ಬೆಳಗಾವಿ 06: ವ್ಯಕ್ತಿತ್ವದ ವೈಭವೀಕರಣಕ್ಕಿಂತ ಸಾಮಾಜೀಕರಣ ಮುಖ್ಯ ಎನುವ ಜಗದ್ಗುರು ಡಾ. ಪಂಚಮ ಶಿವಲಿಂಗೇಶ್ವರ ಸ್ವಾಮೀಜಿಗಳ ಚಿಂತನೆ ನಾಡಿನ ಭಕ್ತರ ಹೃದಯಕ್ಕೆ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಕೊಡಗು ವಿಶ್ವವಿದ್ಯಾಲಯದ ಪ್ರೊ. ಡಾ. ಎ.ಎಸ್. ಅಲೂರ ಹೇಳಿದರು.
ಸಮೀಪದ ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳಿಗೆ ಗೌರವ ಸಮರೆ್ಣ ಕಾರ್ಯಕ್ರಮ ನಿಮಿತ್ತ ಹಿರಾ ಶುಗರ್ ಮಹಾವಿದ್ಯಾಲಯದಲ್ಲಿ ಸೋಮವಾರ ಜರುಗಿದ ಭವಿಷ್ಯದ ಭಾರತಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ- 2020 ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿ ಬಡವ- ಶ್ರೀಮಂತರೆಂಬ ಭೇದವಿಲ್ಲದೆ ನಾಡಿನ ಭಕ್ತರ ಬದುಕಿನಲ್ಲಿ ಸತ್ಸಂಗದ ಚಿಂತನೆ ಮೂಡಿಸಿ ಮೌಢ್ಯತೆಯ ಅಂಧಕಾರ ದೂರಗೊಳಿಸಿರುವ ಶ್ರೀಗಳ ಕೈಂಕರ್ಯ ವರ್ಣಿಸಲು ಸಾಧ್ಯವಿಲ್ಲ ಎಂದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ಮಾತನಾಡಿ ಯಾವ ಜ್ಞಾನ ಕರ್ಮದ ಅನುಭವಕ್ಕೆ ಬರುವುದಿಲ್ಲವೋ ಆ ಜ್ಞಾನ ವ್ಯರ್ಥ. ಇಂದಿನ ಶಿಕ್ಷಣ ಪದ್ಧತಿ ಕೇವಲ ಸರ್ಟಿಫಿಕೆಟ್ಗಳಿಗೆ ಸೀಮಿತವಾಗಿದೆ. ಕೌಶಲರಹಿತ ಜೀವನದಿಂದ ಭವಿಷ್ಯದಲ್ಲಿ ದೇಶಕ್ಕೆ ಆಪತ್ತು ಎದುರಾಗಲಿದೆ. ನಿಡಸೋಸಿ ಶ್ರೀಗಳ ಸಾಮಾಜಿಕ, ಶೈಕ್ಷಣಿಕ, ಕೃಷಿ ಸಾಧನೆಗಳನ್ನು ಪರಿಗಣಿಸಿ ನೀಡಿದ ಗೌರವ ಡಾಕ್ಟರೇಟ್ ವಿಶ್ವ ವಿದ್ಯಾಲಯದ ಘನತೆಯನ್ನು ಹೆಚ್ಚಿಸಿದೆ ಎಂದರು.
ಜಂಗಮಶೆಟ್ಟಿ ಮಾತನಾಡಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ನಮ್ಮ ಸುತ್ತಲಿನ ಪರಿಸರದ ಕೌಶಲ ಅಭಿವೃದ್ಧಿ ಜತೆಗೆ ದೇಶದ ಇತಿಹಾಸ, ಕಾರ್ಯಕ್ರಮ ಶಿಕ್ಷಣ ನಿಧಿ ಸಾಂಸ್ಕೃತಿಕ, ಸಂಪ್ರದಾಯ, ಜ್ಞಾನ, ವಿಜ್ಞಾನ, ತಂತ್ರಜ್ಞಾನಗಳು ಬೆಳವಣಿಗೆಯಾಗುತ್ತವೆ ಎಂದರು.
ಎಸ್ಜೆಪಿ ಎನ್ ಟ್ರಸ್ಟ್ ಉಪಾಧ್ಯಕ್ಷ ಜಿ.ಎಮ್. ಪಾಟೀಲ, ನಿರ್ದೇಶಕ ರಾಜೇಂದ್ರ ಪಾಟೀಲ, ಬಿ.ಎಲ್. ಖೋತ, ಕಾಶಿನಾಥ ಗುರವ, ಕಾರ್ಯದರ್ಶಿ ಸುರೇಶ ಬೆಲ್ಲದ, ಚಂದ್ರಕಾಂತ ಕೋಠಿವಾಲೆ, ದುಂಡಪ್ಪಗಳಗಿ, ಸಲಹಾ ಸಮಿತಿ ಸದಸ್ಯರು, ಪ್ರಾಚಾರ್ಯರು ಹಾಗೂ ಸಿಬ್ಬಂದಿ ಇದ್ದರು. ಹಿರಾ ಶುಗರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜರುಗಿದ ಉಪನ್ಯಾಸ ಕಾರ್ಯಕ್ರಮದಲ್ಲಿ ನಿಡಸೋಸಿ ಡಾ. ಪಂಚಮ ಶಿವಲಿಂಗೇಶ್ವರ ಶ್ರೀಗಳನ್ನು ಸನ್ಮಾನಿಸಲಾಯಿತು.
ಪ್ರಾಚಾರ್ಯ ಡಾ. ಎಸ್.ಸಿ. ಕಮತೆ ಪ್ರಾಸ್ತಾವಿಕ ಮಾತನಾಡಿದರು.
ನಮ್ಮ ಪ್ರತಿ ಕಾರ್ಯಕ್ಕೂ ಪಂಚಮ ಲಿಂ.ನಿಜಲಿಂಗೇಶ್ವರರು, ಬಸಗೌಡ ಪಾಟೀಲ, ದೇವದಾಸಿ ಸಂಘಟನೆಯ ಲತಾಬಾಯಿ ಹಾಗೂ ಶ್ರೀಮಠದ ಸದ್ಭಕ್ತರು ಸದಾ ಗುರುವಿನ ಸ್ಥಾನದಲ್ಲಿ ನಿಂತು ಪ್ರೇರಣೆಯಾಗಿದ್ದಾರೆ.
-ಡಾ.ಶಿವಲಿಂಗೇಶ್ವರ ಸ್ವಾಮೀಜಿ, ನಿಡಸೋಸಿ ಜಗದ್ಗುರು
ಪೂಜೆ ಮಾಡುವವ ಭಕ್ತನಲ್ಲ, ಕಾಯಕದ ಪೂಜೆ ಸಲ್ಲಿಸುವ ಮೂಲಕ ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಕಾಯಕಯೋಗಿಯಾಗಿದ್ದಾರೆ. ಅವರಿಗೆ ಗೌರವ ಡಾಕ್ಟರೇಟ್ ಪುರಸ್ಕರಿಸಿ ಆರ್ಸಿಯು ಗುರುತರ ಕಾರ್ಯ ಮಾಡಿದೆ.
- ಡಾ. ತೋಂಟದ ಸಿದ್ಧರಾಮ ಮಹಾಸ್ವಾಮೀಜಿ
ಗದಗ ತೋಂಟದಾರ್ಯ ಮಠ
ಬಿ.ಆರ್. ಉಮರಾಣೆ ಪರಿಚಯಿಸಿದರು. ಬಸವರಾಜ ಹಾಲಭಾವಿ, ಆರ್.ಓಂಕಾರ್ಪ, ಭಾವಲಿಂಗಾ ಖೋತ ಹಾಗೂ ಸುನೀತಾ ಬಾಗೇವಾಡಿ ನಿರೂಪಿಸಿದರು.