ಮಾಂಜರಿ 14: ಸಪ್ತಋಷಿಗಳ ತ್ಯಾಗ ಮತ್ತು ಡಾ ಪ್ರಭಾಕರ್ ಕೋರೆ ಇವರ ಪರಿಶ್ರಮದಿಂದ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಮುಖಾಂತರ ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸರ್ವಸಾಮಾನ್ಯ ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸೇವೆ ಸಿಗುವಂತಾಗಬೇಕೆಂದು ಮತ್ತು ಸದೃಢವಾದ ಸಮಾಜ ನಿರ್ಮಾಣವಾಗಬೇಕೆಂದು ಗುರಿ ಇಟ್ಟು ಕಾರ್ಯ ಮಾಡುತ್ತಿರುವ ಡಾ. ಪ್ರಭಾಕರ್ ಕೋರೆಯವರ ಕಾರ್ಯ ಶ್ಲಾಘನೀಯ ವಾಗಿದೆ ಎಂದು ಕೆಎ??? ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಬಿ ಆರ್ ಪಾಟೀಲ್ ಅವರು ಹೇಳಿದರು.
ಅವರು ಬುಧವಾರರಂದು ಚಿಕ್ಕೋಡಿಯ ಡಾಕ್ಟರ್ ಪ್ರಭಾಕರ್ ಕೋರೆ ಆಸ್ಪತ್ರೆ ಮತ್ತು ತುರ್ತು ಚಿಕಿತ್ಸಾ ಘಟಕಕ್ಕೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇವರ ನೀಡಿರುವ ಅತ್ಯಾಧುನಿಕ ಸೌಲಭ್ಯವುಳ್ಳ ಜೀವ ರಕ್ಷಕ ವಾಹನ ಸುಸಜ್ಜಿತವಾದ ಅಂಬುಲೆನ್ಸ್ ಲೋಕಾರ್ಣ ಗಳಿಸಿ ಮಾತನಾಡುತ್ತಿದ್ದರು ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಚಿಕ್ಕೋಡಿಯ ಉಪನಗರ ಅಧ್ಯಕ್ಷರಾದ ಸಂಜಯ್ ಕವಟಿಗಿಮಠ ಮಾಜಿ ಜಿ ಪ ಸದಸ್ಯ ಮಹೇಶ್ ಭಾತೆ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಅಜೀವ ಸದಸ್ಯ ಹಾಗೂ ಅಭಿ ಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರಸಾದ್ ರಾಮಪುರೆ ಅಜಯ್ ಕವಟಗಿ ಮಠ ಚಿಕ್ಕೋಡಿಯ ಪ್ರಭಾಕರ್ ಕೋರೆ ಆಸ್ಪತ್ರೆ ಮತ್ತು ತುರ್ತು ಚಿಕಿತ್ಸಾ ಘಟಕದ ಮುಖ್ಯಸ್ಥರಾದ ದಾ ಧೀರಜ್ ಫೋಳ್ ಹಾಜರಿದ್ದರು
ಕೆಎಲ್‌ಇ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ರಾಜ್ಯಸಭೆಯ ಮಾಜಿ ಸದಸ್ಯರಾದ ಪ್ರಭಾಕರ್ ಕೋರೆ ಇವರ ದೂರ ದೃಷ್ಟಿಯಿಂದ ಗ್ರಾಮೀಣ ಭಾಗದ ಜನರಿಗೆ ಆರೋಗ್ಯವಂತ ಎಲ್ಲ ಸೌಕರ್ಯ ಒಂದೇ ಸೂರಿನಡಿ ಲಭ್ಯವಾಗಬೇಕೆಂದು ಅವರು ಮಾಡಿರುವ ಆರೋಗ್ಯ ಸೇವೆಯ ಕಾರ್ಯ ಪ್ರತಿಯೊಂದು ಗ್ರಾಮೀಣ ಕುಟುಂಬಕ್ಕೆ ದೊರಕಲಿ ಎಂದು ಹಲವಾರು ಕಡೆ ಆರೋಗ್ಯ ಸೇವೆಯನ್ನು ನೀಡುತ್ತಿದ್ದಾರೆ ಎಂದು ಆರೋಗ್ಯ ಸೇವೆಯಲ್ಲಿ ಹಲವಾರು ಸಂಶೋಧನಗಳು ಲಭ್ಯವಿದ್ದು ಸರ್ವ ಸಾಮಾನ್ಯ ಜನರು ಇದರ ಸದುಪಯೋಗ
ಪಡೆದುಕೊಂಡು ಆರೋಗ್ಯವಂತವಾಗಿ ಇರಬೇಕೆಂದು ಬಿ ಆರ್ ಪಾಟೀಲ್ ಹೇಳಿದರು ಅತ್ಯಾಧುನಿಕ ಸೌಲಭ್ಯವುಳ್ಳ ಜೀವ ರಕ್ಷಕ ವಾಹನವನ್ನು ಬಿ ಆರ್ ಪಾಟೀಲ್ ಹಸ್ತದಿಂದ ಲೋಕಾರೆ್ಣ ಮಾಡಲಾಯಿತು.
ಈ ಕಾರ್ಯಕ್ರಮಕ್ಕೆ ಡಾ ಅಭಿಷೇಕ್ ರಾಯಕರ, ಡಾ ಅರವಿಂದ್ ಮಿಂನಚೆ, ಡಾ ಶಂಕರ್ ತೋರಸೇ, ಡಾ ಪ್ರಭಾವತಿ ಮುಗುಳಖೋಡ, ಡಾ ಅಣ್ಣಾ ಫ್ರಾಂಡ್ಡಿಸ್, ಡಾ ವಿ ಡಿ ಪಾಟೀಲ್, ಡಾ ಎಂ ವಿ ಜಾಲಿ, ಪ್ರಶಾಂತ್ ಪೂಜಾರಿ ಹಾಗು ಇನ್ನುಳಿದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು.