ವೈದ್ಯರ ನಿರ್ಲಕ್ಷ್ಯದಿಂದಾಗಿ ಆಕಳು ಸಾವು: ರೈತರ ಆಕ್ರೋಶ

ಶಿರಹಟ್ಟಿ 17: ಪಶು ಆಸ್ಪತ್ರೆ ಸಿಬ್ಬಂದಿಗೆ ಸತತ ಎರಡು ದಿನ ಚಿಕಿತ್ಸೆ ನೀಡಿದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ. ಇದರಿಂದಾಗಿ ರೈತರು ಪಶು ವೈದ್ಯರ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದರು. 

ಮೇಲಾಧಿಕಾರಿಗಳು ಬರುವವರೆಗೂ ಆಕಳನ್ನು ತೆಗೆದುಕೊಂಡು ಹೋಗುವುದಿಲ್ಲ ಎಂದು ರೈತರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ಧರಣಿಗೆ ಮುಂದಾದರು.ನಂತರ ಗದಗ ಜಿಲ್ಲಾ ಪಶು ಅಧಿಕಾರಿಗಳು ಹಾಗೂ ತಾಲೂಕಾ ಪಂಚಾಯತ ಅಧಿಕಾರಿ ಡಾ. ನಿಂಗಪ್ಪ ಓಲೇಕಾರ ಅವರು ರೈತರ ಆಕಳು ಮೃತಪಟ್ಟಿದ್ದಕ್ಕೆ ಸೂಕ್ತ ಪರಿಹಾರ ಒದಗಿಸಲು ಕ್ರಮ ವಹಿಸುತ್ತೇನೆ ಎಂದು ಪಶು ಆಸ್ಪತ್ರೆಯಲ್ಲಿ ಸೇರಿದ ರೈತರ ಮನವೊಲಿಸಿದಾಗ ರೈತರು ತಮ್ಮ ಧರಣಿ ವಾಪಸ್ ಪಡೆದರು. 

ಈ ಸಂದರ್ಭದಲ್ಲಿ ಪಟ್ಟಣದ ರೈತ ಸಂಘದ ಅಧ್ಯಕ್ಷ ಪ್ರಕಾಶ ಕಲ್ಯಾಣಿ, ಆಕಳು ಕಳೆದುಕೊಂಡ ರೈತ ಆನಂದ ಡಂಬಳ, ಪಿಎ??? ಶಿವಾನಂದ ಲಮಾಣಿ, ಪೋಲೀಸ್ ಸಿಬ್ಬಂದಿ, ಪಶು ಆಸ್ಪತ್ರೆ ಸಿಬ್ಬಂದಿ ಹಾಗೂ ರೈತರು ಇದ್ದರು.