ಹಾವೇರಿ 11 : ತುರ್ತು ಅಪರೇಶನ್ ಸಿಂದೂರ ಕಾರ್ಯಚರಣೆಯ ಕರ್ತವ್ಯಕ್ಕೆ ಮರು ಹಾಜರಾಗುವಂತೆ ಭಾರತೀಯ ಸೇನೆಯಿಂದ ಕರೆಬಂದ ಹಿನ್ನಲೆಯಲ್ಲಿ ಹಾವೇರಿ ನಗರದ ಇಬ್ಬರು ಯೋಧರು ಕರ್ತವ್ಯಕ್ಕೆ ಹಾಜರಾಗಲು ಶನಿವಾರ ಸಂಜೆ ಪ್ರಯಾಣ ಬೆಳೆಸಿದರು.ಹಾವೇರಿ ನಗರದ ಬಿಸಿಎಫ್ ಯೋಧ ಶಶಾಂಕ್ ಹಾಗೂ ಸಿಆರ್ಿಎಫ್ ಯೋಧ ಸಂಜೀವ ಸಂಗೂರ ಅವರು ರಜೆಯ ಪ್ರಯುಕ್ತ ತಮ್ಮ ಊರುಗಳಿಗೆ ಆಗಮಿಸಿದ್ದರು.
ಕಳೆದ ಕೆಲ ದಿನಗಳಿಂದ ಈಚೆಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಸ್ಥಿತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಶತ್ರು ರಾಷ್ಟ್ರದ ಕುತಂತ್ರ ನೀತಿಯನ್ನು ಹಿಮ್ಮೆಟ್ಟಿಸುವುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಹೊಣೆಯಾಗಿದೆ. ಈ ಹಿನ್ನಲೆ ಭಾರತೀಯ ಸೇನೆಯು ರಜೆಯಲ್ಲಿರುವ ಸೈನಿಕರಿಗೆ ತುರ್ತಾಗಿ ಅಪರೇಶನ್ ಸಿಂದೂರ ಕಾರ್ಯಾಚರಣೆಯ ಕರ್ತವ್ಯಕ್ಕೆ ಹಾಜರಾಗುವಂತೆ ಸಂದೇಶ ಬಂದಿದ್ದರಿಂದ ಹಾವೇರಿಯ ಸೈನಿಕರು ಕರ್ತವ್ಯಕ್ಕೆ ಹಾಜರಾಗಲು ಪ್ರಯಾಣವನ್ನ ಬೆಳೆಸಿದರು ಈ ಹಿನ್ನಲೆಯಲ್ಲಿ ನಮ್ಮ ಹಾವೇರಿ ಜಿಲ್ಲೆಯ ಹಾವೇರಿ ನಗರದ ಇಬ್ಬರು ಯೋಧರಾದ ಜಮ್ಮು ಮತ್ತು ಸಿ.ಆರಿ್ಪ.ಎಫ್,ದೆಹಲಿ ಇವರುಗಳು ಶನಿವಾರ ಸಂಜೆ 6-10 ಕ್ಕೆ ಹಾವೇರಿಯ ಮೈಲಾರ ಮಹದೇವಪ್ಪ ರೈಲು ನಿಲ್ದಾಣದ ಮೂಲಕ ರೈಲಿನಲ್ಲಿ ಮರಳಿ ಕರ್ತವ್ಯ ಕ್ಕೆ ತರಳುತ್ತಿದ್ದು ,ಅವರಿಗೆ ಹಾವೇರಿ ಜಿಲ್ಲೆಯ ಜನತೆ ಆತ್ಮೀಯವಾಗಿ,ಆತ್ಮಸ್ಥೆರ್ಯ ತುಂಬಿ, ಬೀಳ್ಕೊಟ್ಟರು