ಬ್ಯಾಡಗಿ 20 :ಬ್ಯಾಡಗಿ ತಾಲ್ಲೂಕಿನ ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ರಮೇಶ ಹನುಮಂತಪ್ಪ ಬಾಲಮ್ಮನವರ ಉಪಾಧ್ಯಕ್ಷರಾಗಿ ಮಲ್ಲಪ್ಪ ಫಕ್ಕೀರ್ಪ ಕರೇಣ್ಣನವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಕಛೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕೇವಲ ಎರಡು ನಾಮಪತ್ರಗಳು ಮಾತ್ರ ಸಲ್ಲಿಸಲ್ಪಟ್ಟಿದ್ದವು. ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ಲೋಕೇಶಕುಮಾರ ಕಾರ್ಯ ನಿರ್ವಹಿಸಿದರು .ಈ ಸಂದರ್ಭದಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀಮತಿ ಶಿಲ್ಪಾ ಗುತ್ತಲ ಯಮುನಪ್ಪ ಹರಿಜನ, ನಿರ್ದೇಶಕರಾದ ಡಿ ಎನ್ ಅಲ್ಲಾಪುರ, ಎಸ್ ಎನ್ ಮಾಸಣಗಿ, ಶ್ರೀಮತಿ ಮಂಗಳಾ ಗೊರವರ, ಸಿ ಬಿ ಕಾಕೋಳ ಎಮ್ ಎನ್ ಮಲ್ಲಾಡದ, ಬಿ ಸಿ ಮಾಕಳ್ಳಿ, ಎಮ್ ವೈ ಸಾಳುಂಕೆ,ಕಾರ್ಯದರ್ಶಿಗಳಾದ ಎಚ್ ವೈ ಓಲೇಕಾರ, ಸುರೇಶ ಬ್ಯಾಡಗಿ, ಮಾಲತೇಶ ರಾಣೇಬೆನ್ನೂರ ಸೇರಿದಂತೆ ಹಲವರು ಹಾಜರಿದ್ದರು.