ಭಾಗ್ಯನಗರ ಸಮಗ್ರ ಅಭಿವೃದ್ಧಿಗೆ ಜನಪರ ಸಂಘಟನೆಗಳ ಒಕ್ಕೂಟದಿಂದ ಆಗ್ರಹ

ಭಾಗ್ಯನಗರ ಸಮಗ್ರ ಅಭಿವೃದ್ಧಿಗೆ ಜನಪರ ಸಂಘಟನೆಗಳ ಒಕ್ಕೂಟದಿಂದ ಆಗ್ರಹ  Coalition of pro-people organizations demands comprehensive development of Bhagyanagar

ಕೊಪ್ಪಳ 17:  ಭಾಗ್ಯನಗರ ಪಟ್ಟಣವನ್ನು ಮುಂದಿನ 50 ವರ್ಷಗಳ ದೂರದೃಷ್ಟಿಯೊಂದಿಗೆ ಯೋಜನಾಬದ್ಧವಾಗಿ ಅಭಿವೃದ್ಧಿಪಡಿಸುವಂತೆ ಆಗ್ರಹಿಸಿ ಜನಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಪಟ್ಟಣ ಪಂಚಾಯಿತಿ ಅಧ್ಯಕ್ಷ ರಮೇಶ್ ಹಾಟಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.  

ವೇಗವಾಗಿ ಬೆಳೆಯುತ್ತಿರುವ ಭಾಗ್ಯನಗರ ಹಾಗೂ ನವನಗರ ಪ್ರದೇಶಗಳ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಗೆ ಅಗತ್ಯ ತುರ್ತು ಕಾಮಗಾರಿಗಳನ್ನು ಕೈಗೊಳ್ಳಬೇಕು ಹಾಗೂ ನಾಗರಿಕರ ದೈನಂದಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಒಕ್ಕೂಟದ ಮುಖಂಡರು ಒತ್ತಾಯಿಸಿದರು.  

ಪ್ರಮುಖ ಬೇಡಿಕೆಗಳು  

ರಸ್ತೆ ಅಭಿವೃದ್ಧಿ ಮತ್ತು ಸೂಚನಾ ಫಲಕ ಅಳವಡಿಕೆ:  

ಪಟ್ಟಣದ ಪ್ರಮುಖ ಹಾಗೂ ಒಳರಸ್ತೆಗಳನ್ನು ವೈಜ್ಞಾನಿಕವಾಗಿ ಗುರುತಿಸಿ ರಸ್ತೆ ಅಗಲೀಕರಣ ಹಾಗೂ ಗುಣಮಟ್ಟದ ಡಾಂಬರೀಕರಣ ಮಾಡಬೇಕು. ಸಾರ್ವಜನಿಕರು ಹಾಗೂ ಅಪರಿಚಿತರಿಗೆ ಅನುಕೂಲವಾಗುವಂತೆ ಪ್ರತಿ ವಾರ್ಡ್‌ ಮತ್ತು ಬಡಾವಣೆಗಳಲ್ಲಿ ದಿಕ್ಕು ಸೂಚಕ ಹಾಗೂ ಮಾಹಿತಿ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು.  

ಚರಂಡಿ ಮತ್ತು ಬೀದೀದೀಪಗಳ ನಿರ್ವಹಣೆ:  

ಎಲ್ಲಾ ವಾರ್ಡ್ಗಳ ಚರಂಡಿಗಳಲ್ಲಿ ತುಂಬಿರುವ ಹೂಳನ್ನು ತಕ್ಷಣ ತೆರವುಗೊಳಿಸಿ ಸ್ವಚ್ಛಗೊಳಿಸಬೇಕು. ಚರಂಡಿ ವ್ಯವಸ್ಥೆ ಇಲ್ಲದ ಪ್ರದೇಶಗಳಲ್ಲಿ ಹೊಸ ಚರಂಡಿಗಳನ್ನು ನಿರ್ಮಿಸಬೇಕು. ವಿದ್ಯುತ್ ಉಳಿತಾಯದ ದೃಷ್ಟಿಯಿಂದ ಬೀದೀದೀಪಗಳನ್ನು ಅಗತ್ಯ ಸಮಯದಲ್ಲಿ ಮಾತ್ರ ಬೆಳಗುವಂತೆ ವ್ಯವಸ್ಥೆ ಮಾಡಬೇಕು.