ಪತ್ರಕರ್ತರ ಬೇಡಿಕೆಗಳ ಈಡೇರಿಕೆಗಾಗಿ ಶಾಸಕ ಜೆ.ಎನ್‌.ಗಣೇಶ್‌ಗೆ ಮನವಿ

ಪತ್ರಕರ್ತರ ಬೇಡಿಕೆಗಳ ಈಡೇರಿಕೆಗಾಗಿ ಶಾಸಕ ಜೆ.ಎನ್‌.ಗಣೇಶ್‌ಗೆ ಮನವಿ Appeal to MLA J.N. Ganesh to fulfill journalists' demands

ಲೋಕದರ್ಶನ ವರದಿ 

ಕಂಪ್ಲಿ  08: ಪತ್ರಿಕಾ ಭವನ, ನಿವೇಶನ, ಮನೆ ಸೇರಿದಂತೆ ಪತ್ರಕರ್ತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಂಪ್ಲಿ ತಾಲೂಕು ಘಟಕದ ಪದಾಧಿಕಾರಿಗಳಾದ ಪತ್ರಕರ್ತರು ಪಟ್ಟಣದ ಹೊಸಪೇಟೆ ಬೈಪಾಸ್ ರಸ್ತೆಯಲ್ಲಿರುವ ಶಾಸಕರ ಕಛೇರಿಯಲ್ಲಿ ಶಾಸಕ ಜೆ.ಎನ್‌.ಗಣೇಶ್ ಇವರಿಗೆ ಶನಿವಾರ ಮನವಿ ಪತ್ರ ಸಲ್ಲಿಸಿದರು.  ಸಂಘದ ಅಧ್ಯಕ್ಷ ಬಂಗಿ ದೊಡ್ಡ ಮಂಜುನಾಥ ಮಾತನಾಡಿ, ಪಟ್ಟಣದಲ್ಲಿ ಕಳೆದ ಮೂರು ದಶಕಗಳಿಂದ ಪತ್ರಕರ್ತರು ಕಾರ್ಯನಿರತರಾಗಿದ್ದಾರೆ.

ಪತ್ರಕರ್ತರ ಚಟುವಟಿಕೆಗಳಿಗೆ, ಪ್ರತಿಕಾಗೋಷ್ಠಿ ನೆರವೇರಿಸಲು ಪತ್ರಿಕಾ ಭವನದ ಅವಶ್ಯಕತೆ ಇರುತ್ತದೆ. ಪಟ್ಟಣದ ಅತಿಥಿಗೃಹ ಆವರಣದಲ್ಲಿನ ಅತಿಥಿ ಗೃಹ ಕಟ್ಟಡ ಪಕ್ಕದಲ್ಲಿ ಖಾಲಿ ಜಾಗವಿದ್ದು, ಅದರಲ್ಲಿ ಪತ್ರಿಕಾಭವನ ನಿರ್ಮಿಸಿಕೊಡುವಲ್ಲಿ ಶಾಸಕರು ಮುಂದಾಗಬೇಕು. ಪಟ್ಟಣದ ಕೆಲ ಪತ್ರಕರ್ತರಿಗೆ ಈಗಾಗಲೇ ಆಶ್ರಯ ಯೋಜನಡಿ ನಿವೇಶನ ನೀಡಿದ್ದು ಇವರಿಗೆ ವಸತಿ ಯೋಜನಡಿ ಮನೆಗಳನ್ನು ನಿರ್ಮಿಸಿಕೊಡಬೇಕು. ಪಟ್ಟಣದ  ಕೆಲ ಕಾರ್ಯನಿರತ ಪತ್ರಕರ್ತರಿಗೆ ನಿವೇಶನ ನೀಡಬೇಕಿದ್ದು ಅವರಿಗೆ ನೀವೇಶನ ನೀಡಿ ವಸತಿ ಯೋಜನಡಿ ಮನೆ ನಿರ್ಮಿಸಿಕೊಡುವಂತೆ ಮನವಿ ಮಾಡಿದರು.  

ಪಟ್ಟಣದ ಪತ್ರಕರ್ತರು ಸೇರಿದಂತೆ ರಾಜ್ಯದ ಕಾರ್ಯನಿರತ ಪತ್ರಕರ್ತರನ್ನು ಗುರುತಿಸಿ ಸರ್ಕಾರದಿಂದ ಗುರುತಿನಚೀಟಿ, ಸ್ಮಾರ್ಟ್‌ಕಾರ್ಡ್‌, ಮಾಸಿಕ ವೇತನ, ನಿವೃತ್ತಿ ಹೊಂದಿದ ಪತ್ರಕರ್ತರಿಗೆ ಪಿಂಚಣಿ, ನಿವೇಶನ, ವಸತಿ, ಸಾರಿಗೆ ಮತ್ತು ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ಅಧೀವೇಶನದಲ್ಲಿ ಧ್ವನಿ ಎತ್ತಬೇಕು. ರಾಜ್ಯದ ಕಾರ್ಯನಿರತ ಪತ್ರಕರ್ತರಿಗೆ ಅರ್ಹ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಅಧಿವೇಶನದಲ್ಲಿ ಪತ್ರಕರ್ತರ ಪ್ರಬಲಧ್ವನಿಯಾಗಿ ಸರ್ಕಾರದ ಗಮನಸೆಳೆಯುವಂತೆ ಒತ್ತಾಯಿಸಲಾಯಿತು.  

ಇದಕ್ಕೆ ಸ್ಪಂದಿಸಿದ ಶಾಸಕರು ಪತ್ರಕರ್ತರಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸುವಂತೆ ಅಧಿವೇಶನದಲ್ಲಿ ಧ್ವನಿ ಎತ್ತುವ ಜೊತೆಗೆ ಪ್ರಶ್ನೆ ಕೇಳಿ ಸರ್ಕಾರದಿಂದ ಸಮರ​‍್ಕ ಉತ್ತರ ಪಡೆದುಕೊಳ್ಳುವ ಭರವಸೆ ನೀಡಿದರು.  ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ದ್ಯಾಮನಗೌಡ ಪಾಟೀಲ್, ತಾಲೂಕು ಪ್ರಧಾನ ಕಾರ್ಯದರ್ಶಿ ಪದಾಧಿಕಾರಿಗಳಾದ ಪಿ.ವೀರೇಶ್, ಸಹ ಕಾರ್ಯದರ್ಶಿ ಎಸ್‌.ಯಮನಪ್ಪ ಹಾಗೂ ಪದಾಧಿಕಾರಿಗಳಾದ ಬಿ.ರಸೂಲ್, ಎಂ.ಚಂದ್ರಶೇಖರ್, ಬಿ.ಎಚ್‌.ಎಂ.ಗುರುಶಾಂತಶಾಸ್ತ್ರಿ ಇದ್ದರು.