ವಾಷಿಂಗ್ಟನ್, ಏ 16, ಅಮೆರಿಕಾದಲ್ಲಿ ಕೊರೊನಾ ವೈರಸ್ ರೋಗದಿಂದ ಮೃತಪಟ್ಟವರ ಸಂಖ್ಯೆ 30 ಸಾವಿರ ತಲುಪಿದೆ ಎಂದು ಜಾನ್ಸ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.ಪ್ರಸ್ತುತ ಅಮೆರಿಕಾದಲ್ಲಿ ಕೋವಿಡ್- 19 ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 30,844ತಲುಪಿದ್ದು, ಸೋಂಕು ಪ್ರಕರಣಗಳ ಸಂಖ್ಯೆ 6ಲಕ್ಷದ 38 ಸಾವಿರದ 111ಕ್ಕೆ ಏರಿಕೆಯಾಗಿದೆ.ಕಳೆದ 24 ಗಂಟೆಗಳಲ್ಲಿ ಸುಮಾರು 2,500 ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ ಅಮೆರಿಕಾದಲ್ಲಿ ಒಟ್ಟು 52,640 ಮಂದಿ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದೆ.ದೇಶದಲ್ಲಿ ಪರೀಕ್ಷಾ ಸಾಮರ್ಥ್ಯಗಳ ಕೊರತೆ ಟ್ರಂಪ್ ಆಡಳಿತ ವೈಫಲ್ಯವಾಗಿದ್ದು, ಆರ್ಥಿಕತೆಯನ್ನು ಪುನರಾಂಭಿಸುವ ಯೋಜನೆಗಳಿಗೆ ದೊಡ್ಡ ಅಡ್ಡಿಯಾಗುವ ಸಾದ್ಯತೆಯಿದೆ.ದೇಶದ ಆರ್ಥಿಕ ವ್ಯವಸ್ಥೆಯನ್ನು ಪುನರಾಂಭಿಸಲು ನೇಮಿಸಲಾಗಿರುವ ಆರ್ಥಿಕ ಸಲಹಾ ಮಂಡಳಿಯೊಂದಿಗೆ ಬುಧವಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಸಿ ಮೊದಲ ಸಮಾವೇಶದಲ್ಲಿ ದೇಶದಲ್ಲಿ ಕೊರೊನಾ ಪರೀಕ್ಷಾ ವ್ಯವಸ್ಥೆಯ ಅಸಮರ್ಪಕತೆಯ ಬಗ್ಗೆ ಹಲವು ವಾಣಿಜ್ಯ ಉದ್ಯಮಿಗಳು ಅಸಮಧಾನ ವ್ಯಕ್ತಪಡಿಸಿದರು ಸಭೆಯಲ್ಲಿ ಪಾಲ್ಗೊಂಡಿದ್ದ ಗಣ್ಯರೊಬ್ಬರನ್ನು ಉಲ್ಲೇಖಿಸಿ ವರದಿಮಾಡಿದೆ.