ಡಾ. ಕಾಪ್ಸೆ ನಿಧನದಿಂದ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ: ಕಸ್ತೂರಿ

ತಾಳಿಕೋಟಿ 31: ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಸಂಶೋಧಕ ಹಾಗೂ ಹಿರಿಯ ಸಾಹಿತಿಗಳಾದ ಡಾ.ಗುರುಲಿಂಗ ಕಾಪ್ಸೆ ಅವರ ನಿಧನ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹಿರಿಯ ವಕೀಲ ಗಂಗಾಧರ ಕಸ್ತೂರಿ ಅಭಿಪ್ರಾಯ ಪಟ್ಟರು.  

ರವಿವಾರ ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಲಿಂಗೈಕ್ಯ ಡಾ. ಗುರುಲಿಂಗ ಕಾಪ್ಸೆ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ಜಿಲ್ಲೆಯ ಚಡಚಣ ತಾಲೂಕಿನ ಲೋಣಿ ಬಿಕೆ ಗ್ರಾಮದಲ್ಲಿ ಜನಿಸಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದ ಅವರು ಕೇಂದ್ರ ಅಕಾಡೆಮಿಯ ಸದಸ್ಯರು ಆಗಿದ್ದರು ಅವರು ತಮ್ಮ ಅಮೂಲ್ಯ ಕೃತಿಗಳ ಮೂಲಕ ಜಿಲ್ಲೆಗೆ ಕೀರ್ತಿ ತಂದು ಕೊಟ್ಟಿದ್ದರು ಎಂದರು.  

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆರ್‌. ಎಲ್‌. ಕೊಪ್ಪದ ಮಾತನಾಡಿ ಡಾ. ಗುರುಲಿಂಗ ಕಾಪ್ಸೆ ಅವರು ಸಾಹಿತ್ಯ ಸಂಶೋಧನೆ ವಿಮರ್ಶೆ ಕ್ಷೇತ್ರದಲ್ಲಿ ಗಣನೀಯವಾದ ಸೇವೆಯನ್ನು ಸಲ್ಲಿಸಿದರು. ಜನಪದ ಸಾಹಿತ್ಯಕ್ಕೆ ಅವರ ವಿಶೇಷ ಕೊಡುಗೆಯನ್ನು ನೀಡಿದ್ದಾರೆ ಇಂಥಹ ಮೇರು ಸಾಹಿತಿಯನ್ನು ಕಳೆದುಕೊಂಡು ಸಾಹಿತ್ಯ ಕ್ಷೇತ್ರ ಬಡವಾಗಿದೆ ಎಂದರು.  

ಕಸಾಪ ಕೋಶಾದ್ಯಕ್ಷ ರಾಜು ಹಂಚಾಟೆ. ಪದಾಧಿಕಾರಿಗಳಾದ ಡಾ. ನಜೀರ ಕೋಳ್ಯಾಳ.ಸಂತೋಷ ಜಾಮಗೊಂಡಿ. ಸದಸ್ಯರಾದ ಅನಿಲ ಇರಾಜ.ಜಗದೀಶ ಬಿಳೆಭಾವಿ ಮತ್ತೀ ತರರು ಇದ್ದರು.