ಗವನಾಳ-ಸಂಕೇಶ್ವರದಲ್ಲಿ ತಲೆ ಎತ್ತಿದ ಅಂತರಾಷ್ಟ್ರೀಯ ಗುಣಮಟ್ಟದ ‘ಕೆಎಲ್‌ಇ ಆಂಗ್ಲ ಮಾಧ್ಯಮ ಸಿಬಿಎಸ್‌ಸಿ ಸ್ಕೂಲ್'

ಗಡಿನಾಡು ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸಂಕೇಶ್ವರದಲ್ಲಿ ಕೆಎಲ್‌ಇ ಸಂಸ್ಥೆಯು ಮತ್ತೊಂದು ಮೈಲ್ಲುಗಲ್ಲಿಗೆ ಸಾಕ್ಷಿಯಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯವನ್ನುರೂಪಿಸುವ ನಿಟ್ಟಿನಲ್ಲಿಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ನೇತೃತ್ವದಲ್ಲಿ ಹಾಗೂ ಆಡಳಿತ ಮಂಡಳಿಯವರ ಇಚ್ಛಾಶಕ್ತಿಯಂತೆಕೆಎಲ್‌ಇ ಸಿಬಿಎಸ್‌ಸಿ ಆಂಗ್ಲ ಮಾಧ್ಯಮ ಶಾಲೆಯು ಶನಿವಾರ 13 ಏಪ್ರಿಲ್ 2024 ರಂದು ಮುಂಜಾನೆ10.00  ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಇನ್ಫೋಶಿಸ್ ಮುಖ್ಯಸ್ಥೆ ಪದ್ಮಭೂಷಣಡಾ.ಸುಧಾ ಮೂರ್ತಿಯವರು ಈ ನೂತನಕಟ್ಟಡವನ್ನುಉದ್ಘಾಟಿಸಲಿದ್ದಾರೆ.  

1916 ರಲ್ಲಿ ಸ್ಥಾಪನೆಗೊಂಡಕೆಎಲ್‌ಇ ಸಂಸ್ಥೆಯು 108 ವರ್ಷಗಳ ಸುದೀರ್ಘಚರಿತ್ರೆಯಲ್ಲಿ ಶೈಕ್ಷಣಿಕ, ಆರೋಗ್ಯ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಜಾಗತಿಕ ಮನ್ನಣೆಗೆ ಪಾತ್ರವಾಗಿರುವುದು ಎಲ್ಲರಿಗೂಗೊತ್ತಿರುವ ಸಂಗತಿ. ಪ್ರಸ್ತುತ ಸಂಸ್ಥೆಯಲ್ಲಿ 1,38,000 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, 18,000 ಸಿಬ್ಬಂದಿ ವರ್ಗದವರು ಸೇವೆ ಸಲ್ಲಿಸುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಸಂಸ್ಥೆಯು ಶಿಖರೋನ್ನತಿ ಹೊಂದುತ್ತಿರುವುದುಅದರರಚನಾತ್ಮಕ ಹಾಗೂ ಕ್ರಿಯಾತ್ಮಕಶಕ್ತಿಗೆ ನಿದರ್ಶನವೆನಿಸಿದೆ. 

ಶಿಕ್ಷಣದ ಇಂದಿನ ಎಲ್ಲ ಬೇಕು-ಬೇಡಿಕೆಗಳನ್ನು ಪೂರೈಸಿರುವ ಸಂಸ್ಥೆ ಅಂತರಾಷ್ಟ್ರೀಯ ಮಟ್ಟದಗುಣಾತ್ಮಕತೆಯನ್ನು ನೀಡುತ್ತಾ ಬಂದಿದೆ. ಶಿಶುವಿಹಾರದಿಂದ ಸ್ನಾತಕೋತ್ತರವರೆಗೆ ಮೌಲಿಕ ಶಿಕ್ಷಣವನ್ನು ನೀಡಿಅಗಾಧವಾಗಿ ಬೆಳೆದು ನಿಂತಿದೆ. ಅಸಂಖ್ಯ ಪ್ರತಿಭಾವಂತರನ್ನು ರೂಪಿಸಿದೆ. ರಾಷ್ಟ್ರಕ್ಕೆಅದ್ವಿತೀಯ ವೈದ್ಯರನ್ನು, ಅಭಿಯಂತರರನ್ನು, ಸಾಹಿತಿಗಳನ್ನು, ಉದ್ಯಮಿಪತಿಗಳನ್ನು, ಶಿಕ್ಷಕರನ್ನು ನೀಡಿದಖ್ಯಾತಿಕೆಎಲ್‌ಇ ಸಂಸ್ಥೆಯದು. ಸಂಸ್ಥೆಯ ಬಹುಸಂಖ್ಯೆಯ ಶಿಕ್ಷಣ ಸಂಸ್ಥೆಗಳು ಹಾಗೂ ಆರೋಗ್ಯ ಸೇವಾ ಕೇಂದ್ರಗಳು ಗ್ರಾಮೀಣ ಭಾಗದಲ್ಲಿಯೇಇರುವುದನ್ನು ಗಮನಿಸಬಹುದು. ರೈತರ, ಕಾರ್ಮಿಕ ವರ್ಗದ ಮಕ್ಕಳ ಶೈಕ್ಷಣಿಕ ವಿಕಾಸಕ್ಕಾಗಿ ಉನ್ನತದರ್ಜೆಯ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಿ ಸಮಾಜಕ್ಕೆಒಂದು ಮುನ್ನುಡಿಯನ್ನು ಬರೆದಿದೆ. ಈ ದೆಸೆಯಲ್ಲಿಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನೇ ಕೇಂದ್ರವಾಗಿಟ್ಟುಕೊಂಡು ಅಂಕಲಿ, ನಿಪ್ಪಾಣಿ,ಚಿಕ್ಕೋಡಿ, ಹಾವೇರಿ, ಸವದತ್ತಿ, ಅಥಣಿ, ಗದಗ, ಗೋಕಾಕ, ಮಾಲೂರ, ಗಳತಗಾ, ಕೇರೂರ, ಕೊಟಗೊಂಡಹು ನಶಿ ಪ್ರದೇಶಗಳಲ್ಲಿಯೇ ಕನ್ನಡ ಮತ್ತುಆಂಗ್ಲಮಾಧ್ಯಮ ಶಾಲೆಗಳನ್ನು ಹುಟ್ಟುಹಾಕಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಇಲ್ಲೆಲ್ಲ ಕೆಎಲ್‌ಇ ಶಾಲೆಯ ಕಟ್ಟಡಗಳನ್ನು ನೋಡುವುದು ಒಂದು ವಿಸ್ಮಯವೇ ಸರಿ. ಅಂತರಾಷ್ಟ್ರೀಯ ಮಟ್ಟದಎಲ್ಲ ಸೌಲಭ್ಯಗಳನ್ನು ಒಳಗೊಂಡಿರುವ ಕನ್ನಡ ಮತ್ತುಆಂಗ್ಲ ಮಾಧ್ಯಮ ಶಾಲೆಗಳು ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿಯ ಸದಸ್ಯರ ಇಚ್ಛಾಶಕ್ತಿಯಿಂದ ತಲೆ ಎತ್ತಿ ನಿಂತಿವೆ.  

ಪ್ರಸ್ತುತಕೆಎಲ್‌ಇ ಸಂಸ್ಥೆಯು ಕರ್ನಾಟಕ, ಮಹಾರಾಷ್ಟ್ರ, ದೆಹಲಿ ಮೊದಲುಗೊಂಡು 15 ಸಿಬಿಎಸ್‌ಇ ಶಾಲೆಗಳನ್ನು, 7 ರಾಜ್ಯ ಪಠ್ಯಕ್ರಮದಆಂಗ್ಲಮಾಧ್ಯಮ ಶಾಲೆಗಳನ್ನು ಮುನ್ನಡೆಸುತ್ತಿದೆ. ಈ ಶಾಲೆಗಳಲ್ಲಿ ಒಟ್ಟು 21,000ಕ್ಕೂ ಅಧಿಕ ವಿದ್ಯಾರ್ಥಿಗಳು ಶಾಲಾ ಶಿಕ್ಷಣವನ್ನು ಪಡೆಯುತ್ತಿರುವುದು ಹೆಮ್ಮೆಯ ಸಂಗತಿ.  

ನೂತನಕಟ್ಟಡದ ವೈಶಿಷ್ಟ್ಯತೆಗಳು: ಸದ್ಯ ಉದ್ಘಾಟನೆಗೊಂಡಿರುವ ಗವನಾಳ-ಸಂಕೇಶ್ವರದ ಕೆಎಲ್‌ಇ ಸ್ಕೂಲ್ 2023-24ರಲ್ಲಿ ಪ್ರಾರಂಭಗೊಂಡಿದ್ದು 4ಎಕರೆ ನಿವೇಶನದಲ್ಲಿ 1,25,000 ಚ.ಅಡಿ ವಿಸ್ತೀರ್ಣದಲ್ಲಿ ವ್ಯಾಪಿಸಿಕೊಂಡಿರುವ  ಶಾಲೆಯ ಕಟ್ಟಡವನ್ನು 18ಕೋಟಿರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪ್ರಸ್ತುತಶಾಲೆಗೆ ದಾನಿಗಳಾದ  ಮಾಲುತಾಯಿ ಶಿವಪುತ್ರ ಶಿರಕೋಳಿಯವರ ಹೆಸರನ್ನು ನಾಮಕರಣ ಮಾಡಲಾಗುತ್ತಿದೆ. 

ಅತ್ಯಂತ ವೈವಿಧ್ಯಪೂರ್ಣವಾಗಿರುವ ಈ ಶಾಲಾ ಕಟ್ಟಡದಲ್ಲಿ ವಿಶೇಷವಾದ ಹೈಟೆಕ್ ವರ್ಗಕೋಣೆಗಳಿವೆ. ಅತ್ಯಾಧುನಿಕವಾದ ವಿಜ್ಞಾನ, ಕಂಪ್ಯೂಟರ್ ಪ್ರಯೋಗಾಲಯಗಳನ್ನು, ಡಿಜಿಟಲ್‌ಗ್ರಂಥಾಲಯ, ಕ್ರೀಡಾ ವಿಭಾಗ, ಸಂಗೀತ ತರಬೇತಿ ಹಾಗೂ ಭವ್ಯವಾದ ಉದ್ಯಾನವನವನ್ನು ಹೊಂದಿದೆ. ಒಳಾಂಗಣದಲ್ಲಿ ಹಸಿರುಮನೆಯನ್ನು ನಿರ್ಮಿಸಲಾಗಿದ್ದು ವಿದ್ಯಾರ್ಥಿಗಳ ಮನಸ್ಸಿಗೆ ಆಹ್ಲಾದಕರ ವಾತಾವರಣವನ್ನುಂಟುಮಾಡಿದೆ. 

ಸುತ್ತಮುತ್ತಲಿನ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗಾಗಿ ಬಸ್‌ನ ಸೌಲಭ್ಯವನ್ನುಒದಗಿಸಲಾಗಿದೆ. ಆವರಣದಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾದ ಶೌಚಾಲಯಗಳನ್ನು ನಿರ್ಮಿಸಲಾಗಿದೆ.  

ಪ್ರಸ್ತುತ ಶಾಲೆಯಲ್ಲಿ ನರ್ಸರಿಯಿಂದ 7ನೇ ತರಗತಿಯವರೆಗೆ 300ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 35ಕ್ಕೂ ಅಧಿಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದುತಾಲೂಕು ಪ್ರದೇಶದಲ್ಲಿಅಂತರಾಷ್ಟ್ರೀಯ ಮಟ್ಟದ ಶಾಲೆಯನ್ನು ನಿರ್ಮಿಸಿರುವುದು ಡಾ.ಕೋರೆಯವರಇಚ್ಛಾಶಕ್ತಿಯ ಪ್ರತೀಕವೆನ್ನಲೇಬೇಕು.  

ಬೆಂಗಳೂರು, ಮುಂಬಯಿ, ದೆಹಲಿಯ ಸುಪ್ರಸಿದ್ಧ ಅಂತರಾಷ್ಟ್ರೀಯ ಶಾಲೆಗಳಲ್ಲಿರುವ ಕಲಿಕಾ ವಿಧಾನಗಳು, ಬೋಧನೆಯ ಕೌಶಲಗಳನ್ನು ಚಿಕ್ಕೋಡಿಯ ಈ ಕೆಎಲ್‌ಇಆಂಗ್ಲ ಶಾಲೆಯಲ್ಲಿಯೂ ವಿದ್ಯಾರ್ಥಿಗಳಿಗೆ ಅತ್ಯಂತ ಸರಳವಾಗಿ ಲಭ್ಯವಾಗುವಂತೆ ನೋಡಿಕೊಂಡಿರುವುದುಕೆಎಲ್‌ಇ ಸಂಸ್ಥೆಯಅಗಾಧತೆಗೆ ಸಾಕ್ಷಿಯಾಗಿ ನಿಂತಿದೆ. ಗ್ರಾಮೀಣ ಭಾಗದರೈತ ಮಕ್ಕಳು ಗುಣಾತ್ಮಕವಾದ ಶಿಕ್ಷಣ ಪಡೆದು ಭವಿಷ್ಯದಲ್ಲಿತೇರ್ಗಡೆಹೊಂದಿ, ಮುಂದಿನ ತರಗತಿಗಳ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಹುದ್ದೆಗಳನ್ನು ಅಲಂಕರಿಸಲೆಂಬ ಸಪ್ತರ್ಷಿಗಳ ಕನಸ್ಸನ್ನುಡಾ.ಪ್ರಭಾಕರಕೋರೆತಂಡದವರು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಕೆಎಲ್‌ಇ ಸಂಸ್ಥೆಯ ಈ ರೀತಿಯ ಶೈಕ್ಷಣಿಕಅಭಿಯಾನ ಸಮಾಜಮುಖಿಯಾಗಿ ಮತ್ತಷ್ಟು ವಿಸ್ತರಿಸಲೆಂದು ಹಾರೈಸೋಣ.