ಲೋಕದರ್ಶನ ವರದಿ
ರಾಯಬಾಗ: ಮತಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಮುಂಬರುವ ದಿನಗಳಲ್ಲಿ ನೀರಾವರಿ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ದಿ.6ರಂದು ತಾಲೂಕಿನ ಮಂಟೂರ ಗ್ರಾಮದಲ್ಲಿ ಸಮಾಜಕಲ್ಯಾಣ ಇಲಾಖೆಯಡಿ ಮಂಜೂರಾದ 12 ಲಕ್ಷ ರೂ. ವೆಚ್ಚದಲ್ಲಿ ಡಾ.ಬಾಬುಜಗಜೀವನರಾಂ ಸಮುದಾಯ ಭವನ ಕಟ್ಟಡ ಕಾಮಗಾರಿಗೆ ಭೂಮಿ ನೆರವೇರಿಸಿ ಮಾತನಾಡಿದ ಅವರು, ಎಲ್ಲ ಸಮುದಾಯದವರಿಗೆ ಸಮುದಾಯ ಭವನಗಳನ್ನು ನಿಮರ್ಿಸಿಕೊಡಲಾಗುತ್ತಿದ್ದು, ಅವುಗಳನ್ನು ಒಳ್ಳೆ ಕಾರ್ಯಗಳಿಗೆ ಉಪಯೋಗಿಸಿಕೊಂಡು, ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕೆಂದು ಸೂಚಿಸಿದರು.
ಜಿ.ಪಂ.ಸದಸ್ಯ ನಿಂಗಪ್ಪ ಪಕಾಂಡಿ, ಅಪ್ಪಾಸಾಬ ದೇಸಾಯಿ, ಮಲಗೌಡ ಪಾಟೀಲ, ಸುಂದರ ಕೆಳಗಡೆ, ಶಾನಪ್ಪ ಬೋರಗೌಡ, ಮಡಿವಾಳ ಹಂಜಿ, ಪಿ.ಟಿ.ವಾಘ ಸೇರಿದಂತೆ ಮುಂತಾದವರು ಇದ್ದರು.