ರಾಯಬಾಗ 12: ರಾಜಕೀಯ ಪಕ್ಷಗಳು ನಮ್ಮನ್ನು ಕೇವಲ ಓಟ್ ಬ್ಯಾಂಕ್ ಆಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ಇದರಿಂದ ನಮ್ಮ ಸಮಾಜಕ್ಕೆ ರಾಜಕೀಯವಾಗಿ, ಸಾಮಾಜಿಕವಾಗಿ ಸರಿಯಾದ ಪ್ರಾಧ್ಯಾನತೆ ಸಿಗುತ್ತಿಲ್ಲ. ಕಾರಣ ನಾವು ನಮ್ಮ ಒಳಪಂಡಗಳನ್ನು ಬಿಟ್ಟು, ಯಾದವರೆಲ್ಲರೂ ಸಂಘಟಿತರಾಗಬೇಕಾಗಿದೆ ಎಂದು ಚಿತ್ರದುರ್ಗದ ಯಾದವಾನಂದ ಸ್ವಾಮೀಜಿಯವರು ಕರೆ ನೀಡಿದರು.
ಬುಧವಾರ ಪಟ್ಟಣದ ಮಹಾವೀರ ಭವನದಲ್ಲಿ ರಾಯಬಾಗ ತಾಲೂಕಾ ಹಣಬರ ಯಾದವ ಸಮಾಜದವರಿಂದ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಹಾಗೂ ಸತ್ಕಾರ ಸಮಾರಂಭದ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿ ಮಾತನಾಡಿದ ಅವರು, ಯಾದವ ಸಮಾಜವನ್ನು ಬೇರೆ ಬೇರೆ ಕಡೆಗೆ ಬೇರೆ ಬೇರೆ ಹೆಸರಿನಿಂದ ಗುತರ್ಿಸಿದರೂ ನಾವೆಲ್ಲರೂ ಒಂದೇ. ದೇಶದಲ್ಲಿ ಯಾದವರ ಜನಸಂಖ್ಯೆ 23 ಕೋಟಿ ಇದ್ದು, ರಾಜ್ಯದಲ್ಲಿ 30 ಲಕ್ಷ ಜನಸಂಖ್ಯೆಯಲ್ಲಿ ಇದ್ದರು, ಇಲ್ಲಿ ನಮಗೆ ಸರಿಯಾದ ಸ್ಥಾನಮಾನ ಇನ್ನುವರೆಗೆ ಸಿಕ್ಕಿಲ್ಲ. ನಮಗೆ ಸರಿಯಾದ ಪ್ರಾಧ್ಯಾನತೆ ಸಿಗಬೇಕಾದರೆ ನಾವೇಲ್ಲರೂ ಎಚ್ಚೆತ್ತುಕೊಳ್ಳಬೇಕೆಂದರು.
ಹಣಬರ ಯಾದವ ಸಮಾಜದ ಜಿಲ್ಲಾಧ್ಯಕ್ಷ ಡಾ.ಅರವಿಂದ ತೆಲಗಿ ಮಾತನಾಡಿ, ನಮ್ಮ ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವಲ್ಲಿ ಹೆಚ್ಚಿನ ಗಮನ ಹರಿಸಬೇಕು. ಸಾಮಾಜಿಕ ಮತ್ತು ರಾಜಕೀಯವಾಗಿ ಬೆಳೆಯಲು ಒಬ್ಬರಿಗೊಬ್ಬರು ಸಹಕರಿಸಬೇಕು. ಶ್ರೀಕೃಷ್ಣ ವಂಶದವರಾದ ನಾವು ಹಣಬರ ಯಾದವವೆಂದು ಹೆಮ್ಮೆಯಿಂದ ಹೇಳಿಕೊಳ್ಳಲು ಸಂಕೋಚ ಪಡಬಾರದೆಂದರು. ಬೆಳಗಾವಿ ಜಿಲ್ಲೆಯಲ್ಲಿ ಹಣಬರಯಾದವ ಮಠ, ಸಭಾಂಗಣ, ಆಸ್ಪತ್ರೆ, ಸಮಾಜದ ವಿದ್ಯಾಥರ್ಿಗಳಿಗೆ ವಸತಿ ನಿಲಯ ಕಟ್ಟುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.
ಬೆಂಗಳೂರಿನ ನರಸಿಂಹಮೂತರ್ಿ ಹಾಗೂ ಮಜಲಟ್ಟಿಯ ಬಸವಪ್ರಭು ಮಹಾರಾಜರು ಮಾತನಾಡಿದರು. ಕಳೆದ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾಥರ್ಿಗಳನ್ನು ಸತ್ಕರಿಸಲಾಯಿತು.
ಮೇಖಳಿಯ ರಾಮಲಿಂಗ ಸ್ವಾಮೀಜಿ, ಸಮಾಜದ ಮುಖಂಡರಾದ ವಸಂತ ಖೋತ, ಸಿದ್ದಪ್ಪ ಬಬಲೇಶ್ವರ, ಮಂಜುನಾಥ ಪಾಟೀಲ, ಲಕ್ಷ್ಮಣ ನವಲಾಯಿ, ಆನಂದ ಪಾಟೀಲ, ಅರುಣಾ ಕರೋಶಿ, ಶೇಷಗಿರಿ ಮದಿಹಳ್ಳಿ, ಎಸ್.ಐ.ಪಾಟೀಲ, ಎಮ್.ಎಲ್.ಬಗನಾಳ, ಶಿವಲಿಂಗ ಪೂಜಾರಿ, ಮಲ್ಲಪ್ಪ ನಾಯಿಕ, ಶೇಷಗಿರಿ ಪಾಟೀಲ, ಅಶೋಕ ಬಿ. ಸೇರಿದಂತೆ ಅನೇಕರು ಇದ್ದರು.
ಸಿದ್ದಪ್ಪ ಬಬಲೇಶ್ವರ ಸ್ವಾಗತಿಸಿದರು, ವಾಯ್.ಬಿ.ಪೂಜಾರಿ ನಿರೂಪಿಸಿ, ವಂದಿಸಿದರು.
ಫೋಟೊ: 12 ರಾಯಬಾಗ 2
ಫೋಟೊ ಶಿಷರ್ಿಕೆ: ರಾಯಬಾಗ: ಪಟ್ಟಣದ ಮಹಾವೀರ ಭವನದಲ್ಲಿ ರಾಯಬಾಗ ತಾಲೂಕಾ ಹಣಬರ ಯಾದವ ಸಮಾಜದವರಿಂದ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಹಾಗೂ ಸತ್ಕಾರ ಸಮಾರಂಭವನ್ನು ಶ್ರೀಕೃಷ್ಣ ಪುತ್ಥಳಿಗೆ ಪೂಜೆ ಸಲ್ಲಿಸುವುದರ ಮೂಲಕ ಉದ್ಘಾಟಿಸುತ್ತಿರುವ ಸ್ವಾಮೀಜಿ ಮತ್ತು ಗಣ್ಯರು.