ಲೋಕದರ್ಶನ ವರದಿ
ಬೆಳಗಾವಿ, 21: ನಗರದ ಚವ್ಹಾಟಗಲ್ಲಿಯಲ್ಲಿರುವ ಸರಕಾರಿ ಆದರ್ಶ ಮರಾಠಿ ಮಕ್ಕಳ ಶಾಲೆ ನಂ.5 ರಲ್ಲಿ ಶಾಸಕ ಅನಿಲ ಬೆನಕೆರವರುತಮ್ಮ ಶಾಸಕರ ಸ್ಥಳಿಯ ಪ್ರದೇಶಾಭಿವೃಧ್ದಿ ಅನುದಾನದಡಿಯಲ್ಲಿ ಶಾಲಾ ಆವರಣದಲ್ಲಿ ಪೇವರ್ಸ್ ಅಳವಡಿಸುವ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅನಿಲ ಬೆನಕೆರವರು ಸರಕಾರಿಆದರ್ಶ ಮರಾಠಿ ಮಕ್ಕಳ ಶಾಲೆ ನಂ.5 ಕ್ಕೆ 100 ವರ್ಷ ಪೂರೈಸಿದ ಅಂಗವಾಗಿ ಶತಮಾನೋತ್ಸವ ಕಾರ್ಯಕ್ರಮವನ್ನು ಬರುವ ಫೆೆಬ್ರುವರಿಯಲ್ಲಿ ಹಮ್ಮಿಕೊಳ್ಳಲಾಗಿದ್ದು ಪ್ರಯುಕ್ತ ಶಾಲೆಯ ನವೀಕರಣಕ್ಕಾಗಿ ಪ್ರಭಾಕರ ಕೋರೆರವರ ರಾಜ್ಯಸಭಾ ಸದಸ್ಯರ ಅನುದಾನದಡಿಯಲ್ಲಿ 7 ಲಕ್ಷರೂ. ಹಾಗೂ ನನ್ನ ಉತ್ತರ ಮತಕ್ಷೇತ್ರದ ಸ್ಥಳೀಯ ಪ್ರದೇಶಾಭಿವೃಧ್ದಿ ನಿಧಿಯಿಂದ 3 ಲಕ್ಷ ರೂಗಳ ಪೇವರ್ಸ್ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಮತ್ತು ಅದಲ್ಲದೆ 1ಲಕ್ಷ ರೂ.ಗಳ ಆರ್.ಓ ಪ್ಲಾಂಟ್ಕುಡಿಯುವ ನೀರಿನ ಘಟಕ ಹಾಗೂ 50,000 ರೂಗಳ ಕ್ರೀಡ ಸಾಮಗ್ರಿಗಳನ್ನು ಸ್ಥಳೀಯ ಪ್ರದೇಶಾಭಿವೃಧ್ದಿ ಅನುದಾನದಡಿಯಲ್ಲಿ ನೀಡಲಾಗಿದೆ ಎಂದರು. ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಬರುವಎಲ್ಲ ಶಾಲೆಗಳನ್ನು ಅಭಿವೃಧ್ದಿ ಪಡಿಸಲಾಗುವುದು ಹಾಗೂ ಮಕ್ಕಳಲ್ಲಿ ಶೌಕ್ಷಣಿಕ ಒಲವನ್ನು ಹೆಚ್ಚಿಸಲಾಗುವುದುಎಂದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಕಿಶನ ಯಳ್ಳೂರಕರ, ಯಲ್ಲಪ್ಪ ಮೊಹಿತೆ, ಕಿಶನ ರೇಡೆಕರ, ಮನೋಜತುಶಾರ, ಶಾಲೆಯ ಮುಖ್ಯೋಪಾದ್ಯಾಯರು, ಶಿಕ್ಷಕವೃಂದ ಹಾಗೂ ವಿದ್ಯಾಥರ್ಿಗಳು ಉಪಸ್ಥಿತರಿದ್ದರು.