ಭ್ರೂಣಲಿಂಗ ಪತ್ತೆಮಾಡುವದು ಶಿಕ್ಷ್ಯಾರ್ಹ ಅಪರಾಧ ಹಿ ಡಿ.ಎಚ್‌.ಓ ಡಾ. ಲಿಂಗರಾಜು ಟಿ.

Determining the sex of the fetus is a punishable offense, says DHO Dr. Lingaraju T.

ಲೋಕದರ್ಶನ ವರದಿ 


ಭ್ರೂಣಲಿಂಗ ಪತ್ತೆಮಾಡುವದು ಶಿಕ್ಷ್ಯಾರ್ಹ ಅಪರಾಧ ಹಿ ಡಿ.ಎಚ್‌.ಓ ಡಾ. ಲಿಂಗರಾಜು ಟಿ. 

ಕೊಪ್ಪಳ  17: ಭ್ರೂಣಲಿಂಗ ಪತ್ತೆಮಾಡುವುದು ಶಿಕ್ಷ್ಯಾರ್ಹ ಅಪರಾಧವಾಗಿದ್ದು ಕೊಪ್ಪಳ ಜಿಲ್ಲೆಯ ಯಾವುದೇ ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಭ್ರೂಣಲಿಂಗ ಪತ್ತೆ ಮಾಡಭಾರದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಲಿಂಗರಾಜು ಟಿ ಹೇಳಿದರು. 

ಅವರು ಗುರುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿಯಲ್ಲಿ ನಡೆದ ಪಿ.ಸಿ ಮತ್ತು ಪಿ.ಎನ್‌.ಡಿ.ಟಿ. ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು. 

ಭ್ರೂಣಲಿಂಗ ಪತ್ತೆ ಮಾಡುವ ವೈದ್ಯರಿಗೆ 3 ರಿಂದ 5 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 10 ರಿಂದ 50 ಸಾವಿರದವರೆ ಪಿ.ಸಿ ಮತ್ತು ಪಿ.ಎನ್‌.ಡಿ.ಟಿ ಕಾಯ್ದೆಯಡಿ ದಂಡ ವಿಧಿಸಲಾಗುತ್ತದೆ. ಮೊದಲ ಅಫರಾದಕ್ಕೆ 5 ವರ್ಷಗಳವರೆಗೆ ಲೈಸೆನ್ಸ್‌ ರದ್ದುಮಾಡಲಾಗುತ್ತದೆ. ಎರಡನೆ ಅಫರಾದಕ್ಕೆ ಜೀವಿತಾವಧಿ ಸ್ಕ್ಯಾನಿಂಗ್ ಕೇಂದ್ರಗಳ ಲೈಸೆನ್ಸಗಳನ್ನು ರದ್ದು ಮಾಡಲಾಗುತ್ತದೆ ಹಾಗಾಗಿ ಯಾರು ಇಂಥಹ ಕೃತ್ಯಗಳಲ್ಲಿ ಭಾಗವಹಿಸಭಾರದು ಎಂದರು. 

ಸಾರ್ವಜನಿಕರಾಗಿದ್ದಲ್ಲಿ 50 ಸಾವಿರದಿಂದ 1 ಲಕ್ಷದವರೆಗೆ ದಂಡ ಮತ್ತು ಮೊದಲ ಅಫರಾದಕ್ಕೆ 3 ವರ್ಷಗಳ ಜೈಲು ಶಿಕ್ಷೆ ಎರಡನೇ ಅಫರಾದಕ್ಕೆ 5 ವರ್ಷಗಳವರೆಗೆ ಜೈಲು ಶಿಕ್ಷೆ ಇದೆ. ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 54 ಸ್ಕ್ಯಾನಿಂಗ್ ಕೇಂದ್ರಗಳಿದ್ದು ಅವುಗಳಿಗೆ ಪ್ರತಿ 3 ತಿಂಗಳಿಗೊಮ್ಮೆ ಭೇಟಿ ನೀಡಿ ತಮ್ಮ ತಂಡದಿಂದ ಪರೀಶೀಲನೆ ನಡೆಸಲಾಗುತ್ತದೆ. ಗುಪ್ತ ಕಾರ್ಯಾಚರಣೆ ಮೂಲಕವು ಪರೀಶೀಲನೆ ಮಾಡಲು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದರು. 

2024-25ನೇ ಸಾಲಿನ 4 ನೇ ತ್ರೈಮಾಸಿಕದಲ್ಲಿ ಜಿಲ್ಲೆಯ ಎಲ್ಲಾ 54 ಸ್ಕ್ಯಾನಿಂಗ್ ಕೇಂದ್ರಗಳಿಗೆ ಭೇಟಿ ನೀಡಲಾಗಿದೆ. 2025- 26 ನೇ ಮೊದಲ ತ್ರೈಮಾಸಿಕದಲ್ಲಿ ಇದುವರೆಗೆ 13 ಸ್ಕ್ಯಾನಿಂಗ್ ಕೇಂದ್ರಗಳಿಗೆ ಭೇಟಿ ನೀಡಲಾಗಿದೆ. ಭ್ರೂಣಲಿಂಗ ಪತ್ತೆ ಮಾಡುವ ಸ್ಕ್ಯಾನಿಂಗ್ ಕೇಂದ್ರಗಳನ್ನು ಪತ್ತೆ ಹಚ್ಚಲು ಗುಪ್ತಕಾರ್ಯಾಚರಣೆ ಮಾಡಲು ಇಂದಿನ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಹೇಳಿದರು. 

ಈ ಸಭೆಯಲ್ಲಿ ಪಿ.ಸಿ ಮತ್ತು ಪಿ.ಎನ್‌.ಡಿ.ಟಿ ಜಿಲ್ಲಾ ಮಟ್ಟದ ಸಲಹಾ ಸಮಿತಿಯ ಅಧ್ಯಕ್ಷರಾದ ಡಾ.ಕೆ.ಹೆಚ್‌. ತೊಗರಿ. ಸಮಿತಿ ಸದಸ್ಯರಾದ ಕಲ್ಯಾಣ ಅಧಿಕಾರಿ ಡಾ. ರವೀಂದ್ರನಾಥ ಎಮ್‌.ಎಚ್‌., ಜಿಲ್ಲಾ ಕುಟುಂಬ, ಮಕ್ಕಳ ತಜ್ಞರಾದ ಡಾ. ಗೀರೀಶ್, ಜಿಲ್ಲಾ ವಾರ್ತಾಧಿಕಾರಿ ಡಾ. ಸುರೇಶ ಜಿ. ಸೇರಿದಂತೆ ಇತರರು ಉಪಸ್ಥಿತರಿದ್ದರು.