ದಾನಗಳಲ್ಲಿ ರಕ್ತದಾನ ಶ್ರೇಷ್ಠ: ಡಾ. ನದಾಫ

ಲೋಕದರ್ಶ ವರದಿ

ಕಕ್ಕೇರಿ 26: ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿ ಆಗುವುದರ ಜೊತೆಗೆ ಶರೀರದಲ್ಲಿ ಚೈತನ್ಯ ವೃದ್ಧಿಯಾಗಿ ವ್ಯಕ್ತಿಯ ಕಾರ್ಯ ಚಟುವಟಿಕೆಗಳು ಚುರುಕಾಗುತ್ತವೆ ಹಾಗೂ ಜ್ಞಾಪಕ ಶಕ್ತಿ ಕೂಡ ಹೆಚ್ಚುತ್ತದೆ, ಹೃದಯಾಘಾತ ತಡೆಯಲು ಸಹಾಯವಾಗುತ್ತದೆ.

ಪುರುಷರು  ಮೂರು ತಿಂಗಳಿಗೊಮ್ಮೆ ಮತ್ತು ಸ್ತ್ರೀಯರು ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದು ಇಟಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಲೀಮಾ ನದಾಫ  ಹೇಳಿದರು. 

ಖಾನಾಪುರ ತಾಲೂಕಿನ ಇಟಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ರಕ್ತ ದಾನ ಶಿಬಿರದಲ್ಲಿ ಮಾತನಾಡುವ ಸಂದರ್ಭದಲ್ಲಿ ಅವರು ಹೇಳಿದರು.  

ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾಥರ್ಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.  ಈ ಶಿಬಿರದಲ್ಲಿ ಬಹುಸಂಖ್ಯೆಯಲ್ಲಿ ಯುವಕರು  ತುಂಬು ಉತ್ಸಾಹ ದಿಂದ ಭಾಗವಹಿಸಿದ್ದರು.ವೈದ್ಯಾಧಿಕಾರಿ ಡಾ. ಶ್ರೀದೇವಿ ದೊಂಬಾಡಿ, ಡಾ. ಪೂಜಾ ಸೇರಿದಂತೆ ಗ್ರಾ.ಪಂ ಸದಸ್ಯರು, ಆಶಾ ಕಾರ್ಯಕತರ್ೆಯರು, ಆರೋಗ್ಯ ಕಾರ್ಯಕತರ್ೆಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಈಶ್ವರ ಜಿ.ಸಂಪಗಾವಿ, ಕಕ್ಕೇರಿ.