ಸಿಪಿಐ ಕೆ. ಹೊಸಕೇರಪ್ಪ ಹೇಳಿಕೆ: ಗಣೇಶ ಚತುರ್ಥಿಯ ಶಾಂತಿ ಸಭೆ

ಹುನಗುಂದ ಪೊಲಿಸ್ ಠಾಣೆಯಲ್ಲಿ ಗಣೇಶೋತ್ಸವ ನಿಮಿತ್ಯ ನಡೆಸಿದ ಶಾಂತಿ ಪಾಳನಾ ಸಭೆಯಲ್ಲಿ ಸಿಪಿಐ ಕೆ. ಹೊಸಕೇರಪ್ಪ ಮಾತನಾಡಿದರ

ಗಣೇಶೋತ್ವಕ್ಕೆ ಕೊರೊನಾ ಕರಿಛಾಯೆ: ಸರಳ ಆಚರಣೆ, ಮೆರವಣಿಗೆ ಡಿಜೆ ನಿಷೇಧ

ಹುನಗುಂದ 01: ಕರೊನೊ 3ನೆಯ ಅಲೆ ಭೀತಿಯಿಂದ ಈ ಬಾರಿ ಗಣೇಶೋತ್ಸವ ಆಚರಣೆಯನ್ನು ತಾಲೂಕಿನ ಜನತೆ ತಮ್ಮ ಮನೆ ಮತ್ತು ದೇವಸ್ಥಾನದಲ್ಲಿ ಮಾತ್ರ ಗಣೇಶನನ್ನು ಪ್ರತಿಷ್ಠಾಪಿಸುವ ಮೂಲಕ ಅತ್ಯಂತ ಸರಳವಾಗಿ ಆಚರಿಸಬೇಕು ಎಂದು ಸಿಪಿಐ ಕೆ.ಹೊಸಕೇರಪ್ಪ ಹೇಳಿದರು.                                        ಪಟ್ಟಣದ ಪೊಲೀಸ್ ಠಾಣಿಯಲ್ಲಿ ಗಣೇಶೋತ್ಸವದ ನಿಮತ್ತ ವಿವಿಧ ಇಲಾಖೆಗಳ ಅಧಿಕಾರಿಗಳು, ಗಣೇಶ ಮಹಾಮಂಡಳಗಳು, ಪೆಂಡಾಲ್ ಮಾಲಿಕರು ಮತ್ತು ವಿವಿಧ ಧರ್ಮಗಳ ಮುಖಂಡರ ಸಮ್ಮುಖದಲ್ಲಿ ನಡೆಸಿದ ಗಣೇಶ ಚತುರ್ಥಿಯ ಶಾಂತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದÀರು. ಕೊವೀಡ್-19 ನಿಯಮಗಳನ್ನು ಪಾಲನೆ ಮಾಡಲು ಘನ ಸರ್ಕಾರ ಸೂಚಿಸಿದ ಮಾರ್ಗಸೂಚಿಗಳನ್ನು ಎಲ್ಲರು ಕಡ್ಡಾಯವಾಗಿ ಪಾಲನೆ ಮಾಡಬೇಕು, ಗಣೇಶ ಸ್ಥಾಪನೆ ಮತ್ತು ವಿಸರ್ಜನೆ ಮಾಡುವ ಸಂದರ್ಭದಲ್ಲಿ ಅಹಿತಕರ ಘಟನೆಗಳಿಗೆ ಆಸ್ಪದ ಕೊಡದೆ ಸೌಹಾರ್ಧಯುತವಾಗಿ ಆಚರಿಸಬೇಕು. ಈ ಬಾರಿ ಸಾರ್ವಜನಿಕ ಸ್ಥಳದಲ್ಲಿ ಗಣೇಶ ಪ್ರತಿಷ್ಠಾಪನೆ, ಮರವಣೆಗೆ, ಬ್ಯಾನರ್, ಪ್ಲೆಕ್ಸ್ ಹಾಕುವುದು, ಡಿಜೆ ಹಚ್ಚವುದು, ಮೋಜು-ಮಜಲು ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಪಿಓಪಿ ಗಣೇಶ ಮೂರ್ತಿ ಸ್ಥಾಪಿಸದೆ ಮಣ್ಣಿನ ಗಣೇಶ ಮೂರ್ತಿ ಸ್ಥಾಪಿಸಬೇಕೆಂದು ಸಿಪೈ ಹೊಸಕೇರಪ್ಪ ತಿಳಿಸಿದರು. ತಾಲೂಕಿನ ಯಾವದೇ ಗ್ರಾಮದಲ್ಲಿ ಗಣೇಶ ಮೂರ್ತಿಯನ್ನು ದೇವಸ್ಥಾನದಲ್ಲಿ ಸ್ಥಾಪಿಸುವ ಮುನ್ನ ಆಯಾ ಗ್ರಾ,ಪಂ ನ ಪಿಡಿಓ ಅಧಿಕಾರಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಒಂದು ದೇವಸ್ಥಾನದಲ್ಲಿ ಒಂದೇ ಗಣೇಶನನ್ನು ಸ್ಥಾಪಿಸಬೇಕು. ಈ ನಿಯಮಗಳನ್ನು ಯಾರಾದರೂ ಉಲ್ಲಂಘಣೆ ಮಾಡಿದರೇ ಅಂತವರ ಮೇಲೆ ನಿರ್ಧಾಕ್ಷಣ್ಯ ಕಾನೂನು ಕ್ರಮ ಕೈಕೊಳ್ಳಲಾಗುವುದು ಎಂದರು.                                         

ಪುರಸಭೆ ಮುಖ್ಯಾಧಿಕಾರಿ ಅಶೋಕ ಪಾಟೀಲ ಮಾತನಾಡಿ ಕೊವೀಡ್ 19 ಸಾಂಕ್ರಾಮಿಕ ರೋಗ ಇನ್ನು ಮಾಸಿಲ್ಲ. ಈ ಬಾರಿಯ ಗಣೇಶ ಚತುರ್ಥಿಯನ್ನು ಅತೀ ಸರಳವಾಗಿ ಮನೆಯಲ್ಲಿ ಆಚರಿಸಬೇಕು. ದೇವಸ್ಥಾನದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿದರೆ ಅಲ್ಲಿ ಮಾಸ್ಕ ಮತ್ತು ಸ್ಯಾನಿಟೈಸರ್ ಇರಿಸುವುದು ಕಡ್ಡಾಯ, ಮೂರ್ತಿ ವಿಸರ್ಜನೆಗೆ ಪಟ್ಟಣದ ಎರಡು ಕಡೆಗೆ ಸ್ಥಳ ವ್ಯವಸ್ಥೆ ಮಾಡಲಾಗುವುದು ಎಂದರು. ಪಿಎಸ್‍ಐ ಶರಣಬಸಪ್ಪ ಸಂಗಳದ, ಶಿರಸ್ತಾದಾರ ಎಂ.ವ್ಹಿ.ಸಂದಿಗವಾಡ, ಹೆಸ್ಕಾಂ ಅಧಿಕಾರಿ ಮಹಾಂತೇಶ ಬಣಾಕದಿನ್ನಿ, ಪಿಡಿಓ ಹುಲ್ಲಪ್ಪ ಆವಿನ ಮಾತನಾಡಿದರು.                                                              ಪುರಸಭೆ ಅಧ್ಯಕ್ಷ ಶರಣು ಬೆಲ್ಲದ, ಪಿಡಿಓಗಳಾದ ಗಂಗಾಧರ ಹನಮಸಾಗರ, ಈರಣ್ಣ ಚಿನಿವಾಲರ, ಎಚ್.ಆಸಂಗಿ, ಮುಖಂಡರಾದ ದೇವು ಡಂಬಳ, ಮಲ್ಲಿಕಾರ್ಜುನ ಲೆಕ್ಕಿಹಾಳ, ಬಸವರಾಜ ಗೊಣ್ಣಾಗರ, ಮತ್ತು ತಾಲೂಕಿನ ಮೂರ್ತಿ ಪ್ರತಿಷ್ಠಾಪಿಸುವ ಸಂಘ ಸಂಸ್ಥೆಯವರು, ಪೆಂಡಾಲ, ಡೇಕೋರೇಟ್, ಡಿಜೆ ಮಾಲೀಕರು ಸೇರಿದಂತೆ ವಿವಿಧ ದರ್ಮಗಳ ಮುಖಂಡರು ಭಾಗಿಯಾಗಿದ್ದರು.