ಶೇಡಬಾಳ 12: 20 ನೇ ಶತಮಾನದ ಪ್ರಥಮಾಚಾರ್ಯ ಶಾಂತಿಸಾಗರ ಮುನಿಮಹಾರಾಜರ 63 ನೇ ಪುಣ್ಯ ತಿಥಿ ಕಾರ್ಯಕ್ರಮ ಶೇಡಬಾಳ ಗ್ರಾಮದಲ್ಲಿ ಶ್ರದ್ಧಾ ಭಕ್ತಿಯಿಂದ ಜರುಗಿತು.
ಮಂಗಳವಾರ ದಿ. 11ರಂದು ಶೇಡಬಾಳ ಗ್ರಾಮದ ಶಾಂತಿ ಸಾಗರ ಆಶ್ರಮದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಸಾನಿಧ್ಯವನ್ನು ಆಯರ್ಿಕಾ 105 ನವೀನವತಿ ಮಾತಾಜಿ ಹಾಗೂ 105 ನೀತಿಮತಿ ಮಾತಾಜಿಯವರು ವಹಿಸಿದ್ದರು.
ಮುಂಜಾನೆ ಆದಿನಾಥ ಭಗವಾನ ಹಾಗೂ 24 ತೀರ್ಥಂಕರರಿಗೆ ಪೂಜಾಭಿಷೇಕ ಕಾರ್ಯಕ್ರಮ ಜರುಗಿತು. 9 ಗಂಟೆಗೆ ಅಂಬಾರಿ ಹೊತ್ತ ಆನೆಯ ಮೇಲೆ ಶಾಂತಿಸಾಗರ ಮುನಿ ಮಹಾರಾಜರ ಭಾವಚಿತ್ರವನ್ನು ಇರಿಸಿ ಗ್ರಾಮದಲ್ಲಿ ಭವ್ಯ ಮೆರವಣಿಗೆ ಮಾಡಲಾಯಿತು. ವಾದ್ಯ ವೈಭವದೊಂದಿಗೆ ಪ್ರಾರಂಭವಾದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಆಶ್ರಮಕ್ಕೆ ಬಂದು ಮುಕ್ತಾಯಗೊಂಡಿತು.
ಶಾಂತಿ ಸಾಗರ ಆಶ್ರಮದ ಸಂಚಾಲಕ ರಾಜು ಕೇಶವ ನಾಂದ್ರೆ, ಕಾರ್ಯದಶರ್ಿ ಭೂಪಾಲ ಗುರುಜಿ, ಜಯಕರ ಮಗದುಮ, ಮಹಾವೀರ ನರಸಗೌಡರ, ಬಾಪು ಪಾಯಪ್ರಪ, ಸಚೀನ ಕುಡಚೆ ಸೇರಿದಂತೆ ಅನೇಕ ಧಾಮರ್ಿಕ ಮುಖಂಡರು, ಆಶ್ರಮ ಮತ್ತು ಶಾಲಾ ವಿದ್ಯಾಥರ್ಿಗಳು ಭಾಗವಹಿಸಿದ್ದರು.
ಪೋಟೋ ಶಿಷರ್ಿಕೆ: 11(ಶೇಡಬಾಳ-2) ಶಾಂತಿಸಾಗರ ಮುನಿಮಹಾರಾಜರ 63 ನೇ ಪುಣ್ಯ ತಿಥಿ ಮೆರವಣಿಗೆಯ ಒಂದು ನೋಟ.