ರಾಷ್ಟ್ರೀಯ ಹೆದ್ದಾರಿಯ ವಿವಿದೆಡೆ ವಾಹನ ನಿಲುಗಡೆ ನಿಷೇಧಿಸಿ
Ban vehicle parking at various locations along the national highway
ಲೋಕದರ್ಶನ ವರದಿ
ಕಾರವಾರ ಜು.6 : ಜಿಲ್ಲೆಯಲ್ಲಿ ಮುಂಗಾರು ಮಳೆಯ ಪರಿಣಾಮ ಭೂಕುಸಿತದಿಂದ ಸಂಭವಿಸಬಹುದಾದ ಅವಘಡಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಈ ಮುಂದಿನ ಪ್ರದೇಶಗಳಲ್ಲಿ ಜುಲೈ 6 ರಿಂದ ಮಳೆಗಾಲ ಮುಕ್ತಾಯವಾಗುವವರೆಗೆ ಎಲ್ಲಾ ತರಹದವಾಹನಗಳ ನಿಲುಗಡೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಆದೇಶಿಸಿದ್ದಾರೆ.
ನಿಷೇಧಿತ ಪ್ರದೇಶಗಳು: ಕಾರವಾರ ತಾಲೂಕು ರಾ.ಹೆ.-66 ರ, ಕಾರವಾರ ಲಂಡನ್ ಬ್ರಿಡ್ಜ್ನಿಂದ ಬಿನಾಗಾದ ಸುರಂಗದ ಅಂತ್ಯದವರೆಗೆ ಎರಡೂ ಬದಿಯ ಚತುಷ್ಪ್ಪಥ ಹೆದ್ದಾರಿ ಮಾರ್ಗ (750 ಮೀ), ಅರ್ಗಾದಲ್ಲಿರುವ ಸಂಕ್ರುಭಾಗ ಘಟ್ಟದ ಎಡಬದಿ (100 ಮೀಟರ್ ವ್ಯಾಪ್ತಿ). ಅರ್ಗಾದಲ್ಲಿನ ಸಂಕ್ರುಬಾಗ್ ಜಿ.ಕೆ. ರಾಮ ಕ್ವಾರಿಯ ಹತ್ತಿರ 100 ಮೀಟರ್ ವರೆಗೆ.
ಅಂಕೋಲಾ ತಾಲೂಕು ಚತುಷ್ಪ್ಪಥರಸ್ತೆಯ ಶಿರೂರು ಗ್ರಾಮದಲ್ಲಿ ಐ.ಆರ್.ಬಿ ರವರು ಗುಡ್ಡ ಕೊರೆದ ಸ್ಥಳ (1 ಕಿ.ಮೀ ವ್ಯಾಪ್ತಿ), ಚತುಷ್ಪ್ಪಥ ರಸ್ತೆಯ ಬೆಳ್ಳೆನ್ ರೇಲ್ವೆ ಬ್ರಿಡ್ಜ್ನಿಂದ ಕುಮಟಾ ಕಡೆಗೆ (1 ಕಿ.ಮೀ ವ್ಯಾಪ್ತಿ).
ಹೊನ್ನಾವರ ತಾಲೂಕು (ರಾ.ಹೆ.-66 ಮತ್ತು ರಾ.ಹೆ.-69): ಕ್ಲಾಸಿಕ್ ವೈನ್ಶಾಪ್ ಎದುರಿಗೆ ಗುಣಗುಣಕೇರಿ (30 ಮೀಟರ್).ಪ್ರಮೀಳಾ ರೆಸ್ಟೋರೆಂಟ್ ಹತ್ತಿರ (30 ಮೀಟರ್).ಮೂಡಕಣಿ (ಖರ್ವಾ ಕ್ರಾಸ್) ಹತ್ತಿರ (30 ಮೀಟರ್). ಸೂಳೆಮೂರ್ಕಿ ಕ್ರಾಸ್ ಹತ್ತಿರ (30 ಮೀಟರ್).ಕರ್ಕಿನಾಕಾ ಹತ್ತಿರ (30 ಮೀಟರ್).
ಕುಮಟಾ ತಾಲೂಕು ದಿವಗಿ ಹತ್ತಿರ (200 ಮೀಟರ್), ದುಂಡಕುಳಿ ಹತ್ತಿರ (200 ಮೀಟರ್). ಶಿರಸಿ ತಾಲೂಕು (ರಾ.ಹೆ.-766ಇ): ವೆಂಕಟೇಶತೀರ್ಥ ತಿರುವು ಹತ್ತಿರ (100 ಮೀಟರ್), ಮೊಸಳಗುಂಡಿ ಸೇತುವೆ ಹತ್ತಿರ (100 ಮೀಟರ್), ಬಂಡಲ ಘಾಟ್ ಮುಂಗನ ರಸ್ತೆ ಕ್ರಾಸ್ ಹತ್ತಿರ (50 ಮೀಟರ್), ದೇವಿಮನೆ ಕಲ್ಲು ಹೊಳೆ ಹತ್ತಿರ (100 ಮೀಟರ್).
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ 