ಅದ್ದೂರಿಯಾಗಿ ನಾಟಕ ವಾರ್ಷಿಕೋತ್ಸವ
Drama anniversary in grand style
ಹುಬ್ಬಳ್ಳಿ 18: ಕರ್ನಾಟಕ ರಾಜ್ಯ ಡಾಕ್ಟರ್ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಹುಬ್ಬಳ್ಳಿ ಪ್ರಾದೇಶಿಕ ಕೇಂದ್ರ. 2025 26 ನೇ ಸಾಲಿನ ಶೈಕ್ಷಣಿಕ ವರ್ಷದ ಸ್ನಾತಕೋತ್ತರ ಪದವಿಯ ನಾಟಕ ವಿಭಾಗದ ನಾಲ್ಕನೆಯ ಚತುರಮಾಸದ ತರಗತಿಯ ನಾಟಕ ಪ್ರದರ್ಶನ ಭಾಗವಾಗಿ ಸಾದರ ಪಡಿಸುತ್ತಿರುವ ನಾಟಕ "ವಾರ್ಷಿಕೋತ್ಸವ" ದಿನಾಂಕ 17ರಂದು ಹುಬ್ಬಳ್ಳಿಯ ಸವಾಯಿ ಗಂಧರ್ವ ಭವನದಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮಕ್ಕೆ ಮಾರ್ಗದರ್ಶಕರು ಮತ್ತು ಮುಖ್ಯ ಅತಿಥಿಗಳಾದ ಕುಲಪತಿಗಳು ಡಾ. ಕೆ ರಾಮಕೃಷ್ಣಯ್ಯ, ಉಪಕುಲಪತಿಗಳು ಎಂ. ಜಿ ಮಂಜುನಾಥ್, ಸೌಮ್ಯಶ್ರೀ ಸಿ ಪಿ, ಮಾರಣ್ಣ ಬಿ ಆರ್, ಡಾ. ಪೂಜಾರ್, ಕುಮಾರಿ ಕ್ಯಾತಾಯ ಇವರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಿದರು. ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿಗಳು ತಮ್ಮ ನಾಟಕಗಳನ್ನು ಪ್ರದರ್ಶಿಸಿದರು. ಒಟ್ಟು ನಾಲ್ಕು ನಾಟಕಗಳು ಪ್ರದರ್ಶನಗೊಂಡವು. ಪ್ರತಿಯೊಂದು ನಾಟಕವು ಅಚ್ಚುಕಟ್ಟಾಗಿ, ಸುಂದರವಾಗಿ ನೆರವೇರಿತು. ಕೊನೆಯ ನಾಟಕ ವಾರ್ಷಿಕೋತ್ಸವ ರಚನೆ ಆಂಟನಿ ಚಕಾಫ್, ಕನ್ನಡಕ್ಕೆ ಪರ್ವತವಾಣಿ, ನಾಟಕ ನಿರ್ದೇಶನ ಲೀಲಾ ಸಿ.. ನಾಟಕದ ಪ್ರಮುಖ ಪಾತ್ರದಲ್ಲಿ ಜೋಸೆಫ್ ಮಲ್ಲಾಡಿ, ಈರಣ್ಣ ಐನಾಪೂರ, ಅನ್ನಪೂರ್ಣ ಮಡಿವಾಳ, ಮಲ್ಲಿಕಾ, ಶ್ವೇತಾ ಪಾಟೀಲ್ ಇದ್ದರು.
ಸ್ಕೈರೂಟ್ ಏರೋಸ್ಪೇಸ್ನ ವಿಕ್ರಮ್-1 ಉಡಾವಣೆ ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಮಹತ್ವದ ಮೈಲುಗಲ್ಲು: ಪ್ರಧಾನಿ ಮೋದಿ
ಜೊಡಿ ಹತ್ಯೆಗೆ ತಿರುವು: ಆಸ್ತಿಗಾಗಿ ಇಬ್ಬರು ಮೈದುನರ ಹತ್ಯೆ ಮಾಡಿಸಿದ ಅತ್ತಿಗೆ : ಪೊಲೀಸ ತನಿಖೆಯಲ್ಲಿ ಬಹಿರಂಗ
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ 