ಎ.24 ರಂದು ಕಾಂಗ್ರೇಸ್ ಕಾರ್ಯಕರ್ತರ ಸಭೆ

Congress workers' meeting on .24

ಸಂಬರಗಿ 23: ಸಂವಿಧಾನ ಭದ್ರತೆ ಹಾಗೂ ಕೇಂದ್ರ ಸರಕಾರದ ಬೆಲೆ ಏರಿಕೆ ವಿರೋಧಿಸಿ ಗುರುವಾರ ಎಪ್ರಿಲ್ 24 ರಂದು ಉಗಾರ ಖುರ್ದದಲ್ಲಿ ಮದ್ಯಾಹ್ನ 1 ಗಂಟೆಗೆ ಕಾಂಗ್ರೇಸ್ ಕಾರ್ಯಕರ್ತರ ಸಭೆ ಏರ್ಪಡಿಸಲಾಗಿದೆ ಎಂದು ಅನಂತಪೂರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಓಂಪ್ರಕಾಶ ಪಾಟೀಲ ತಿಳಿಸಿದರು.  

ಅವರು ಅನಂತಪೂರ ಗ್ರಾಮದಲ್ಲಿ ಮಾಹಿತಿ ನೀಡಿ, ಈ ಸಭೆಗೆ ಶಾಸಕ ರಾಜು ಕಾಗೆ, ದಿಗ್ವೀಜಯ ಪವಾರದೇಸಾಯಿ, ಚಂದ್ರಕಾಂತ ಇಮ್ಮಡಿ, ಎ.ಐ.ಸಿ.ಸಿ ಕಾರ್ಯದರ್ಶಿಗಳಾದ ಗೋಪಿನಾಥ ಪಳನಿಯಪ್ಪನ್, ಉಸ್ತುವಾರಿಯಾದ ಆನಂದ ನ್ಯಾಮಗೌಡರು, ಕಾಗವಾಡ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವಿಜಯ ಅಕ್ಕಿವಾಟೆ ಹಾಗೂ ಕಾರ್ಯಕರ್ತರು ಉಪಸ್ಥಿತ ಇರಬೇಕೆಂದು ತಿಳಿಸಲಾಗಿದೆ.