ಕೊಪ್ಪಳ 16: ನಗರದ ಹೊರವಲಯದಲ್ಲಿರುವ ಸಾಮರ್ಥ್ಯ ಕೇಂದ್ರ ದಲ್ಲಿರುವ ಬಡ ನಿರ್ಗತಿಕ ವಿಶೇಷ ಚೇತನರಿಗೆ ಆರಾಮವಾಗಿ ಚಲನೆಗೆ ಸಹಾಯವಾಗಲು ವಿಶೇಷ ಚೇತನರ ಅನುಕೂಲಕ್ಕಾಗಿ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಸದಸ್ಯರಾದ ಅನಿತಾ ಬಜಾರ್ ಮಠ ರವರು ಸುಮಾರು 18 ಸಾವಿರ ರೂಪಾಯಿ ಮೌಲ್ಯದ ಗಾಲಿ ಕುರ್ಚಿ (ವೀಲ್ ಚೇರ್ )ಮತ್ತು ಗಾಳಿಯಹಾಸಿಗೆ (ಏರ್ ಬೆಡ್)ಯನ್ನು ಕೊಡುಗೆಯಾಗಿ ನೀಡಿ ಮಾನವೀಯತೆಯನ್ನು ಎತ್ತಿ ಹಿಡಿದಿದ್ದಾರೆ.
ನೀರ್ಗತಿಕ ವಿಶೇಷ ಚೇತನರ ಚಲನಶೀಲತೆಯ ಸವಾಲುಗಳನ್ನು ಎದುರಿಸುತ್ತಿರುವವರ ಜೀವನದ ಮೇಲೆ ಬೆಂಬಲ ಬೀರುವ ಸಕರಾತ್ಮಕ ಪರಿಣಾಮವನ್ನು ತೋರಿಸುವ ಕೆಲಸ ಇದಾಗಿದೆ ಇದನ್ನು ಉಪಯೋಗಿಸುವ ಫಲಾನುಭವಿ ವಿಶೇಷ ಚೇತನರು ಗಳಿಗೆ ಸ್ವಾತಂತ್ರ್ಯ ಮತ್ತು ಜೀವನದ ಗುಣಮಟ್ಟವನ್ನು ಗಮನಾರ್ಹವಾಗಿ ಸುಧಾರಿಸುವ ನೀರೀಕ್ಷೆ ಯಿಂದ ಅವರಿಗೆ ಅನುಕೂಲವಾಗಲು ಸದುದ್ದೇಶದಿಂದ ಗಾಲಿ ಕುರ್ಚಿ ಮತ್ತು ಗಾಳಿಯ ಹಾಸಿಗೆಯನ್ನು ಕೊಡುಗೆಯಾಗಿ ವಿತರಿಸಿದ ಅನಿತಾ ಬಜಾರ್ ಮಠ ರವರ ಕಾರ್ಯಕ್ಕೆ ಎಲ್ಲರೂ ಅಪಾರವಾಗಿ ಮೆಚ್ಚುಗೆ ವ್ಯಕ್ತಪಡಿಸಿ ಅವರಿಗೆ ಅಭಿನಂದಿಸಿದ್ದಾರೆ.
ಈ ಸಂದರ್ಭದಲ್ಲಿ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ, ಕಾರ್ಯಕಾರಣಿ ಸಮಿತಿ ಸದಸ್ಯರಾದ ಡಾ, ರಾಧಾ ಕುಲಕರ್ಣಿ ಕ್ಲಬ್ಬಿನ ಸಂಪಾದಕಿ ನಾಗವೇಣಿ ಗರುರ್ ಅಲ್ಲದೆ ಸಮೂಹ ಸಂಸ್ಥೆಯ ಸಂಯೋಜಕರು ಮತ್ತಿತರರು ಪಾಲ್ಗೊಂಡಿದ್ದರು.