ಶ್ರೀಬಸವೇಶ್ವರ ಕೋ-ಆಪರೇಟಿವ್ ಬ್ಯಾಂಕಿನ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಶ್ರೀಬಸವೇಶ್ವರ ಕೋ-ಆಪರೇಟಿವ್ ಬ್ಯಾಂಕಿನ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ Cleanliness drive organized by Sri Basaveshwara Co-operative Bank

ಬೆಳಗಾವಿ 07: ಕೇಂದ್ರ ಸಹಕಾರ ಸಚಿವಾಲಯವು ಐದು ವರ್ಷ ಪೂರೈಸಿದಿ ನಿಮಿತ್ತ ಸಹಕಾರ ಸಪ್ತಾಹ ಆಚರಣೆ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ಕೇಂದ್ರ ಸಹಕಾರ ಸಚಿವಾಲಯವು ಐದು ವರ್ಷ ಪೂರೈಸಿದ ಸಂದರ್ಭದಲ್ಲಿ "ಸಹಕಾರ ಸಪ್ತಾಯ" ಅಂಗವಾಗಿ ಕರ್ನಾಟಕ ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ಹಾಗೂ ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ನಿ. ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಬೆಳಗಾವಿ ಶ್ರೀ ಬಸವೇಶ್ವರ ಕೋ-ಆಪರೇಟಿವ್ ಬ್ಯಾಂಕ ಲಿ., ಬ್ಯಾಂಕಿನ ವತಿಯಿಂದ “ಸ್ವಚ್ಛತಾ ಕಾರ್ಯಕ್ರಮವನ್ನು ದಿನಾಂಕ 05/07/2026 ರಂದು ರವಿವಾರ ಪೇಟೆಯ ಯಲ್ಲಿ ಯಶಸ್ವಿಯಾಗಿ ಕೈಗೊಳ್ಳಲಾಯಿತು.

ಬ್ಯಾಂಕಿನ ಅಧ್ಯಕ್ಷರಾದ ರಮೇಶ ಕಳಸಣ್ಣವರ ಅವರು ಮಾತನಾಡಿ, ಸ್ವಚ್ಛತೆ ಎಂದರೆ ಕೇವಲ ನಮ್ಮ ಮನೆಯಲ್ಲಿನ ಅಥವಾ ಬೀದಿಯಲ್ಲಿನ ಕಸವನ್ನು ತೆಗೆಯುವುದು ಮಾತ್ರವಲ್ಲ. ಅದು ನಮ್ಮ ಜೀವನದ ಒಂದು ಸಂಸ್ಕೃತಿ. ಶುದ್ಧ ಪರಿಸರವು ಆರೋಗ್ಯಕರ ಸಮಾಜವನ್ನು ನಿರ್ಮಿಸುತ್ತದೆ. ಸ್ವಚ್ಛ ಭಾರತ ಅಭಿಯಾನವು 2014ರಲ್ಲಿ ಪ್ರಾರಂಭಗೊಂಡು, ದೇಶದ ಪ್ರತಿಯೊಂದು ಗ್ರಾಮ, ನಗರ, ಶಾಲೆ, ಕಚೇರಿ ಹಾಗೂ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವ ಗುರಿಯನ್ನು ಹೊಂದಿದೆ. ಎಲ್ಲ ಪ್ರಜೆಗಳು ತಮ್ಮ ಸುತ್ತಮೂತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಮನವಿ ಮಾಡಿಕೊಂಡರುಸ್ವಚ್ಛತಾ ಕಾರ್ಯಕ್ರಮದಲ್ಲಿ ಬ್ಯಾಂಕಿನ ನಿರ್ದೇಶಕರುಗಳಾದ ಬಿ.ವಿ.ಉಪ್ಪಿನ, ಎಸ್‌.ಕೆ.ಪಾಟೀಲ, ಎನ್‌.ಡಿ.ಝಂಡ, ಜೆ.ಎಸ್‌.ಖಡಬಡಿ ಮತ್ತು ಬ್ಯಾಂಕಿನ ಸಿಬ್ಬಂದಿ ವರ್ಗದ ಸಹಯೋಗದೊಂದಿಗೆ ಹಾಗೂ ಪೌರ ಕಾರ್ಮಿಕ ಸಿಬ್ಬಂದಿಗಳೊಂದಿಗೆ ಕೈಗೊಳ್ಳಲಾಯಿತು.