ಶ್ರೀ ಕಲ್ಮೇಶ್ವರ ದೇವಸ್ಥಾನದಲ್ಲಿ ಮಳೆಗಾಗಿ ಪ್ರಾರ್ಥಿಸಿ ಭಜನೆ, ಪೂಜಾ ಕಾರ್ಯಕ್ರಮ
Bhajan and puja rituals at Sri Kalmeshwara Temple to pray for rain
ನೇಸರಗಿ 15: ಮಳೆಗಾಗಿ ಪ್ರಾರ್ಥಿಸಿ ಗ್ರಾಮದ ಕಲ್ಮೇಶ್ವರ ದೇವಸ್ಥಾನದಲ್ಲಿ ದಿ. 14 ರಂದು ರಾತ್ರಿ ಗ್ರಾಮದ ಎಲ್ಲ ಭಜನಾ ಮಂಡಳಿಗಳಿಂದ ಮಳೆಗಾಗಿ ಪ್ರಾರ್ಥಿಸಿ ಭಕ್ತಿ ಭಜನೆ ಜಾಗರಣೆ ನೆರವೇರಿದವು. ಮತ್ತು ದಿ. 15 ರಂದು ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಕಲ್ಲೇಶ್ವರ ಸ್ವಾಮಿಗೆ ಪೂಜಾ ಕಾರ್ಯಕ್ರಮ, ಗಂಗಾ ಪೂಜೆ,ಗಣಪತಿ ಪೂಜೆ, ಉಮಾಮಹೇಶ್ವರರ ಪೂಜೆ ಹಾಗೂ ಮಹಾರುದ್ರಾಭಿಷೇಕ, ಶತ ನಾಮಾವಳಿ,ಮಹಾ ಮಂಗಳಾರತಿ, ಮಹಾಪ್ರಸಾದ ವಿಶೇಷವಾಗಿರುವಂತಹ ಕಾರ್ಯಕ್ರಮಗಳು ಜರುಗಿದವು.
ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ವೇದಬ್ರಹ್ಮ ವಿಶ್ವನಾಥ ಗುರೂಜಿ ವಹಿಸಿದ್ದರು. ಸಂಗಪ್ಪ ಗುಜನಟ್ಟಿ, ಮಹದೇವ ಕಾರಜೋಳ,ಮಲ್ಲಪ್ಪ ಗುಜನಟ್ಟಿ, ಸಿದ್ದಯ್ಯ ಚರಂತಿಮಠ, ಗುರುಪಾದಯ್ಯ ಚರಂತಿಮಠ,ಮಹಾಂತೇಶ ಮರಿಯಪ್ಪನವರ,ಬಸಪ್ಪ ಕಗ್ಗಣಗಿ,ಜಗದೀಶ ಕರಡಿ, ಬಸವರಾಜ ಕಾರಜೋಳ,ಬಸವರಾಜ ಹಾತರಕಿ, ಈರಣ್ಣ ಮೂಲಿಮನಿ,ಗಂಗಪ್ಪ ಗಲಿಬಿ ಮಲ್ಲಿಕಾರ್ಜುನ ಸೋಮಣ್ಣನವರ ಹಾಗು ಗ್ರಾಮದ ಎಲ್ಲ ಸಮಾಜದ ಜನತೆ ಪಾಲ್ಗೊಂಡು ಆ ಭಗವಂತನಲ್ಲಿ ಮಳೆಗಾಗಿ ಪ್ರಾರ್ಥಿಸಿದರು.
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು
ಬೆಳಗಾವಿಯ ಜಿಮಖಾನಾ ಕ್ಲಬ್ನಲ್ಲಿ ಗುಂಡಿನ ದಾಳಿ; ವ್ಯಕ್ತಿ ಅದೃಷ್ಟವಶಾತ್ ಪಾರು
ವಾರಾಣಸಿಯ 27 ವರ್ಷದ ಯುವಕನಿಗೆ ಕೋವಿಡ್-19 ದೃಢ; ಬಿಎಚ್ಯು ಆಸ್ಪತ್ರೆಗೆ ದಾಖಲಾತಿ 