ನೇಸರಗಿಯಲ್ಲಿ ಸಂಭ್ರಮದ ಬಸವ ಜಯಂತಿ ಪ್ರಯುಕ್ತ ಬೈಕ್ ರಾ​‍್ಯಲಿ

Bike rally on the occasion of Basava Jayanti in Nesaragi

ನೇಸರಗಿ 01: ವಿಶ್ವ ಗುರು ಅಣ್ಣ ಬಸವಣ್ಣ  ಅವರ ಜಯಂತಿ ಪ್ರಯುಕ್ತ ನೇಸರಗಿ ಗ್ರಾಮದಲ್ಲಿ ಬೃಹತ್ ಬೈಕ್ ರಾ​‍್ಯಲಿ ಏರಿ​‍್ಡಸಲಾಗಿತ್ತು.  ಬೆಳಿಗ್ಗೆ 10 ಘಂಟೆಗೆ   ವೀರಭದ್ರೇಶ್ವರ  ದೇವಸ್ಥಾನದಿಂದ  ಹೊರಟ ಭವ್ಯ ಬೈಕ್ ಹಾಗೂ ಟ್ರ್ಯಕ್ಟರ್ ರಾ​‍್ಯಲಿ ಅತೀ ಅದ್ದೂರಿಯಿಂದ  ಬಜಾರ ಪೇಟೆ, ಕರ್ನಾಟಕ ಚೌಕ, ಬಸ್ ಸ್ಟ್ಯಾಂಡ, ಎ ಪಿ ಎಮ್ ಸಿ ಮುಖಾಂತರ   ಚನ್ನವೃಷಬೇಂದ್ರ ದೇವರಕೊಂಡ ಅಜ್ಜನವರ ದೇವಸ್ಥಾನದಲ್ಲಿ  ವಿಶ್ವಗುರು ಅಣ್ಣ ಬಸವಣ್ಣ ಅವರ ಜಯಂತಿಯನ್ನು ಎಲ್ಲ ಸಮಾಜದ ಮುಖಂಡರ, ರೈತಾಪಿ ಜನರ ಸಮ್ಮುಖದಲ್ಲಿ ಆಚರಿಸಲಾಯಿತ್ತು. ಈ ಸಂದರ್ಭದಲ್ಲಿ ಗ್ರಾಮದ ಸರ್ವ ಜನಾಂಗದ ಮುಖಂಡರು, ಗ್ರಾಮ ಪಂಚಾಯತ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.