ಶಿಕ್ಷಣ ಸಾಧನೆ ಮೇರೆಯುತ್ತಿರುವ ದೇವಿಕಾ ಆಂಗ್ಲ, ಕನ್ನಡ ಮಾಧ್ಯಮ ಶಾಲೆ

ಕೆ.ಎಸ್.ನಾಗರಾಜ್

ರಾಣೇಬೆನ್ನೂರು: ವಾಣಿಜ್ಯ ನಗರಕ್ಕೊಂದು ಕಳಸಪ್ರಾಯವಾಗಿ ಸ್ಥಳೀಯ ಗಣೇಶ ನಗರದಲ್ಲಿ ಪ್ರತಿಷ್ಠಾಪನೆಗೊಂಡು ಕಳೆದ 26 ವರ್ಷಗಳಿಂದ ನಿರಂತರವಾಗಿ ಗುಣಮಟ್ಟದ ಶಿಕ್ಷಣ ಸೇವೆ ಮಾಡುತ್ತಾ ಸದ್ದಿಲ್ಲದೆ ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ಶ್ರೀ.ವೆಂಕಟೇಶ್ವರ ವಿದ್ಯಾಸಂಸ್ಥೆಯ ದೇವಿಕಾ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಯು ಜಿಲ್ಲೆಯು ಸೇರಿದಂತೆ ಇದೀಗ ರಾಜ್ಯದಲ್ಲಿಯೇ ಮನೆ ಮಾತಾಗಿ ಕಂಗೊಳಿಸುತ್ತಲಿದೆ.

ಅಂದು 1991 ರಲ್ಲಿ ಸಹಕಾರಿ ತತ್ವದ ನಿಯಮದಡಿಯಲ್ಲಿ ನೊಂದಾಯಿತವಾಗಿ ಕೇವಲ 70 ವಿದ್ಯಾಥರ್ಿಗಳಿಂದ ಆಂಗ್ಲ ಮಾಧ್ಯಮದಿಂದ (ಎಲ್.ಕೆ.ಜಿ ಮತ್ತು ಯು.ಕೆ.ಜಿ) ಆರಂಭವಾಗಿದ್ದ ವಾಣಿಜ್ಯ ನಗರದ ಈ ಪ್ರತಿಷ್ಠಿತ ಶಾಲೆಯು ವರ್ಷದಿಂದ ವರ್ಷಕ್ಕೆ ತನ್ನ ಪ್ರಗತಿ ಕಾಣುತ್ತಾ ಇದೀಗ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳೊಂದಾಅಗಿ ಶಿಕ್ಷಣ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡುತ್ತಾ ಸಾಗಿರುವುದು ಪಾಲಕರ, ನಾಗರೀಕರ ಶಿಕ್ಷಣ ಪ್ರೇಮಿಗಳ ಹೆಮ್ಮೆಯ ಸಂಗತಿ.

ಶ್ರೀ.ವೆಂಕಟೇಶ್ವರ ಸ್ವಾಮಿಯ ದೈವತ್ವವನ್ನು ಪಡೆದಿರುವ ಆಡಳಿತ ಮಂಡಳಿಯ ಸಂಸ್ಥಾಪಕ ಅಧ್ಯಕ್ಷರಾದ, ಹಿರಿಯ ನ್ಯಾಯವಾದಿ ಸಿ.ಆರ್.ಪಾಟೀಲ ಅವರು ತಮ್ಮ ಶಿಕ್ಷಣ ಪ್ರೇಮದ ದೂರದೃಷ್ಟಿಯ ಮೂಲಕ ಹೊಸ ಹೊಸ ಆವಿಷ್ಕಾರಗಳನ್ನು ಶಾಲೆಯಲ್ಲಿ ಅಳವಡಿಸುತ್ತಾ ಸಾಗಿದ್ದಾರೆ. ಇದರಿಂದಾಗಿ ಈ ಸಂಸ್ಥೆಯ ಅಡಿಯಲ್ಲಿರುವ ದೇವಿಕಾ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಯು ಅತ್ಯಂತ ಮಾದರಿಯಾಗಿ ತನ್ನದೇ ಆದ ವೈಶಿಷ್ಟತೆಯ ಮೂಲಕ ಮಕ್ಕಳ ಮತ್ತು ಪಾಲಕರ ವಿಶ್ವಾಸಕ್ಕೆ ಪಾತ್ರವಾಗಿದೆ. 

ಶಿಕ್ಷಣ ಸಂಸ್ಥೆಯು ಕೇವಲ ಮಕ್ಕಳ ಶೈಕ್ಷಣಿಕ ಪ್ರಗತಿ, ಅಂಕಗಳಿಗೆ ಮಾತ್ರ ಸೀಮಿತಗೊಳಿಸಿಕೊಳ್ಳದೇ ಶಿಕ್ಷಣದ ಜೊತೆ ಜೊತೆಗೆ ಭಾರತೀಯ ಸಂಸ್ಕೃತಿ ಪರಂಪರೆಯ ಜನಪದ ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಲಲಿತ ಕಲೆ, ಕ್ರೀಡೆ ಸೇರಿದಂತೆ ಮತ್ತಿತರೆ ವ್ಯಕ್ತಿತ್ವ ಪರಿಪೂರ್ಣ ಪಠ್ಯೇತರ ಚಟುವಟಿಕೆಗಳ ಮೂಲಕ ಸಮಗ್ರ ಮತ್ತು ಪರಿಪೂರ್ಣ ಶಿಕ್ಷಣ ದೊರಕಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿರುವುದು ಇಲ್ಲಿನ ಪ್ರಗತಿಯಿಂದ ಕಾಣಬಹುದಾಗಿದೆ. 

ಸಂಸ್ಥೆ ಆಂಗ್ಲ ಮಾಧ್ಯಮದ ಜೊತೆಗೆ ಕನ್ನಡ ಮಾಧ್ಯಮವು ಸಹ 1994 ರಲ್ಲಿ (1 ರಿಂದ 10 ನೇ ತರಗತಿ) ವರ್ಗಗಳು ನಡೆಸುತ್ತಿದೆ ಹಾಗೂ 2007ನೇ ಇಸ್ವಿಯಲ್ಲಿ ಪಿ.ಯು.ಸಿ ಅವಿಜ್ಞಾನ ವಿಭಾಗ ತೆರೆದು ಈಗ 400 ವಿದ್ಯಾಥರ್ಿಗಳು ಪ್ರಥಮ, ದ್ವಿತೀಯ ಪಿಯುಸಿಯಲ್ಲಿ ಒದುತ್ತಿದ್ದು ಸುಸಜ್ಜತವಾದ ಗ್ರಂಥಾಲಯ, ಪ್ರಯೋಗಾಲಯ, ಕ್ರೀಡಾಂಗಣ, ವರ್ಗದ ಕೊಠಡಿಗಳು ಹಾಗೂ ಇತರ ಎಲ್ಲಾ ಸೌಲಭ್ಯಗಳು ಹೊಂದಿದೆ, ಶಾಲೆಯು ಪಿ.ಯು.ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಗಳಿಸಿದೆ. ಆಡಳಿತ ಮಂಡಳಿಯು ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶ ಹೊಂದಿದ್ದು, ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ನೀಡುತ್ತಾ ಮಕ್ಕಳಲ್ಲಿ ಶೈಕ್ಷಣಿಕ ಪ್ರಗತಿ ಮತ್ತು ಸಾಧನೆಗೆ ಇಲ್ಲಿನ ಸುಂದರ ಪರಿಸರ ವಾತವರಣ ನಿಮರ್ಿಸಿಕೊಟ್ಟಿದೆ.  

ಸಂಸ್ಥೆಯ ಆಡಳಿತ ಮಂಡಳಿಯು ಶಿಕ್ಷಣ ಸಂಸ್ಥೆಗಾಗಿಯೇ 1 ಎಕರೆ 10 ಗುಂಟೆ ವಿಶಾಲ ವ್ಯಾಪ್ತಿಯ ಜಮೀನು ತನ್ನ ಒಡೆತನದಲ್ಲಿ ಪಡೆದಿದೆ ಪ್ರವೇಶದ್ವಾರದಲ್ಲಿ ಆಡಳಿತ ಮಂಡಳಿ ತನ್ನ ಆರಾಧ್ಯ ದೈವವಾದ ಶ್ರೀ.ವೆಂಕಟೇಶ್ವರ ಸ್ವಾಮಿಯ ದೇವಸ್ಥಾನವು ಪ್ರತಿಷ್ಠಾಪಿಸಿದು,್ದ ಮಕ್ಕಳಲ್ಲಿ ಭಕ್ತಿ ಸಂಸ್ಕೃತಿಯನ್ನು ಬಿಂಬಿಸುತ್ತಿರುವುದು ಇಲ್ಲಿನ ವಿಶೇಷತೆಯಾಗಿದೆ. ಮುಂದೆ ಸಾಗಿದರೆ ಮಕ್ಕಳ ಕಣ್ಣಿಗೆ ಗೋಚರಿಸುವುದೇ ಸರಸ್ವತಿ ಮಾತೆಯ ಭವ್ಯ ಶಿಲಾಮೂತರ್ಿಯ ನೋಟ, ಶಾಲಾ ಆವರಣದಲ್ಲಿ ಆಕರ್ಷಕವಾಗಿ ಕಂಗೊಳಿಸುವ ಆಳೇತ್ತರದ ಆಧುನಿಕ ಕಾರಂಜಿ ಸ್ವಾಗತಿಸುತ್ತದೆ. 

ಪರೀಕ್ಷಾ ಫಲಿತಾಂಶ :- ಆಂಗ್ಲ ಮತ್ತು ಕನ್ನಡ ಮಾಧ್ಯಮದ ಶಿಕ್ಷಣದಲ್ಲಿ ವರ್ಷದಿಂದ ವರ್ಷಕ್ಕೆ ಇಲ್ಲಿನ ಮಕ್ಕಳು ತನ್ನ ಅತ್ಯುತ್ತಮ ಶೈಕ್ಷಣಿಕ ಸಾಧನೆಯಲ್ಲಿ ಸಾಗಿದು,್ದ ಪ್ರತಿ ವರ್ಷವು ಅನೇಕ ವಿದ್ಯಾಥರ್ಿಗಳು ಡಿಸ್ಟಿಂಕ್ಸನ್ನಲ್ಲಿ ಪಾಸಾಗಿದ್ದು ಅತೀ ಹೆಚ್ಚು ಡಿಸ್ಟಿಂಕ್ಸನ್ ಪಡೆದು ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶವು ಶೇ ; 98% ರಷ್ಟು ಪ್ರಗತಿ ಸಾಧಿಸಿದ್ದಾರೆ. ಸಂಸ್ಥೆಯಲ್ಲಿ ಸುಸಜ್ಜಿತವಾದ ಆಧುನಿಕದ ಸೌಲಭ್ಯಹೊಂದಿರುವ 60 ವರ್ಗದ ಕೊಠಡಿಗಳು ಇಲ್ಲಿರುವುದು ಈ ಶಾಲೆಯ ವಿಶೇಷತೆಯಲ್ಲೊಂದಾಗಿದೆ. 

ಪ್ರಸ್ತುತ ಶಿಕ್ಷಣ ಸಂಸ್ಥೆಯಲ್ಲಿ ಆಂಗ್ಲ ಮತ್ತು ಕನ್ನಡ ಮಾಧ್ಯಮ ಹಾಗೂ ಕಾಲೇಜು ಸೇರಿ 2100 ಕ್ಕೂ ಹೆಚ್ಚು ಅಧೀಕ ವಿದ್ಯಾಥರ್ಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಅಲ್ಲದೇ ಶಿಕ್ಷಣ ಸೇವೆಯೇ ತಮ್ಮ ಧ್ಯೇಯ ವಾಕ್ಯವೆಂದು ಅನುಸರಿಸಿಕೊಂಡಿರುವ 80 ಕ್ಕೂ ಹೆಚ್ಚು ಪ್ರತೀಭಾವಂತ ಶಿಕ್ಷಕ/ಶಿಕ್ಷಕಿಯರು ಇಲ್ಲಿನ ಮಕ್ಕಳಿಗೆ ತಮ್ಮಲ್ಲಿರುವ ಪರಿಪೂರ್ಣ ಶಿಕ್ಷಣದ ಜ್ಞಾನವನ್ನು ಧಾರೆ ಎರೆಯುತ್ತಾ ಶಿಕ್ಷಣ ದೊರಕಿಸುವಲ್ಲಿ ಮುಂದಾಗಿದ್ದಾರೆ.