ಲೋಕದರ್ಶನ ವರದಿ
ಒಬ್ಬಂಟಿ ಇದ್ದ ಮಹಿಳೆ ಮನೆಗೆ ನುಗ್ಗಿ ಮಂಗಳಸೂತ್ರ ಕದ್ದು ಕೊಲೆ
ಬೆಳಗಾವಿ 22: ಒಬ್ಬಂಟಿ ಇದ್ದ ಮನೆಗೆ ನುಗ್ಗಿ ಮಹಿಳೆ ಮಂಗಳಸೂತ್ರ ಕಿತ್ತುಕೊಂಡು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಇಲ್ಲಿನ ಗಣೇಶಪುರದ ಲಕ್ಷ್ಮೀ ನಗರದಲ್ಲಿ ನಡೆದಿದೆ.
ಲಕ್ಷ್ಮೀ ನಗರದ ನಿವಾಸಿ ಅಂಜನಾ ಅಜಿತ ದಡ್ಡೀಕರ್(49) ಕೊಲೆಯಾದ ಮಹಿಳೆ. ಅಪಾರ್ಟ್ ಮೆಂಟ್‌ನಲ್ಲಿ ಗಂಡ-ಹೆಂಡತಿ ಮಾತ್ರ ವಾಸ ಮಾಡುತ್ತಿದ್ದರು. ಆಟೋ ಚಾಲಕರಾಗಿ ಜೀವನ ಸಾಗಿಸುತ್ತಿದ್ದ ಅಜಿತ್ ದಡ್ಡಿಕರ್ ನಿನ್ನೆ ಸಂಜೆ ಮನೆಗೆ ವಾಪಸ್ ಬಂದಾಗ ಕೊಲೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಜ್ಞೆತಪ್ಪಿ ಬಿದ್ದಿದ್ದ ಅಂಜನಾರನ್ನು ಬೆಳಗಾವಿಗೆ ತಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೊರಳಲ್ಲಿದ್ದ ಮಂಗಳಸೂತ್ರ, ಕಿವಿಯೋಲೆ, ಕೈಯಲ್ಲಿ ಬಂಗಾರ ಉಂಗುರ ಕದ್ದು ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿಗಳಿಂದ ಪರೀಶೀಲನೆ ಸ್ಥಳ ಪರೀಶೀಲನೆ ನಡೆಸಿದ್ದಾರೆ. ಈ ಕುರಿತು ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.