ಬಳ್ಳಾರಿ: ಬಳ್ಳಾರಿ ಶಾಖೆಗೆ ಅತ್ಯುತ್ತಮ ಪ್ರಶಸ್ತಿ

ಲೋಕದರ್ಶನ ವರದಿ

ಬಳ್ಳಾರಿ 22: ಭಾರತೀಯ ಚಾರ್ಟರ್ಡ್  ಅಕೌಂಟೆಂಟ್ಸ್ ಸಂಸ್ಥೆಯ ದಕ್ಷಿಣ ಭಾರತ ಪ್ರಾದೇಶಿಕ ಮಂಡಳಿಯ 51ನೇ ಸಮ್ಮೇಳನದಲ್ಲಿ ಬಳ್ಳಾರಿ ಶಾಖೆಗೆ ಅತ್ಯುತ್ತಮ ಪ್ರಶಸ್ತಿ ಲಭಿಸಿದೆ. 

ಈ ಕುರಿತು ಮಾಹಿತಿ ನೀಡಿರುವ ಬಳ್ಳಾರಿ ಶಾಖೆಯ ಪದಾಧಿಕಾರಿಗಳು, 18 ಮತ್ತು 19ರಂದು ಕೊಚ್ಚಿಯಲ್ಲಿ ಲುಲು ಬೋಳಗಟ್ಟಿ ಇಂಟರ್ ನ್ಯಾಷನಲ್ ಕನ್ವೆಕ್ಷನ್ ಸೆಂಟರ್ ನಲ್ಲಿ ನಡೆದ ಈ ಸಮ್ಮೇಳನದಲ್ಲಿ ಬಳ್ಳಾರಿಯಿಂದ 19 ಸದಸ್ಯರು ಪಾಲ್ಗೊಂಡಿದ್ದರು. 

ಅತ್ಯುತ್ತಮ ಶಾಖೆ ಪ್ರಶಸ್ತಿಯನ್ನು ವಿದ್ಯಾರ್ಥಿ  ವಿಭಾಗವು ಸ್ವೀಕರಿಸಿತು. ಆಡಳಿತ ಮಂಡಳಿಯ ಸದಸ್ಯರಾದ ಸಿಎ.ಮಾಜಿ ಅಧ್ಯಕ್ಷ ಸಿ.ಎರ್ರಿಸ್ವಾಮಿ, ವಿದ್ಯಾರ್ಥಿ  ಘಟಕದ ಮಾಜಿ ಅಧ್ಯಕ್ಷ ಸಿಎ.ಸಿದ್ದರಾಮೇಶ್ವರ ಗೌಡ, ಮಾಜಿ ಖಜಾಂಚಿ ಸಿಎ.ಬಾಲಾಜಿ ಬಂಡ್ರಿ, ಸದಸ್ಯ ಸಿಎ.ರಾಜೇಶ್ ಬಾಗ್ರೇಚ, ಅಧ್ಯಕ್ಷರು ಸಿಎ.ಕಿರಣ್ ಕುಮಾರ್ ಜೈನ್, ಉಪಾಧ್ಯಕ್ಷರು ಸಿಎ.ಹೊನ್ನೂರಸ್ವಾಮಿ, ಕಾರ್ಯದರ್ಶಿ  ಸಿಎ.ಪ್ರಸನ್ನಕುಮಾರ ಪಾಟೀಲ್ ಹೆಚ್.ಎಸ್.ಖಜಾಂಚಿಯಾದ ಸಿಎ. ವಿನೋದ್ ಕುಮಾರ್.ಬಿ, ಮತ್ತು ದಕ್ಷಿಣ ಭಾರತ ಪ್ರಾಂತೀಯ ಪರಿಷತ್ನ ಸದಸ್ಯ ಸಿಎ.ಪನ್ನರಾಜ್ .ಎಸ್ ಇವರಿಗೆ ಬಳ್ಳಾರಿ ಶಾಖೆಯ ಎಲ್ಲಾ ಸದಸ್ಯರಿಗೆ ಅಭಿನಂದಿಸಲಾಗಿದೆ.