.ಎಲ್.ಇ ಡಿಪ್ಲೋಮಾ ಕಾಲೇಜನಲ್ಲಿ ಅಭಿಯಂತರ ಇಂಜಿನಿಯರ್ಸ್ ದಿನಾಚರಣೆಯನ್ನ ವಿಶೇಷವಾಗಿ ಆಚರಿಸಲಾಯಿತು. ಭಾರತರತ್ನ ಸರ್ ಎಂ ವಿಶ್ವೇಶ್ವರಾಯನವರ ಭಾವ ಚಿತ್ರಕ್ಕೆ ಪೂಜೆಸಲ್ಲಿಸಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಎಸ್. ಐ ಕುಂದಗೋಳ, ಕಡುಬಡತನದಲ್ಲಿ ಹುಟ್ಟಿದ ಸರ್ ಎಮ್. ವಿಶ್ವೇಶ್ವರಾಯನವರು ಬಡತನವೆಂಬ ರೋಗಕ್ಕೆ ಶಿಕ್ಷಣವೇ ಔಷಧಿ ಎಂಬುದನ್ನು ಬಲವಾಗಿ ನಂಬಿದ್ದ ಇವರು ಶಿಸ್ತು, ಕಠಿಣ ಪರಿಶ್ರಮ, ಪ್ರಾಮಾಣಿಕತೆ, ಸಮಯಪ್ರಜ್ಞೆ ಮತ್ತು ಸಾಧಿಸುವ ಛಲದಿಂದ ಭಾರತದ ಖ್ಯಾತ್ ಇಂಜಿನಿಯರ್ ಆಗಿ ಜಗತ್ ಪ್ರಸಿದ್ದರಾದರು.
ಕಾಯಕವೇ ಕೈಲಾಸ ಎಂಬುದನ್ನ ಮೈಗೂಡಿಸಿಕೊಂಡ ಇವರು ಬದುಕಿನುದ್ದಕ್ಕೂ ನಾಡಿಗಾಗಿ ದುಡಿದ ನಮ್ಮ ನೆಲದ ಹೆಮ್ಮೆಯ ಕಾಯಕಯೋಗಿ ಎಂದರು. ತಾಂತ್ರಿಕ ವಿದ್ಯತರ್ಿಗಳು ಸರ್.ಎಮ್.ವಿಶ್ವೇಶವರಾಯನವರ ವಿಶೇಷ ಗುಣಗಳನ್ನ ಮೈಗೂಡಿಸಿಕೊಳ್ಳಲು ಪ್ರಯತ್ನಿಸಿ ಎಂದು ಕರೆ ಕೊಟ್ಟರು. ಕಾಲೇಜಿನ ಸಾಂಸ್ಕ್ರತಿಕ ವಿಭಾಗದ ಮುಖ್ಯಸ್ಥ ಸುಭಾಸ ಮೂಸಿ ವೇದಿಕೆಯ ಮೇಲೆ ಇದ್ದರು.
ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಹಳೆಯ ವಿದ್ಯಾಥರ್ಿ ಶಶಿ ಬುರಡ ಅವರನ್ನ ಈ ವೇಧಿಕೆಯಲ್ಲಿ ಸನ್ಮಾನಿಸಲಾಯಿತು. ಅವರು ಮಹಾಲಿಂಗಪುರದ ಒಬ್ಬ ಜನಪ್ರೀಯ ಕಾಂಟ್ರಾಕ್ಟರ ಆಗಿ ಹೊರಹೊಮ್ಮುತಿರುವುದರಿಂದ ಉಪನ್ಯಾಸಕ ವೃಂದದಿಂದ ಸನ್ಮಾನಿಸಲಾಯಿತು.
ಅಭಿಯಂತರ ದಿನಾಚರಣೆ ನಿಮಿತ್ತ ಸೆ. 17 ರಂದು ವಿದ್ಯಾಥರ್ಿಗಳಿಗಾಗಿ ಭಾಷಣ ಸ್ಫಧರ್ೆ, ಕಸದಿಂದ-ರಸ ಸ್ಫಧರ್ೆ, ರಸಪ್ರಸ್ನೆ ಮತ್ತು ನೆನಪಿನ ಶಕ್ತಿ ಸ್ಫಧರ್ೆಗಳನ್ನ ಹಮ್ಮಿಕೊಳ್ಳಲಾಗಿತ್ತು. ಭಾಷಣ ಸ್ಫಧರ್ೆಯಲ್ಲಿ ಮೆಕ್ಯಾನಿಕಲ್ ವಿಭಾಗದ ವಿದ್ಯಾಥರ್ಿ ಶಿವಾನಂದ ಶಿವಾಪೂರ, ಕಸದಿಂದ-ರಸ ಸ್ಫಧರ್ೆಯಲ್ಲಿ ಇಲೆಕ್ಟ್ರಾನಿಕ್ ವಿಭಾಗದ ವಿದ್ಯಾಥರ್ಿ ಆಕಾಷ ಕಭಾನೂರ, ನೆನಪಿನ ಶಕ್ತಿ ಸ್ಫಧರ್ೆಯಲ್ಲಿ ಮೆಕ್ಯಾನಿಕಲ್ ವಿಭಾಗದ ವಿದ್ಯಾಥರ್ಿ ಬಾಳಪ್ಪ ಕಡಪಟ್ಟಿ ಮತ್ತು ರಸಪ್ರಸ್ನೆ ಸ್ಫಧರ್ೆಯಲ್ಲಿ ಇಲೆಕ್ಟ್ರಾನಿಕ್ ವಿಭಾಗದ ವಿದ್ಯಾಥರ್ಿಗಳು ಪ್ರಥಮ ಸ್ಥಾನ ಪಡೆದರು.
ಉಪನ್ಯಾಸಕ ವಿಶಾಲ ಮೆಟಗುಡ್ ಸ್ವಾಗತಿಸಿದರು, ಚೈತ್ರಾ ಹನಸಿ ಪರಿಚಯಿಸಿದರು, ಮಲ್ಲಪ್ಪ ಗರಗದ ವಂದಿಸಿದರು. ಸವಿತಾ ಬೀಳಗಿ ಕಾರ್ಯಕ್ರಮ ನಿರ್ವಹಿಸಿದರು.
ಕಾಲೇಜಿನ ಸಾಂಸ್ಕ್ರತಿಕ ವಿಭಾಗದ ಸಿಬ್ಬಂದಿ ಉಮೇಶ ಹಾದಿಮನಿ, ಗುರುರಾಜ ಅಥನಿ, ಸವಿತಾ ಗೊಂದಿ, ಪೂಜಾ ಬರಗಿ, ನಿಂಗಪ್ಪ ಸಿಂಗೆ ಮುಂತಾದ ಉಪನ್ಯಾಸಕರು ಉಪಸ್ಥಿತರಿದ್ದರು.