ಮತದಾರರಿಗೆ ಅಭಿನಂದನಾ ಕಾರ್ಯಕ್ರಮ

ಲೋಕದರ್ಶನ ವರದಿ

ಸಿದ್ದಾಪುರ: ಪಟ್ಟಣದ ಶಂಕರಮಠದಲ್ಲಿ ಪಪಂ ಚುನಾವಣೆಯಲ್ಲಿ ಸಹಕರಿಸಿದ ಕಾರ್ಯಕರ್ತರಿಗೆ ಗೆಲುವಿಗೆ ಕಾರಣರಾದ ಮತದಾರರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಸಿದ್ದಾಪುರ ಪಟ್ಟಣದ ಮತದಾರರು ಭಾರತೀಯ ಜನತಾ ಪಕ್ಷದ ಮೇಲೆ ವಿಶ್ವಾಸವಿಟ್ಟು ಇಲ್ಲಿನ ಪಪಂನ 14 ಸ್ಥಾನಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಪಕ್ಷದ ಕಾರ್ಯಕರ್ತರು ಶ್ರಮ ವಹಿಸಿ ಬಿಜೆಪಿ ಪರವಾಗಿದ್ದ ವಾತಾವರಣವನ್ನ ಸಮರ್ಪಕವಾಗಿ ಉಪಯೋಗಿಸಿಕೊಂಡು ಕೆಲಸ ಮಾಡಿದ್ದಾರೆ ಎಂದು ಶಾಸಕ ವಿಶ್ವೇಶ್ವರ ಹೆಗಡೆಕಾಗೇರಿ ಹೇಳಿದರು.

ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಜನತೆ ನಮ್ಮ ಮೇಲಿಟ್ಟಿರುವ ವಿಶ್ವಾಸಕ್ಕೆ ಜನಪ್ರತಿನಿಧಿಗಳು ಸ್ಪಂದಿಸಬೇಕು. ನಮಗೆ ನೀಡಿದ ಜವಾಬ್ದಾರಿಯನ್ನು ನಿರ್ವಹಿಸಬೇಕು. ಸಾಧ್ಯವಾಗದ ಕೆಲಸಗಳ ಬಗ್ಗೆ ಆಶ್ವಾಸನೆ ನೀಡದೇ ವಸ್ತುಸ್ಥಿತಿಯನ್ನು ಜನರಿಗೆ ಮನದಟ್ಟು ಮಾಡಿಕೊಡಿ ಅಲ್ಲದೇ ಪಕ್ಷ ಸಂಘಟನೆಯನ್ನು ಮರೆಯಬಾರದು ಎಂದು ಸದಸ್ಯರಿಗೆ ಕಿವಿ ಮಾತು ಹೇಳಿದರು.

ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದದ್ದು ನಮಗೆಲ್ಲ ದೊಡ್ಡ ಶಕ್ತಿ ತಂದಿದೆ. ರಾಜ್ಯದ ಅಪವಿತ್ರ ಮೈತ್ರಿ ಸರಕಾರದ ಆಡಳಿತ ಜನರಿಗೆ ಬೇಸರ ಹುಟ್ಟಿಸಿದ್ದು ಈ ಚುನಾವಣೆಯಲ್ಲಿ ಸ್ಪಷ್ಠವಾಗಿದೆ. ಪ್ರತಿ ವಾರ್ಡನಲ್ಲೂ ಜನಸಂಪರ್ಕ ಸಭೆ ನಡೆಸಿ ಕುಂದುಕೊರತೆ ತಿಳಿದುಕೊಂಡು ಇನ್ನಷ್ಟು ಅಭಿವೃದ್ಧಿಗೆ ಮುಂದಾಗಬೇಕಿದೆ. 

ರಾಜ್ಯ ಸರಕಾರ ವಿಕೇಂದ್ರಿಕರಣ ವ್ಯವಸ್ಥೆ ಬಗ್ಗೆ ಸಂಪೂರ್ಣ ನಿರ್ಲಕ್ಷತೋರಿದೆ. ರಾಜ್ಯದ ಹಲವು ಸ್ಥಳೀಯ ಸಂಸ್ಥೆಗಳಲ್ಲಿ ಇದು ವ್ಯಕ್ತವಾಗಿದ.ೆಉದಾಹರಣೆಗೆ ಶಿರಸಿ ನಗರಸಭೆಗೆಆಯ್ಕೆಗೊಂಡ ಸದಸ್ಯರಿಗೆಈವರೆಗೆಜವಾಬ್ದಾರಿ ನೀಡಿಲ್ಲ. ಅಧ್ಯಕ್ಷ, ಉಪಾಧ್ಯಕ್ಷರಆಯ್ಕೆ ಮಾಡಿಲ್ಲ.ನ್ಯಾಯಾಲಯವನ್ನ ಮುಂದೆತೋರಿಸಲಾಗುತ್ತಿದೆ. ನ್ಯಾಯಾಲಯದ ತಪು ್ಪಇದರಲ್ಲಿಲ್ಲ. ಮೀಸಲಾತಿಯಲ್ಲಿ ಗೊಂದಲ ಮಾಡಿದ್ದು ರಾಜ್ಯ ಸರಕಾರದ ತಪ್ಪು. ಜನಕೊಟ್ಟ ತೀಮರ್ಾನಕ್ಕೆ ರಾಜ್ಯ ಸರಕಾರ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿಆಯ್ಕೆಗೊಂಡ ಪಪಂನ 14 ಸದಸ್ಯರನ್ನ, ಚುನಾವಣೆ ನಿರ್ವಹಿಸಿದ ಎಸ್.ಕೆ.ಮೇಸ್ತರನ್ನ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ, ಪಪಂ ಸದಸ್ಯ ಕೆ.ಜಿ.ನಾಯ್ಕ, ಜಿಪಂ ಸದಸ್ಯಎಂಜಿ.ಹೆಗಡೆ, ನಿಕಟಪೂರ್ವಅಧ್ಯಕ್ಷೆ ಸುಮನಾ ಕಾಮತ್ ಮುಂತಾದವರು ಉಪಸ್ಥಿತರಿದ್ದರು.

ತಾಲೂಕ ಬಿಜೆಪಿ ಅಧ್ಯಕ್ಷ ಎಂ.ವಿ.ಭಟ್ಟ ಸ್ವಾಗತಿಸಿದರು.ಜಿಪಂ ಸದಸ್ಯ ನಾಗರಾಜ ನಾಯ್ಕ ಪ್ರಸ್ತಾವಿಕ ಮಾತನಾಡಿದರು. ಸುಧೀರ ಬೆಂಗ್ರೇ ಪ್ರಾಥಿಸಿದರು.