ಲೋಕದರ್ಶನ ವರದಿ
ಹಾವೇರಿ : ಪ್ರಾಣಿಪಕ್ಷಿಗಳು ತಮ್ಮ ಆಹಾರ ಸೇವನೆ ಬಳಿಕ ಕುಡಿಯುವ ನೀರಿಗಾಗಿ ತುಂಬಾ ಪರದಾಡುವ ವ್ಯವಸ್ಥೆಗೆ ಪಯರ್ಾಯವಾಗಿ ಕುಡಿಯುವ ನೀರಿನ ಬಾನಿಗಳನ್ನು ಇಡುವುದರಿಂದ ಅವುಗಳ ನೀರಿನ ದಾಹವನ್ನು ತೀರಿಸಿದಂತಾಗುತ್ತದೆ ಕರುಣಾ ಜೀವ ಕಲ್ಯಾಣ ಟ್ರಸ್ಟ್ನ ವಸಂತಕುಮಾರ ಕಡತಿ ಹೇಳಿದರು.
ನಗರದಲ್ಲಿ ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ಹಲವು ಸ್ಥಳಗಳಲ್ಲಿ ಪ್ರಾಣಿ ಪಕ್ಷಿಗಳಿಗಾಗಿ ಕುಡಿಯುವ ನೀರಿನ ಬಾನಿಗಳನ್ನು ಇಡುವ ಮೂಲಕ ಸಾಮಾಜಿಕ ಕಾರ್ಯವನ್ನು ಉದ್ಘಾಟಿಸಿದರು.
ನಾವೆಲ್ಲರು ಎಲ್ಲಾದರೂ ಕೇಳಿ ಅಥವಾ ಕೊಂಡು ನೀರು ಕುಡಿಯುತ್ತೇವೆ. ಆದರೆ ಪ್ರಾಣಿಗಳಿಗೆ ತುಂಬಾ ತೊಂದರೆಯಾಗುತ್ತದೆ. ಹೀಗಾಗಿ ನಗರದ ಹುಕ್ಕೇರಿಮಠದ ಶ್ರೀ ಸದಾಶಿವ ಮಹಾಸ್ವಾಮಿಗಳು, ವರ್ತಕರಾದ ಪ್ರಭಾಕರರಾವ್ ಮಂಗಳೂರ, ಶಿವರಾಜ ವಳಸಂಗದ ಹಾಗೂ ಸಮಾಜ ಸೇವಕರಾದ ಶಿವಬಸಪ್ಪ ಹಲಗಣ್ಣನವರ ಅವರುಗಳು ಕಾಣಿಕೆಯಾಗಿ ನೀಡಿದ ಹಣದಿಂದ ಬಾನಿಗಳನ್ನು ಇಡಲು ಸಾಧ್ಯವಾಗಿದೆ ಎಂದರು.
ಜಿಗ್ನೇಶ ಪಟೇಲ ಮಾತನಾಡಿ ನಾವು ಗಳಿಸುವ ಹಣದಲ್ಲಿ ಸ್ವಲ್ಪ ಹಣವನ್ನು ಸಮಾಜಮುಖಿ ಕೆಲಸಗಳಿಗಾಗಿ ಉಪಯೋಗಿಸಿದರೆ ಸಾರ್ಥಕವೆನಿಸುತ್ತದೆ. ನಗರದಲ್ಲಿ ನೂರಕ್ಕೂ ಹೆಚ್ಚು ಬಾನಿಗಳನ್ನು ಇಡಲು ಉದ್ದೇಶಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಟ್ರಸ್ಟ್ನ ಕಾರ್ಯಕರ್ತರಾದ ಜುಂಜಪ್ಪ ಕಮತರ, ಸಂತೋಷ ಕುಂಬಾರಿ, ಹನುಮಂತ ಹೊನ್ನಪ್ಪನವರ, ವಿನಾಯಕ ಮುಷ್ಟಗೇರಿ, ಇಫರ್ಾನ ನದಾಫ್, ರಾಜಶೇಖರ ಕೋಲಾರ, ರಮೇಶ ಕಂಡೆಪ್ಪಗೌಡ್ರ, ಮಲ್ಲಿಕಾಜರ್ುನ ನಿವಾಳಕರ, ಹಾಗೂ ಕೇಶವ ಪೂಜಾರಿ ಅನೇಕರಿದ್ದರು