ಡಾ ಬಿ. ಆರ್. ಅಂಬೇಡ್ಕರವರ ಜಯಂತಿ ಆಚರಣೆ
Dr. B. R. Ambedkar Jayanti Celebration
ಲೋಕದರ್ಶನ ವರದಿ
ಕೊಪ್ಪಳ 15: ವಿಶ್ವಗುರು ಬಸವೇಶ್ವರ ಟ್ರಸ್ಟ್ ಮತ್ತು ಪ್ರವಚನ ಸೇವಾ ಸಮಿತಿ ವತಿಯಿಂದ ಡಾ ಬಿ. ಆರ್. ಅಂಬೇಡ್ಕರವರ ಜಯಂತಿ ಆಚರಣೆ ಮಾಡಲಾಯಿತು.
ಕಂಪ್ಲಿಯ ಹಿರಿಯ ಬಸವಚೇತನ ಮತ್ತು ಮಹಾದಾಸೋಹಿ ಕೆ. ಎಂ. ಹೇಮಯ್ಯಸ್ವಾಮಿಯವರು ಮತ್ತು ಗಣ್ಯರು ಅಂಬೇಡಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು. ವಿಭಾಗೀಯ ಹಿರಿಯ ಕಾನೂನು ಅಧಿಕಾರಿ ಬಿ. ಎಸ್. ಪಾಟೀಲರವರು "ಸಂವಿಧಾನ ಕಾಯಿದೆಗಳು ಹಾಗೂ ನಿಯಮಗಳಲ್ಲಿ ಬಸವತತ್ವಗಳ ಪ್ರಭಾವ" ಕುರಿತಾಗಿ ಮಾತನಾಡಿದರು.
ಕೊಪ್ಪಳ ಗವಿಸಿದ್ಧೇಶ್ವರ ಕಾಲೇಜಿನ ಪ್ರಾಧ್ಯಾಪಕರಾದ ಶರಣಬಸಪ್ಪ ಬಿಳಿಯಲೆಯವರು ಅಂಬೇಡ್ಕರ್ ಜೀವನ ಮೌಲ್ಯಗಳು ಮತ್ತು ಸಾಧನೆಗಳು" ಕುರಿತು ಮಾತನಾಡಿದರು.
ಬಸವಕಲ್ಯಾಣದ ಯೋಗಗುರು ಲೋಕೇಶ ಗುರೂಜಿ, ಶರಣತತ್ವ ಚಿಂತಕ ಅಮರೇಶಪ್ಪ ಬಳ್ಳಾರಿ, ಬಸವತತ್ವ ಅನುಯಾಯಿ ಗಾಳೆಪ್ಪ ಕಡೆಮನಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಂತರ ಪ್ರವಚನ ಯಥಾರೀತಿ ಮುಂದುವರೆಯಿತು.
ಬೆಳಗಾವಿಯ ಜಿಮಖಾನಾ ಕ್ಲಬ್ನಲ್ಲಿ ಗುಂಡಿನ ದಾಳಿ; ವ್ಯಕ್ತಿ ಅದೃಷ್ಟವಶಾತ್ ಪಾರು
ವಾರಾಣಸಿಯ 27 ವರ್ಷದ ಯುವಕನಿಗೆ ಕೋವಿಡ್-19 ದೃಢ; ಬಿಎಚ್ಯು ಆಸ್ಪತ್ರೆಗೆ ದಾಖಲಾತಿ
ಕ್ಷುಲ್ಲಕ ಕಾರಣಕ್ಕೆ ಪಿಕಾಸಿಯಿಂದ ವ್ಯಕ್ತಿಯ ಹತ್ಯೆ : ಖಾನಾಪೂರ ತಾಲೂಕಿನಲ್ಲಿ ಘಟನೆ
ಟ್ರಂಪ್ ನೌಕಾ ದಿಗ್ಬಂಧನ ಕ್ರಮ ಘೋಷಣೆ; ಇರಾನ್ ಮೇಲೆ ಅಮೆರಿಕದ ಮೂರನೇ ರಾತ್ರಿ ದಾಳಿ
ಹೆಚ್ಚಿನ ಬಡ್ಡಿ ಆಮಿಷ, 25.79 ಕೋಟಿ ವಂಚನೆ: ಮುಖ್ಯ ಆರೋಪಿ ಬಂಧನ: ನೊಂದವರು ಮಾಳಮಾರುತಿ ಠಾಣೆಗೆ ಸಂಪರ್ಕಿಸಿ
ಶ್ರೀಮುರಳಿ ಅಭಿನಯದ ‘ಪರಾಕ್’ ಟೀಸರ್ ಬಿಡುಗಡೆ; ಭರ್ಜರಿ ಆ್ಯಕ್ಷನ್ ಮತ್ತು ತೀವ್ರ ಕಥಾಹಂದರದ ಸುಳಿವು 