ಲೋಕದರ್ಶನವರದಿ
ಶಿಗ್ಗಾವಿ ಃ ನಮ್ಮ ದೇಶವು ವಿಶ್ವಮಾನ್ಯವಾದ ಸಂವಿಧಾನ ಹೊಂದಿದೆ. ಆ ಸಂವಿಧಾನದ ಚೌಕಟ್ಟಿನಡಿಯಲ್ಲಿ ದೇಶದ ಕಾನೂನು ಸ್ಥಾಪಿತವಾಗಿದೆ. ಸಂವಿಧಾನದ ಆಶಯಗಳನ್ನು ಈಡೇರಿಸಲು ಎಲ್ಲರೂ ಬದ್ಧತೆಯಿಂದ ತಮ್ಮ ಪಾಲಿನ ಕೆಲಸವನ್ನು ಮಾಡುವ ಮೂಲಕ ದೇಶದ ಮುನ್ನಡೆಗೆ ತಮ್ಮ ಅಮೂಲ್ಯ ಕಾಣಿಕೆ ನೀಡಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶರಾದ ವಿಜಯಕುಮಾರ ಕನ್ನೂರ ಹೇಳಿದರು.
ಪಟ್ಟಣದ ಜೆಎಮ್ಎಪ್ಸಿ ನ್ಯಾಯಾಲಯದ ಆವರಣದಲ್ಲಿ ತಾಲೂಕ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕ ಆಸ್ತಿಗಳು ಪರಿಸರ ಸ್ವಚ್ಛತೆ ಸರಕಾರಿ ಕಛೇರಿಗಳಲ್ಲಿ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಸಲಹೆ ನೀಡಿದರು.
ದಿವಾಣಿ ನ್ಯಾಯಾಧೀಶರಾದ ಶ್ರೀದೇವಿ ದರಬಾರೆ ಮಾತನಾಡಿ ಜಗತ್ತಿನಲ್ಲಿಯೇ ಶ್ರೇಷ್ಠ ಸಂವಿಧಾನ ನಮ್ಮದಾಗಿದ್ದು, ಆ ಸಂವಿಧಾನದ ಅಡಿಯಲ್ಲಿ ಶ್ರೇಷ್ಠ ಜೀವನ ಸಾಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ತಪ್ಪಿ ನಡೆದರೆ ಅದು ಅಪರಾದವಾಗಿ ಪರಿಣಮಿಸುತ್ತದೆ. ಸಂವಿಧಾನದ ಬಗ್ಗೆ ಅರಿತು ಅಳವಡಿಕೊಳ್ಳುವಂತೆ ಸಲಹೆ ಮಾಡಿದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಬಿ.ಲಕ್ಕಣ್ಣವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿರಿಯ ನ್ಯಾಯವಾದಿಗಳಾದ ಜಿ.ಆಯ್.ಸಜ್ಜನಗೌಡ್ರ, ಜಿ.ಎಸ್.ಅಂಕಲಕೋಟಿ, ಎಫ್.ಎಸ್.ಕೋಣನವರ, ಎಸ್.ಕೆ.ಅಕ್ಕಿ, ಸಂವಿಧಾನದ ಕುರಿತು ಉಪನ್ಯಾಸ ಮತ್ತು ಕಾನೂನು ಸಲಹೆ ನೀಡಿದರು.
ಸಹಾಯಕ ಸಕರ್ಾರಿ ಅಭಿಯೋಜಕ ಜಿ.ಕೆ.ಕುರುಡೀಕೆರೆ, ನ್ಯಾಯವಾದಿಗಳಾದ ಸಿ.ಬಿ.ಪಾಟೀಲ, ಎನ್.ಎನ್.ಪಾಟೀಲ, ಎಸ್.ಎನ್.ಪಾಟೀಲ, ಬಿ.ಎಸ್.ನಲವಾಲ., ಕೆ.ಎನ್.ಭಾರತಿ ಸೇರಿದಂತೆ ನ್ಯಾಯವಾದಿಗಳ ಸಂಘದ ಸದಸ್ಯರು ಸಾರ್ವಜನಿಕರು ಉಪಸ್ಥಿತರಿದ್ದರು. ಬಿ.ಪಿ.ಗುಂಡಣ್ಣವರ ನಿರುಪಿಸಿದರು, ಎಮ್.ಜಿ.ವಿಜಾಪೂರ ಸ್ವಾಗತಿಸಿದರು, ಎಮ್.ಆಯ್ ಗೋಣೆಪ್ಪನವರ ವಂದಿಸಿದರು.