ರಾಣೇಬೆನ್ನೂರಲ್ಲಿ ಅದ್ದೂರಿಯಾಗಿ ನಡೆದ ಭಗೀರಥ ಜಯಂತೋತ್ಸವ ಮೆರವಣಿಗೆ

Bhagirath Jayanthotsava procession held in Ranebennur

ರಾಣೇಬೆನ್ನೂರಲ್ಲಿ ಅದ್ದೂರಿಯಾಗಿ ನಡೆದ ಭಗೀರಥ ಜಯಂತೋತ್ಸವ ಮೆರವಣಿಗೆ  

ರಾಣೇಬೆನ್ನೂರು 05 :  ಭಗೀರಥನು ಇಕ್ಷಾಂಕು ರಾಜವಂಶದ ಓರ್ವ ಪೌರಾಣಿಕ ರಾಜ. ಹಿಂದೂ ನದಿ ದೇವತೆ ಗಂಗಾ ಎಂದು ನಿರೂಪಿಸಲ್ಪಟ್ಟ ಪವಿತ್ರ ನದಿಗೆ ಗಂಗೆಯನ್ನು ಸ್ವರ್ಗದಿಂದ ಭೂಮಿಗೆ ತಂದವನು ಭಗೀರಥ ಸಗರನ ಮೊಮ್ಮಗ ಭಗೀರಥನ ಇತಿಹಾಸ ಬಹುದೊಡ್ಡದಿದೆ, ಉಪ್ಪಾರ ಜನಾಂಗವು ಭವಿಷ್ಯದ ಯುವಕರು ಇತಿಹಾಸವನ್ನು ತಿಳಿದು ಮುನ್ನಡೆಯಬೇಕಾದ ಇಂದಿನ ಅಗತ್ಯವಿದೆ ಎಂದು ಶ್ರೀ ಭಗೀರಥ ಉಪ್ಪಾರ ಸಮಾಜ ಸೇವಾ ಸಮಿತಿಯ ಉಪಾಧ್ಯಕ್ಷ ನಾಗರಾಜ ಉಪ್ಪಾರ ಹೇಳಿದರು. ಅವರು ರವಿವಾರ, ಗಾಂಧಿಗಲ್ಲಿ ಉಪ್ಪಾರ ಓಣಿಯಲ್ಲಿ ಸಮಾಜ ಸೇವಾ ಸಮಿತಿಯು ಆಯೋಜಿಸಿದ್ದ 14ನೇ ವಾರ್ಷಿಕೋತ್ಸವ ಮತ್ತು ಶ್ರೀ ಭರಮದೇವರ ಮೂರ್ತಿ ಪ್ರತಿಷ್ಠಾಪನೆ ಧಾರ್ಮಿಕ  ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.      ಸಮುದಾಯದ ಗಣತಿಯಲ್ಲಿ, ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳು, ಈಗ ಘೋಷಿಸಿದಂತೆ 7 ಲಕ್ಷ ವಲ್ಲ. ನೈಜವಾಗಿ ಉಪ್ಪಾರ  ಸಮುದಾಯವು  ರಾಜ್ಯದಲ್ಲಿ 25 ಲಕ್ಷಕ್ಕೂ ಹೆಚ್ಚು ಜನರಿದ್ದಾರೆ. ವಾಸ್ತವಿಕತೆ ಎಂದಿಗೂ ಮರೆಮಾಚಬಾರದು ಎಂದು ಕಿಡಿಕಾರಿದರು.   ಸಮುದಾಯದ ಸಂಘಟನೆ ಇಂದಿನ ಅಗತ್ಯವಾಗಿದ್ದು, ಭವಿಷ್ಯದ ಮಕ್ಕಳಿಗೆ ಪರಿಪೂರ್ಣ ಶಿಕ್ಷಣ ನೀಡುವ ಕೆಲಸ ನಡೆಯಬೇಕು ಸಮಾಜದ ನಾಗರಿಕರು ಜಾಗೃತರಾಗಬೇಕು ಎಂದು ಅವರು ಕರೆ ನೀಡಿದರು.    ಜಯಂತೋತ್ಸವವೂ ಪ್ರತಿ ವರ್ಷ ತಾಲೂಕ ಆಡಳಿತ, ಸ್ಥಳೀಯ ಸಮಿತಿಯೊಂದಿಗೆ ಸೇರಿ ಆಚರಿಸುವ ಪರಿಪಾಠವಿದೆ. ಆದರೆ ತಾಲೂಕ ಆಡಳಿತ, ಸಭೆ ಕರೆಯದೆ, ಕೆಲವರಿಗೆ ಮಾತ್ರ ಆಮಂತ್ರಿಸಿ  ನೆಪ ಮಾತ್ರಕ್ಕೆ ಆಚರಿಸಿದಂತಾಗಿದೆ ಮುಂದಿನ ದಿನಮಾನಗಳಲ್ಲಿ ಸರಿಪಡಿಸಿಕೊಳ್ಳಬೇಕು ಎಂದರು.   ಉಪ್ಪಾರ ಸಮಾಜ ಸೇವಾ ಸಮಿತಿ ಗೌರವಾಧ್ಯಕ್ಷ ಕೆ.ಎಲ್‌. ಉಪ್ಪಾರ ಅವರು ಭವ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಮಾಜದ ಯುವ ಪ್ರತಿಭೆ, ಕವಿವಿ ಡಾಕ್ಟರೇಟ್ ಪದವಿ ಪಡೆದ ಡಾ. ಮಧುಮತಿ ಗೀರೀಶ್ ಮುರಗೋಡ ಅವರೊ ಸೇರಿದಂತೆ ಸಮಾಜದ ಗಣರಾಜ್ಯ  ಚಂದ್ರಶೇಖರ ಉಪ್ಪಾರ, ಹೊನ್ನಪ್ಪ ಉಪ್ಪಾರ, ಹನುಮಂತಪ್ಪ ಉಪ್ಪಾರ, ಶ್ರೀಮತಿ ಪಾರ್ವತಿ ಎನ್‌. ಬೆಳಗಾಂಕರ್, ಚಂದ್ರಶೇಖರ ಉಪ್ಪಾರ, ಶ್ರೀಮತಿ ಸುಮಿತ್ರಾ ಉಪ್ಪಾರ ಮೊದಲಾದವರನ್ನು  ಸಮಾಜದ ಪರವಾಗಿ ಅಭಿನಂದಿಸಿ ಗೌರವಿಸಲಾಯಿತು.  ವೇದಿಕೆಯಲ್ಲಿ ಮುಖಂಡರಾದ ಫಕೀರ​‍್ಪ ಶಿಡಗನಾಳ, ಬಸವರಾಜ ಉಪ್ಪಾರ, ಶಂಕರ್ ಉಪ್ಪಾರ, ತಿಮ್ಮೆಶ್ ಉಪ್ಪಾರ,  ಚಂದ್ರು ಉಪ್ಪಾರ, ಕಾರ್ಯದರ್ಶಿ ಅಮೋಘ ಕೆ. ಉಪ್ಪಾರ, ಖಜಾಂಚಿ  ಮಂಜುನಾಥ್ ಉಪ್ಪಾರ, ಮತ್ತಿತರರು ಉಪಸ್ಥಿತರಿದ್ದರು. ಸಮಾರಂಭ ಮುನ್ನಾ, ನಗರದ ಶ್ರೀ ಆದಿಶಕ್ತಿ ದೇವಸ್ಥಾನ ಆವರಣದಿಂದ, ಶ್ರೀ ಭಗೀರಥ ಮಹಾರಾಜರ ಭವ್ಯ ತೈಲ ಭಾವಚಿತ್ರದ ಭವ್ಯ ಮೆರವಣಿಗೆಯು ನಡೆದು, ದೇವಸ್ಥಾನ ಆವರಣದಲ್ಲಿ ಸಾಂಗ ಮಂಗಲಗೊಂಡಿತು. ಭೂಮಿಕಾ ಸಂಗಡಿಗರು ಪ್ರಾರ್ಥಿಸಿದರು. ಪ್ರಶಾಂತ್ ಉಪ್ಪಾರ ಸ್ವಾಗತಿಸಿ ನಿರೂಪಿಸಿದರು. ಕಾರ್ಯದರ್ಶಿ ಅಮೋಘ ಉಪ್ಪಾರ ವಂದಿಸಿದರು.ಊ4-ಖಓಖ07-ಓಇಘಖ. ಂಓಆ. ಫೋಟೋ.