ಕಾನಗೋಡಿನಲ್ಲಿ ಹೊಲಿಗೆ ತರಬೇತಿ ಕಲಿಕಾ ಸಾಮಗ್ರಿ ವಿತರಣೆ

ಲೋಕದರ್ಶನ ವರದಿ

ಸಿದ್ದಾಪುರ,15; ತಾಲೂಕಿನ ಕಾನಗೋಡ ಸಮುದಾಯ ಭವನದಲ್ಲಿ ಅರಣ್ಯ ಇಲಾಖೆ, ಗ್ರಾಮ ಅರಣ್ಯ ಸಮಿತಿ ಕಾನಗೋಡ ,ಆಧಾರ ಶಿಕ್ಷಣ,ಸ್ವ-ಉದ್ಯೋಗ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ 2017-18 ನೇ ಸಾಲಿನ ಗ್ರೀನ್ ಇಂಡಿಯಾ ಮಿಷನ್ ಯೋಜನೆಯ ವಿಶೇಷ ಘಟಕ ಯೋಜನೆಯಡಿಯಲ್ಲಿ ನಡೆಯುತ್ತಿರುವ ಹೊಲಿಗೆ ತರಬೇತಿ ಅಭ್ಯಥರ್ಿಗಳಿಗೆ ಕಲಿಕಾ ಸಾಮಗ್ರಿ ವಿತರಿಸಲಾಯಿತು.

ಕಲಿಕಾ ಸಾಮಗ್ರಿ ವಿತರಿಸಿದ  ವಲಯ ಅರಣ್ಯಾಧಿಕಾರಿ ವೈ.ಕೆ.ಕಿರಣಕುಮಾರ ಮಾತನಾಡಿ ಹೊಲಿಗೆ ಮತ್ತು ವಸ್ತ್ರ ವಿನ್ಯಾಸ ಇದು ಒಂದು ಉತ್ತಮವಾದ ಕಲೆ. ಇದರ ತರಬೇತಿಯನ್ನು ಸರಿಯಾಗಿ ಪಡೆದರೆ ಸ್ವ-ಉದ್ಯೋಗ ನಡೆಸುವುದಕ್ಕೆ ಸಾಧ್ಯ. ತರಬೇತಿಯನ್ನು ಅಚ್ಚುಕಟ್ಟಾಗಿ ನಡೆಸುತ್ತಿರುವುದು ಕಂಡುಬರುತ್ತಿದೆ. ತರಬೇತಿಯ ನಂತರ ಅವಕಾಶಗಳಿದ್ದರೆ ಹೊಲಿಗೆ ಯಂತ್ರವನ್ನು ನೀಡಲಾಗುವುದು. ಇದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳುವಂತಾಗಬೇಕು  ಎಂದರು.

ತಾಲೂಕಾ ಪಂಚಾಯತ ಸದಸ್ಯೆ ಭಾಗ್ಯಶ್ರೀ ಶ್ರೀಧರ ನಾಯ್ಕ ಮಾತನಾಡಿ ಅರಣ್ಯ ಇಲಾಖೆ ಆಧಾರ ಸಂಸ್ಥೆಯ ಮೂಲಕ ಸ್ಥಳೀಯವಾಗಿ ಉತ್ತಮವಾಗಿ ತರಬೇತಿ ಆಯೋಜಿಸಿದೆ.ತರಬೇತಿಯ ಪೂರ್ಣ ಪ್ರಯೋಜನ ಪಡೆದು ನಿಮ್ಮ ಕುಟುಂಬಕ್ಕೆ ಆಥರ್ಿಕವಾಗಿ ಸಹಕಾರಿಯಾಗುವಂತಾಗಬೇಕು  ಎಂದರು.

ಆಧಾರ ಸಂಸ್ಥೆಯ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ ಮಾತನಾಡಿ ತರಬೇತಿಯ ಅವಧಿಯಲ್ಲಿ ಹೊಲಿಗೆ ತರಬೇತಿಯೊಂದಿಗೆ ಸ್ವ-ಉದ್ಯೋಗ ನಡೆಸುವುದಕ್ಕೆ ಬೇಕಾಗುವ ಸಮಗ್ರ ಮಾಹಿತಿ ನೀಡಲಾಗುವುದು.ಸಾಲ ಸೌಲಭ್ಯಗಳ ಕುರಿತು ಮಾಹಿತಿ,ಮಾರ್ಗದರ್ಶನ, ಸಮಯದ ನಿರ್ವಹಣೆ ಕುರಿತು ಹಾಗೂ ಇತರ ಕೌಶಲ್ಯಗಳ ಬಗ್ಗೆ ತಿಳಿಸಲಾಗುವುದು. ಒಟ್ಟಾರೆಯಾಗಿ ತರಬೇತಿದಾರರು ಸ್ವಾವಲಂಬನೆಯ ಜೀವನ ನಡೆಸುವುದಕ್ಕೆ ಅಗತ್ಯ ಮಾರ್ಗದರ್ಶನ ನೀಡಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷರಾದ  ಎನ್.ಡಿ.ನಾಯ್ಕ ಮಾತನಾಡಿದರು.ಉಪವಲಯ ಅರಣ್ಯಾಧಿಕಾರಿ ಮಂಜುನಾಥ ಸ್ವಾಮಿ.ಅರಣ್ಯ ರಕ್ಷಕ ಆನಂದ ಶೇಟ್,ತರಬೇತುದಾರರಾದ ಕವಿತಾ ಉಪಸ್ಥಿತರಿದ್ದರು.

ಕು.ಜೀವನ ಜಿ.ದೊಡ್ಮನೆ ಪ್ರಾಥರ್ಿಸಿದರು. ಶಿಬಿರಾಥರ್ಿಗಳು ಧ್ಯೇಯಗೀತೆ ಮತ್ತು ಪರಿಸರ ಗೀತೆ ಹಾಡಿದರು. ನಾಗರತ್ನ ಎಚ್.ನಾಯ್ಕ ಸ್ವಾಗತಿಸಿದರು. ಅಕ್ಷತಾ ಪಿ.ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಲಲಿತಾ ಬಡಗಿ ವಂದಿಸಿದರು.