ಬಸವಣ್ಣನವರ ಆದರ್ಶ-ತತ್ವಗಳು ನಮಗೆಲ್ಲಾ ದಾರಿ-ದೀಪ: ಶಾಸಕ ನಾರಾ ಭರತ್ ರೆಡ್ಡಿ

Basavanna's ideals and principles are a guiding light for all of us: MLA Nara Bharat Reddy

ಬಳ್ಳಾರಿ 01:  ಸಾಂಸ್ಕೃತಿಕ ನಾಯಕ, ಜಗಜ್ಯೋತಿ ಬಸವಣ್ಣನವರ ಆದರ್ಶ-ತತ್ವಗಳು ಇಂದು ನಮಗೆಲ್ಲಾ ದಾರಿ-ದೀಪವಾಗಿವೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.ಬುಧವಾರ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಏರಿ​‍್ಡಸಿದ್ದ 892ನೇ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಬಸವಾದಿ ಶರಣರೆಲ್ಲರ ವಚನ ತತ್ವ ಪ್ರಸಾರಕ್ಕಾಗಿ ಬಸವ ಸಂಗಮ ಎಂಬ ಹೆಸರಿನಡಿ ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಪ್ರಮುಖ ಸ್ವಾಮೀಜಿಗಳಿಂದ, ಪ್ರವಚನಕಾರರಿಂದ ರಾಜ್ಯಮಟ್ಟದ ಪ್ರವಚನ ಕಾರ್ಯಕ್ರಮವನ್ನು ಬಳ್ಳಾರಿಯಲ್ಲಿ ಏರಿ​‍್ಡಸಲಾಗುವುದು ಎಂದು ತಿಳಿಸಿದರು.ಬಸವ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಿದ್ದೇವೆ. ನಗರದಲ್ಲಿ ಆಶ್ವಾರೂಢ ಬಸವಣ್ಣನವರಪುತ್ಥಳಿ ಹಾಗೂ ವೃತ್ತ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ವಚನ ಹೇಳುವ ಮೂಲಕ ತತ್ವಾದರ್ಶದ ಬದುಕಿಗೂ ಸಿದ್ಧ, ಸಮಯ ಬಂದರೆ ಆಶ್ವಾರೂಢ ಬಸವಣ್ಣನ ಹಾಗೆ ಶರಣರ ರಕ್ಷಣೆಗೆ ಶಸ್ತ್ರ ಹಿಡಿಯಲು ಕೂಡ ಈ ಸಮಾಜ ಸಿದ್ದ ಎಂದು ಅಭಿಮತ ವ್ಯಕ್ತಪಡಿಸಿದರು.ವೀರಶೈವ ಲಿಂಗಾಯತ ಮಠಗಳಿಂದಾಗಿ ಇಂದು ರಾಜ್ಯದ ಲಕ್ಷಾಂತರ ಜನ ಅಕ್ಷರಸ್ಥರಾಗಿದ್ದಾರೆ.  

ರಾಜ್ಯದ ಮಠಗಳ ಸ್ವಾಮೀಜಿಗಳು ಭಿಕ್ಷೆ ಬೇಡಿ ಎಲ್ಲ ಸಮುದಾಯದ ಜನರಿಗೆ ಶಿಕ್ಷಣ ನೀಡಿದ್ದಾರೆ. ಅದರಿಂದಾಗಿ ನಾವೆಲ್ಲ ಇಂದು ಬದುಕು ಕಟ್ಟಿಕೊಂಡಿದ್ದೇವೆ ಎಂದರು.ಕೊಟ್ಟೂರು ಶ್ರೀ ಬಸವಲಿಂಗಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ ಬಸವಣ್ಣ ಎಲ್ಲರಿಗೂ ಸೇರಿದ ವ್ಯಕ್ತಿ. ಎಲ್ಲಾ ಕೆಳ ವರ್ಗದ ಜನರನ್ನು ಮೇಲೆತ್ತಿದ ಮಹಾ ಮಹಿಮರು ಎಂದು ಹೇಳಿದರು.ಬಳ್ಳಾರಿಯ ಬಸವತತ್ವ ಚಿಂತಕರಾದ ಡಾ.ರವಿಶಂಕರ್ ಅವರು ಬಸವೇಶ್ವರ ಜಯಂತಿ ಕುರಿತು ವಿಶೇಷ ಉಪನ್ಯಾಸ ನೀಡಿದರು. ಬಳ್ಳಾರಿಯ ಕೆ.ದೊಡ್ಡಬಸವ ಗವಾಯಿ ತಂಡದಿಂದ ವಚನ ಸಂಗೀತ ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ವಿಶೇಷ ಸಾಧನೆಗೈದ ಸಮುದಾಯದ ಗಣ್ಯರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ರಾಷ್ಟ್ರೀಯ ಬಸವದಳದ ಗೌರವಾಧ್ಯಕ್ಷ ಸಿರಿಗೇರಿ ಪನ್ನರಾಜ್ ಸೇರಿದಂತೆ ಮಹಾನಗರ ಪಾಲಿಕೆಯ ಸದಸ್ಯರು, ಸಮುದಾಯದ ಮುಖಂಡರು ಹಾಗೂ ಅನೇಕರು ಉಪಸ್ಥಿತರಿದ್ದರು.