ಭಾರತೀಯ ಸಂಸ್ಕೃತಿ ಉಳಿಸುವಲ್ಲಿ ಬಿ.ಎ.ಜೆ.ಎಸ್‌.ಎಸ್‌. ಸೇವೆ ಶ್ಲಾಘನೀಯ: ಡಾ. ಮರುಳಸಿದ್ದ ಸ್ವಾಮೀಜಿ

ಭಾರತೀಯ ಸಂಸ್ಕೃತಿ ಉಳಿಸುವಲ್ಲಿ ಬಿ.ಎ.ಜೆ.ಎಸ್‌.ಎಸ್‌. ಸೇವೆ ಶ್ಲಾಘನೀಯ: ಡಾ. ಮರುಳಸಿದ್ದ ಸ್ವಾಮೀಜಿ B.A.J.S.S.'s service in preserving Indian culture is commendable: Dr. Marulasidda Swamiji

ರಾಣೇಬೆನ್ನೂರು 12 : ತಾಂತ್ರಿಕತೆ, ಆಧುನಿಕತೆಯ ಭರಾಟೆಯಲ್ಲಿ ಭಾರತೀಯ ಹಲವು  ಸಂಸ್ಕೃತಿಗಳು ನಶಿಸುವ ಸಂದರ್ಭದಲ್ಲಿ ಬಿ.ಎ.ಜೆ.ಎಸ್‌.ಎಸ್‌. ಶಿಕ್ಷಣ ಸಂಸ್ಥೆಯು ಭಾರತೀಯ ಶ್ರೇಷ್ಠ ಸಂಸ್ಕೃತಿಯ ಪುನರುತ್ತಾನ ಕಾರ್ಯಮಾಡುತ್ತಿರುವದು ಶ್ಲಾಘನೀಯವಾಗಿದೆ ಎಂದು ವೀರಾಪೂರ ಹಿರೇಮಠದ ಡಾ. ಮರುಳಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನುಡಿದರು. ಅವರು ರಾಣೇಬೆನ್ನೂರಿನ ಬಿ.ಎ.ಜೆ.ಎಸ್‌.ಎಸ್‌. ಶಿಕ್ಷಣ ಸಂಸ್ಥೆಯಟಲ್ಲಿ ಜರುಗಿದ ಕೋಟಿ ಗಾಯತ್ರಿ ಮಹಾಯಜ್ಞದ ಇಪ್ಪತ್ತನೇ ವಾರ್ಷಿಕೋತ್ಸವದ ದಿವ್ಯ ಸಾನಿಧ್ಯ ವಹಿಸಿ ಆರ್ಶಿವಚನ ನೀಡಿದರು.ಸಮಾರಂಭದ ಆರಂಭದಲ್ಲಿ ಪ್ರಾಸ್ತಾವಿಕ ನುಡಿಯನ್ನು ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿಗಳಾದ ಡಾ. ಆರ್‌.ಎಂ.ಕುಬೇರ​‍್ಪನವರು ಮಾತನಾಡುತ್ತಾ, ಗ್ರಾಮೀಣ ಜನರ, ದೀನ ದಲಿತರ, ಶೋಷಿತರ ಪರವಾಗಿ ಸ್ಥಾಪಿತವಾದ ಬಿ.ಎ.ಜೆ.ಎಸ್‌.ಎಸ್‌. ಶಿಕ್ಷಣ ಸಂಸ್ಥೆಯು ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಹೆಮ್ಮೆಇದೆ. ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುವ ಯೋಜನೆ ಇದೆ ಎಂದು ನುಡಿದರು. 

ಕರ್ನಾಟಕ ರಾಜ್ಯ ಸರಕಾರದ ವಿಧಾನ ಸಭೆಯ ಉಪಾಧ್ಯಕ್ಷರು ಹಾಗೂ ಬಿ.ಎ.ಜೆ.ಎಸ್‌.ಎಸ್‌. ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ರುದ್ರ​‍್ಪ ಲಮಾಣಿಯವರು ಮಾತನಾಡುತ್ತಾ ಗುರು ಹಿರಿಯರ ಕೃಪಾಶಿರ್ವಾದದಿಂದ   ನಮ್ಮ ಶಿಕ್ಷಣ ಸಂಸ್ಥೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಹಾಗೂ ಸಂಸ್ಕಾರಯುತ ಜೀವನ ನಡೆಸಲು ಮಾರ್ಗದರ್ಶನ ನೀಡುತ್ತಿರುವುದಾಗಿ  ತಿಳಿಸಿದರು. ಹುಲಿಕೇರಿಯ ಬಸವರಾಜ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕುಪ್ಪೂರಿನ ತೇಜಶ್ವರ ಶಿವಾಚಾರ್ಯ ಮಹಾ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಜರುಗಿದ ಸಮಾರಂಭದಲ್ಲಿ ಬಿ.ಎ.ಜೆ.ಎಸ್‌.ಎಸ್‌. ಸಮೂಹ  ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ  ಸದಸ್ಯರು, ವಿವಿಧ ಶಾಲಾ ಹಿ ಕಾಲೇಜುಗಳ ಪ್ರಾಚಾರ್ಯರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 

ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ಕೃಷಿ ಪಂಡಿತ ಪುರಸ್ಕೃತ ಶಂಕರಗೌಡ ಚನ್ನಬಸನಗೌಡ ಪಾಟೀಲ, ರಾಣೇಬೆನ್ನೂರ ತಾಲೂಕ ಬ್ರಾಹ್ಮಣ ಸಮಾಜದ ಅಧ್ಯಕ್ಷ  ಗೋವಿಂದ ನಾರಾಯಣಾಚಾರ್ ಚಿಮ್ಮಲಗಿ,  ನಗರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪುಟ್ಟ ಗುಡ್ಡಪ್ಪ ಮರಿಯಮ್ಮನವರ, ಗ್ರಾಮಾಂತರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಚಂದ್ರ​‍್ಪ ಬೇಡರ  ಇವರನ್ನು ಹಾಗೂ ಬಿ.ಎ.ಜೆ.ಎಸ್‌.ಎಸ್‌. ಸಮೂಹ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಯವರಲ್ಲಿ ನಿವೃತ್ತರಾದವರಿಗೆ, ಪಿ.ಎಚ್‌.ಡಿ. ಪದವಿ ಮತ್ತುಇತರೆ ಪ್ರಶಸ್ತಿ ಪಡೆದವರಿಗೆ ಹಾಗೂ ಸಂಸ್ಥೆಯ ವಿವಿಧ ಶಾಲಾ ಕಾಲೇಜುಗಳಲ್ಲಿ  2025-26 ನೇ ಸಾಲಿನಲ್ಲಿ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತಡಾ. ಕೆ.ಸಿ. ನಾಗರಜ್ಜಿಯವರು ಪ್ರಾರ್ಥನೆಯೊಂದಿಗೆ ಆರಂಭವಾದ ಸಮಾರಂಭದ ಆರಂಭದಲ್ಲಿ ಪ್ರಾಚಾರ್ಯರಾದ ಡಾ. ಸುರೇಶ ಬಣಕಾರ ಸ್ವಾಗತಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಬೀರೇಶ ಚೌಡಣ್ಣನವರ ಕೊನೆಯಲ್ಲಿ ಉಪನ್ಯಾಸಕರಾದ ಮಮತಾ ಓಲೇಕಾರ ವಂದಿಸಿದರು.ಸಂಸ್ಥೆಯ ಆವರಣದಲ್ಲಿಯ ಗಾಯತ್ರಿದೇವಿ ಮಂದಿರದಲ್ಲಿ ಅರ್ಚಕ ಪ್ರಧಾನರ ಸಮುಖದಲ್ಲಿ ಗಾಯತ್ರಿ ಮಹಾಯಜ್ಞ ಹಾಗೂ ಸಕಲರಿಗೂ ಶುಭವಾಗಲೆಂದು ವಿವಿಧ ಪೂಜೆಗಳನ್ನು ಕೈಗೊಳ್ಳಲಾಯಿತು.