ಬಳ್ಳಾರಿ: ತೊಗಲುಗೊಂಬೆ, ಭರತನಾಟ್ಯ ಕಾರ್ಯಕ್ರಮ

ಲೋಕದರ್ಶನ ವರದಿ

ಬಳ್ಳಾರಿ 15: ಪ್ರಾಚೀನ ಕಾಲದಿಂದಲೂ ತೊಗಲುಗೊಂಟೆಯಾಟ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿರುವ ಕಲಾವಿದರು ನಿಜವಾಗಲೂ ಪ್ರಶಂಸನಾರ್ಹರು. ಈಗಿನ ಸರ್ಕಾರ ಈ ಕಲೆಯನ್ನು ಹಲವಾರು ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳಲ್ಲಿ ಸಹ ಬಳಸಿಕೊಳ್ಳುತ್ತಿರುವುದು ಅತ್ಯಂತ ಖುಷಿಯ ಸಂಗತಿ ಎಂದು ಕೊಳಗಲ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಮ್ಮನಹಳ್ಳಿ ಹುಲೆಪ್ಪ ಅಭಿಪ್ರಾಯಪಟ್ಟರು. 

ಕೊಳಗಲ್ಲು ಗ್ರಾಮದ ಎರ್ರಿತಾತನವರ ಮಠದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಸುಬ್ಬಣ್ಣ ಮತ್ತು ತಂಡದ ತೊಗಲುಗೊಂಬೆ ಕಲಾ ಸಂಘ ಹಾಗೂ ಕುಮಾರಿ ಎಸ್.ಅಭಿನಯ ಮತ್ತು ಶ್ರೇಯ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾವಣ ಸಂಹಾರ ತೊಗಲುಗೊಂಬೆ ರೂಪಕ ಮತ್ತು ಭರತನಾಟ್ಯ ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿ ಮಾತನಾಡಿ, ಪ್ರಸ್ತುತ ಚಲನಚಿತ್ರ ನಿಮರ್ಾಣದ ಪರಿಕಲ್ಷನೆ ಕೂಡ ತೊಗಲುಗೊಂಟೆಯಾಟವೇ ಪ್ರೇರಣೆಯಾಗಿದೆ ಎಂದು ವಿಶ್ಲೇಷಿಸಿದರು. 

ಕಾರ್ಯಕ್ರಮವನ್ನು ತಾಲೂಕು ಪಂಚಾಯಿತಿ ಸದಸ್ಯ ಊಳೂರು ಭೋಗರಾಜ್ ಡಮರುಗ ಭಾರಿಸುವ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ತಾ.ಪಂ ಮಾಜಿ ಅಧ್ಯಕ್ಷ ಕೆ.ಮಲ್ಲೇಶಪ್ಪ, ಹೊಟೆಲ್ ಕೆ.ವೀರನಗೌಡ ಯುವ ಮುಖಂಡರು, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಜಿಲ್ಲಾಧ್ಯಕ್ಷರಾದ ಯು.ಎರ್ರಿಸ್ವಾಮಿ, ಕಾಂಗ್ರೆಸ್ ಮುಖಂಡರಾದ ಕೆ.ಬಿ.ಅಂಜಿನಿ, ಕಾಮನಾಳ್ ವೀರನಗೌಡ ಭಾಗವಹಿಸಿದ್ದರು. ಮತ್ತು ಗ್ರಾಮದ ನೂರಾರು ಜನರು ಕಾರ್ಯಕ್ರಮದಲ್ಲಿ ಪ್ರೆಕ್ಷಕರಾಗಿ ಭಾಗವಹಿಸಿದ್ದರು.