ಶರಣರ ಚಿಂತನೆ ಜೀವನದಲ್ಲಿ ಅಳವಡಿಸಿಕೊಳ್ಳಿ ಶಾಸಕ ಬಿ ಎಂ ನಾಗರಾಜ್

ಸಿರುಗುಪ್ಪ 14: ಸಮಾಜದಲ್ಲಿನ ಸರ್ವಧರ್ಮೀಯರ ಹಾಗೂ ವಚನ ಸಾಹಿತ್ಯ ಶರಣ ಸಾಹಿತ್ಯ ಜಾತ್ಯತೀತತೆ ಸರ್ವರಿಗೂ ಸಮಾನತೆಯ ಶಾಂತಿ ಸಮ್ಮಾರ್ಗಕ್ಕೆ ಸಾಧ್ಯವಾಗುವಂತಹ 12ನೇ ಶತಮಾನದಲ್ಲಿ ಶರಣರಿಂದ ರಚಿತವಾದ  ವಚನಗಳಲ್ಲಿರುವ ಆದರ್ಶ ಗುಣ ತತ್ವ ಸಿದ್ಧಾಂತಗಳನ್ನು ಅರ್ಥೈಸಿ ಕೊಂಡಾಗ ಮಾತ್ರ ನಮ್ಮೆಲ್ಲರಿಗೂ ಬಸವ ಧರ್ಮವನ್ನು ತಿಳಿಯಲು ಸಾಧ್ಯವಾಗುತ್ತದೆ ಎಂದು ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಶಾಸಕ ಬಿ ಎಂ ನಾಗರಾಜ್ ಅವರು ಹೇಳಿದರು.  

ನಗರದ ಎವಿಎಸ್ ಕಲ್ಯಾಣ ಮಂಟಪದಲ್ಲಿ ನಡೆದ 17ನೇ ಶರಣ ತತ್ವ ಕಮ್ಮಟದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತ್ತಾ ಶರಣರ ಚಿಂತನೆಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಬೇಕು ಎಂದು ಕರೆ ಕೊಟ್ಟರು. ಕೊಪ್ಪಳ ಲೋಕಸಭಾ ಸಂಸತ್ ಕರಡಿ ಸಂಗಣ್ಣ ಮಾಜಿ ಶಾಸಕ ಟಿ ಎಂ ಚಂದ್ರಶೇಖರಯ್ಯ ಸ್ವಾಮಿ, ಅಕ್ಕಿ ಗಿರಣಿ  ಮಾಲೀಕರ ಸಂಘದ ಅಧ್ಯಕ್ಷ ಎನ್ ಜಿ ಬಸವರಾಜಪ್ಪ, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಚೊಕ್ಕ ಬಸವನಗೌಡ, ನಗರಸಭಾ ಮಾಜಿ ಅಧ್ಯಕ್ಷ ಉಂತಗಲ್ಲು ಅಮರೇಶಪ್ಪ, ಕಾಂಗ್ರೆಸ್ ಮುಖಂಡ ಬಿ ಮುತ್ಯಾಲಯ್ಯ ಶೆಟ್ಟಿ, ಸಮಾಜ ಸುಧಾರಕ ಜನ ಅಭಿಪ್ರಾಯ ಮುಖಂಡ ಅಬ್ದುಲ್ ನಬಿ, ಮಹಾಸ್ವಾಮೀಜಿಗಳು ಬಸವ ಬಳಗದ ಮುಖ್ಯಸ್ಥರು ಸಾವಿರಾರು ಭಕ್ತರು  ಇದ್ದರು.