ಎಲ್ಲರ ಸಹಕಾರದಿಂದ ಕೃಷಿ ಮಾರುಕಟ್ಟೆ ಅಭಿವೃದ್ಧಿ: ದೇಸಾಯಿ
Agricultural market development with everyone's cooperation: Desai
ಮಹಾಲಿಂಗಪುರ 21: ಎಲ್ಲ ಸಹವರ್ತಿಗಳ ಸಹಕಾರ ತೆಗೆದುಕೊಂಡು ರೈತರ ಮತ್ತು ಕೃಷಿ ಮಾರುಕಟ್ಟೆ ಅಭಿವೃದ್ಧಿಯನ್ನೆ ಗಮನದಲ್ಲಿಟ್ಟು ಕೆಲಸ ಮಾಡುತ್ತೇನೆ ಎಂದು ಹಳಿಂಗಳಿಯ ದೇವಲ್ ದೇಸಾಯಿ ಹೇಳಿದರು.
ಸೋಮವಾರ ಮುಂಜಾನೆ ಮಹಾಲಿಂಗಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಭವನದಲ್ಲಿ ನೂತನ ಸರ್ಕಾರಿ ನಾಮ ನಿರ್ದೇಶಿತ ಸದಸ್ಯರನ್ನೊಳಗೊಂಡ ಸಮಿತಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಆಯ್ಕೆಯಾಗಿರುವ ಪ್ರಯುಕ್ತ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಆದಿಯಾಗಿ, ಉಪಾಧ್ಯಕ್ಷ ಸಿದ್ಧನಗೌಡ ಪಾಟೀಲ್ ರನೊಳಗೊಂಡು ಪಟ್ಟಣ ಮತ್ತು ಗ್ರಾಮೀಣ ಭಾಗದ ಮುಖಂಡರು ನನ್ನ ಹಿರಿತನಕ್ಕೆ ಬೆಲೆ ಕೊಟ್ಟು ನೀಡಿರುವ ಗೌರವ ಸ್ಥಾನಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತೇನೆ ಎಂದರು.
ತೇರದಾಳ ಕ್ಷೇತ್ರದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ನೂತನ ಸಮಿತಿಯಿಂದ ಸನ್ಮಾನ ಸ್ವೀಕರಿಸಿ ಅಧ್ಯಕ್ಷರಿಗೆ ಹಾಗೂ ಎಲ್ಲ ಪದಾಧಿಕಾರಿಗಳಿಗೆ ಕಿವಿ ಮಾತು ಹೇಳುತ್ತ, ರೈತರು, ವರ್ತಕರು ಮತ್ತು ಅಧಿಕಾರಿಗಳ ಮಾತಿನ ಸತ್ಯಾಸತ್ಯತೆ ಅರಿತು ತಾವು ನಿರ್ಧಾರಕ್ಕೆ ಬನ್ನಿ. ವರ್ಷಗಳಿಂದ ಕೃಷಿ ಮಾರುಕಟ್ಟೆಯಲ್ಲಿ ಬೀದಿ ಲೈಟ್, ಸ್ವಚ್ಛತೆ ಮತ್ತು ಇನ್ನೂ ಹತ್ತು ಹಲವಾರು ಸಮಸ್ಯೆಗಳಿವೆ, ಅವುಗಳ ನಿವಾರಣೆಯತ್ತ ಗಮನ ಹರಿಸಬೇಕೆಂದು ತಿಳಿಸಿದರು.
ನಾಮ ನಿರ್ದೇಶಿತರು : ದೇವಲ್ ದೇಸಾಯಿ (ಅಧ್ಯಕ್ಷರು), ಸಿದ್ದನಗೌಡ ಪಾಟೀಲ್ (ಉಪಾಧ್ಯಕ್ಷರು), ಚಂದ್ರಶೇಖರ. ಪರ್ಪ. ಕುರಿ, ಮಹೇಶ. ಮಹಾಲಿಂಗಪ್ಪ. ಚಿಚಖಂಡಿ, ಉಮೇಶ ಪೂಜೇರಿ, ದುಂಡಪ್ಪ. ಅಪ್ಪಣ್ಣ. ಜಾಧವ, ರಾಮಪ್ಪ.ಮುರಿಗೆಪ್ಪ.ಉಳ್ಳಾಗಡ್ಡಿ, ಭರತೇಶ ಶಿರಹಟ್ಟಿ, ಲಕ್ಷ್ಮಿಬಾಯಿ ಹುಂಡರಗಿ, ಹೊಳಬಸಪ್ಪ.ತಳವಾರ, ಗುರುನಾಥ್. ಶಿವಲಿಂಗ. ಕಾಂಬಳೆ, ಸಿಧ್ಧಪ್ಪ ಜಳಕಿ ಮತ್ತು ವಿನಯಕುಮಾರ್. ಪಂಡಿತಪ್ಪ. ಚಮಕೇರಿ.
ಕೆಪಿಸಿಸಿ ಸದಸ್ಯ ಬಸವರಾಜ ಕೊಕಟನೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷಣ ದೇಸಾರಟ್ಟಿ, ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಭೀಮಶಿ ಮಗದುಮ ಮಾತನಾಡಿದರು. ವೇದಿಕೆ ಮೇಲೆ ಕಾಂಗ್ರೆಸ್ ಮುಖಂಡರಾದ ಮಲ್ಲಪ್ಪ ಸಿಂಗಾಡಿ, ಪ್ರವೀಣ ನಾಡಗೌಡ, ನಿಲೇಶ ದೇಸಾಯಿ, ನ್ಯಾಮನ್ನ ಸಾವಂತನವರ ಇತರರು ಇದ್ದರು.
ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನೊಳಗೊಂಡು ಸರ್ಕಾರದಿಂದ ನಾಮನಿರ್ದೇಶನಗೊಂಡ ಸದಸ್ಯರೆಲ್ಲರನ್ನೂ ಸನ್ಮಾನಿಸಲಾಯಿತು. ತೇರದಾಳ ಮತ ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಅಲ್ಲದೆ ಎಪಿಎಂಸಿ ಅಧಿಕಾರಿ ವರ್ಗದವರು ಇದ್ದರು. ಎಪಿಎಂಸಿ ಕಾರ್ಯದರ್ಶಿ ಧನರಾಜ್ ಪಟ್ಟಣಶೆಟ್ಟಿ ನಿರೂಪಿಸಿ, ವಂದಿಸಿದರು.
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ 