ಬಸಪ್ಪ ವಿ. ಭೂಮರಡ್ಡಿ ಅವರ 140ನೇ ಜಯಂತಿ

Basappa V. Bhumaraddy's 140th birth anniversary

ಹುಬ್ಬಳ್ಳಿ 11: ಉತ್ತರ ಕರ್ನಾಟಕ ಭಾಗದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಉದಾರ ದೇಣಿಗೆ ನೀಡಿದ ಬಸವಾದಿ ಶರಣರ ದಾಸೋಹ ಪರಂಪರೆಯನ್ನು ಅಳವಡಿಸಿಕೊಂಡಿದ್ದ ಶಿಕ್ಷಣ ದಾಸೋಹಿ ಶ್ರೀ ಬಸಪ್ಪ ವಿ. ಭೂಮರಡ್ಡಿ ಅವರ 140ನೇ ಜಯಂತಿ ನಿಮಿತ್ತ ಕೆ.ಎಲ್‌.ಇ ಸಂಸ್ಥೆಯ ಬಿ.ವಿ.ಭೂಮರಡ್ಡಿ ಮಹಾವಿದ್ಯಾಲಯದ ಆವರಣದಲ್ಲಿರುವ, ಶಿಕ್ಷಣ ಪ್ರೇಮಿಗಳು, ಶ್ರೇಷ್ಟ ದಾನಿಗಳು, ಖ್ಯಾತ ಆಯಿಲ್ ಕಿಂಗ್ ಎಂದೆ ಹೆಸರಾಗಿದ್ದ, ಉದ್ದಮಿಗಳು, ಪರಮಪೂಜ್ಯರಾದ ಶ್ರೀ  ಬಸಪ್ಪ ವಿ. ಭೂಮರಡ್ಡಿ ಅವರ ಆತ್ಯಾಕರ್ಷಕವಾದ ಕಂಚಿನ ಪುತ್ಥಳಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಪುಷ್ಪಾರ್ಪಣೆ  ಮಾಡುವ ಮೂಲಕ ಗೌರವ ಅರ್ಪಣೆ ಮಾಡಿ, ನಮನಗಳನ್ನು ಸಲ್ಲಿಸಲಾಯಿತು.  

ಬಸಪ್ಪ ವಿ. ಭೂಮರಡ್ಡಿ  ಅವರು ಮಾಡಿದ ಸೇವಾ ಕಾರ್ಯಗಳನ್ನು ಸ್ಮರಿಸಲಾಯಿತು. ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಗಣ್ಯರು, ಮುಂತಾದವರು ಉಪಸ್ಥಿತರಿದ್ದರು.