ವಿಜೃಂಭನೆಯಿಂದ ಭಗವಾನ ಮಹಾವೀರ ಜನ್ಮ ದಿನೋತ್ಸವ ಆಚರಣೆ

ಚಿಕ್ಕೋಡಿ 22: ಜೈನ ಧರ್ಮೀಯರಿಂದ ಜಗತ್ತಿಗೆ ಅಹಿಂಸಾ ಮಾರ್ಗವನ್ನು ತೋರಿರುವ, ಭಗವಾನ ಮಹಾವೀರ 2623ನೇಯ, ಜನ್ಮ ದಿನೋತ್ಸವವನ್ನು ನಗರದಲ್ಲಿ  ಅತೀ ವಿಜೃಂಭನೆಯಿಂದ ಆಚರಿಸಿದರು. 

ಜೈನ ಪೇಟೆಯ ಆದಿನಾಥ ಮಂದಿರದಲ್ಲಿ ಬೆಳಿಗ್ಗೆ ಅಭಿಷೇಕ ಪೂಜಾ ವಿಧಾನಗಳನ್ನು ಮುಗಿಸಿ, ಅಲ್ಲಿಂದ ಆರಂಭವಾದ ಪಲ್ಲಕ್ಕಿ ಮತ್ತು ಮಹಾವೀರ ಪ್ರಭುವಿನ ಭಾವಚಿತ್ರದ ಮೆರವಣಿಗೆ, ಮಹಿಳೆಯರ ಝಾಂಜ್ ಪತಕ್ ವಾದ್ಯದೊಂದಿಗೆ, ಅಹಿಂಸಾ ಪರಮೋ ಧರ್ಮ, ಶಾಂತ ಧರ್ಮ, ಜೈನ ಧರ್ಮ, ವಿಶ್ವ ಧರ್ಮ, ಹೀಗೆ ಹಲವಾರು ಘೋಷನೆಗಳೊಂದಿಗೆ,  ಗುರುವಾರ ಪೇಟೆ, ಕಿತ್ತೂರು ಚೆನ್ನಮ್ಮ ರಸ್ತೆ, ಎನ್ ಎಮ್ ರಸ್ತೆ ಮಾರ್ಗವಾಗಿ ಮಹಾವೀರ ನಗರ ಮಂದಿರಕ್ಕೆ ಸೇರಿ, ಅಲ್ಲಿ ಪೂಜೆ ನಡೆಯಿತು. 

ಅಲ್ಲಿಂದ ಬಸ್ ನಿಲ್ದಾಣದ ಹತ್ತಿರ ಮಹಾವೀರ ವೃತ್ತದಲ್ಲಿ ಪೂಜಾ ಮುಗಿಸಿಕೊಂಡು, ಶ್ವೇತಾಂಬರ ಮಂದಿರದ ಮೂಲಕ, ಹೊಸಪೇಟ ಗಲ್ಲಿಯ ಮಂದಿರದಲ್ಲಿ ಪೂಜಾ ಮುಗಿಸಿಕೊಂಡು, ಒತ್ತಾರಿ ಗಲ್ಲಿ ಮೂಲಕ ಜೈನ್ ಪೇಟೆಯ ಆದಿನಾಥ ಮಂದಿರದಲ್ಲಿ ಮೆರವಣಿಗೆ ಮುಕ್ತಾಗೊಂಡಿತು, ಮಧ್ಯಾಹ್ನ ಶ್ರಾವಕ ಶಾವಕಿಯರಿಗಾಗಿ ಭೋಜನದ ವ್ಯವಸ್ಥೆ ನಡೆಯಿತು. 

ವರ್ಧಮಾನ ಸದಲಗೆ, ನ್ಯಾಯವಾದಿ ರಣಜೀತ ಸಂಗ್ರೊಳ್ಳೆ, ದರ್ಶನ ಉಪಾಧ್ಯೆ, ಬಾಹುಬಲಿ ನಸಲಾಪುರೆ, ಡಾ. ಪದ್ಮರಾಜ ಪಾಟೀಲ, ಸಚೀನ ಮೆಕ್ಕಳಕಿ, ರಾಜು ಬೋರಗಾವೆ, ಚಂದ್ರಕಾಂತ ಹುಕ್ಕೇರಿ, ಡಾ ಸಂಜಯ ಪಾಟೀಲ, ರಾಮಚಂದ್ರ ಚೌಗುಲೆ, ಶೀತಲ ಹಜಾರೆ, ರಾಜು ಬಡಬಡೆ, ರಾಜೇಂದ್ರ ಪಾಟೀಲ, ಮಹೇಂದ್ರ ಶಹಾ, ಶೀರೀಶ ಮೆಹತಾ, ಅಮಿತ ಶಹಾ, ರಾಜು ರೋಖಡೆ, ಎಸ್‌.ಟಿ.ಮುನ್ನೋಳಿ, ರಾವಸಾಹೇಬ ಕೇಸ್ತಿ, ಡಾ. ಬಾಬಾಸಾಹೇಬ ಪಾಟೀಲ ಸೇರಿದಂತೆ ನೂರಾರು ಶ್ರಾವಕ ಶ್ರಾವಕಿಯರು ಉಪಸ್ಥಿತರಿದ್ದರು.