ಕೊಪ್ಪಳ: ಪೊಲೀಸ್ ಇಲಾಖೆಯು ಶಾಂತಿ ಮತ್ತು ಸುವಸ್ಯವಸ್ಥೆಯನ್ನು ಕಾಪಾಡುವ ಸಮಾಜದ ಬಹು ಮುಖ್ಯವಾದ ಅಂಗವಾಗಿದೆ ಎಂದು ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಂಜೀವ ವಿ. ಕುಲಕರ್ಣಿ ಅವರು ಹೇಳಿದರು.
ಕೊಪ್ಪಳ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲಾ ಪೊಲೀಸ್ ಕಾರ್ಯಾಲಯದ ಆವರಣದಲ್ಲಿ ಸೋಮವಾರದಂದು ಹಮ್ಮಿಕೊಳ್ಳಲಾಗಿದ್ದ ``ಪೊಲೀಸ್ ಹುತಾತ್ಮರ ದಿನಾಚರಣೆ'' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ದೇಶದ ರಕ್ಷಣೆಗಾಗಿ ಸೈನಿಕರು ಗಡಿ ಭಾಗದಲ್ಲಿ ಕರ್ತವ್ಯ ನಿರ್ವಹಿಸಿದರೆ. ಸಮಾಜದಲ್ಲಿ ಸ್ವಾಸ್ಥ್ಯವಾಗಿ ಜೀವನ ಸಾಗಿಸಲು ನಮ್ಮೆಲ್ಲರಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಪೊಲೀಸ್ ಕಾಯರ್ಾನಿರ್ವಹಿಸುತ್ತಿದೆ. ರಾಷ್ಟ್ರದಾದ್ಯಂತ ಸಾರ್ವಜನಿಕರ ನೆಮ್ಮದಿಗೆ ಧಕ್ಕೆಯಾಗದಂತೆ ಹಗಲಿರುಳು ದುಡಿಯುವ ಪೊಲೀಸರ ಸೇವೆಯು ಶ್ಲಾಘನೀಯವಾಗಿದೆ. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ನಾಗರೀಕರ ಸುರಕ್ಷತೆಗಾಗಿ ಹಗಲಿರುಳು, ತಮ್ಮ ಪ್ರಾಣವನ್ನು ಲೆಕ್ಕಿಸದೇ ದುಡಿಯುತ್ತಿರುವ ಪೊಲೀಸರು ಕರ್ತವ್ಯದ ವೇಳೆಯಲ್ಲಿ ಹುತಾತ್ಮರಾದದ್ದನ್ನು ಸ್ಮರಿಸಿ ವರ್ಷಕ್ಕೊಮ್ಮೆ ಹುತಾತ್ಮರ ದಿನವನ್ನು ಆಚರಿಸಿ, ಗೌರವ ಸಲ್ಲಿಸುತ್ತಿರುವುದು ನಿಜಕ್ಕೂ ಪ್ರಶಂಸನೀಯ. ಕರ್ತವ್ಯದಲ್ಲಿ ಹುತಾತ್ಮರಾದ ಪೊಲೀಸ್ ಅಧಿಕಾರಿ/ ಸಿಬ್ಬಂದದಿಗಳ ಸೇವೆ ಶ್ಲ್ಯಾಘನೀಯವಾಗಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ ಅವರು ಮಾತನಾಡಿ, ಕರ್ತವ್ಯದ ವೇಳೆಯಲ್ಲಿ ಹುತಾತ್ಮರಾದ ಪೊಲೀಸರನ್ನು ಸ್ಮರಿಸುವ ದಿನ ಇಂದು. ದೇಶಕ್ಕಾಗಿ ಪ್ರಾಣವನ್ನು ಅಪರ್ಿಸಿದ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳ ಪೈಕಿ ದೇಶದಲ್ಲಿ 292 ಪೊಲೀಸರು ಹುತಾತ್ಮರಾಗಿದ್ದು, ಇದರಲ್ಲಿ 16 ಜನ ಕನರ್ಾಟಕ ರಾಜ್ಯದವರು ಹಾಗೂ 05 ಜನ ಕೊಪ್ಪಳ ಜಿಲ್ಲೆಯವರಾಗಿದ್ದರೆ ಎಂದರು. ಹಾಗೂ ದೇಶಾದ್ಯಂತ ಹುತಾತ್ಮರಾದ ಪೊಲೀಸರ ಪಟ್ಟಿಯನ್ನು ವಾಚಿಸಿದರು.
ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲೆಯ ಪೊಲೀಸ್ ಅಧಿಕಾರಿಗಳು, ನಿವೃತ್ತ ಪೊಲೀಸ್ ಅಧಿಕಾರಿಗಳು, ಸಿಬ್ಬಂಧಿಗಳು, ಪತ್ರಕರ್ತರು, ಹಲವಾರು ಸಂಘ ಸಂಸ್ಥೆಗಳವರು ಹಾಗೂ ಹಲವು ಗಣ್ಯರು ಸೇರಿ ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಗೌರವ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದರು. ಆರ್.ಪಿ.ಐ. ನಿಂಗಪ್ಪ ಅವರ ನೇತೃತ್ವದ ತಂಡದಿಂದ ಆಕರ್ಷಕ ಕವಾಯಿತು ನಡೆಯಿತು. ಜಿಲ್ಲೆಯ ಹುತಾತ್ಮರಾದ ಪೊಲೀಸರ ಕುಟುಂಬದ ಸದಸ್ಯರನ್ನು ಸನ್ಮಾನಿಸಲಾಯಿತು.