ಪಟ್ಟಣದಲ್ಲಿ ಅದ್ದೂರಿ ಮಹರ್ಷಿ ಭಗೀರಥ ಜಯಂತೋತ್ಸವ ಕಾರ್ಯಕ್ರಮ

A grand Maharishi Bhagirath Jayanthotsava program in the town

ಪಟ್ಟಣದಲ್ಲಿ ಅದ್ದೂರಿ ಮಹರ್ಷಿ ಭಗೀರಥ ಜಯಂತೋತ್ಸವ ಕಾರ್ಯಕ್ರಮ  

ಬ್ಯಾಡಗಿ 05: ರಾಜಋಷಿ ಮಹರ್ಷಿ ಭಗೀರಥ ಜಯಂತಿ ಬಹಳ ವಿಜೃಂಭಣೆಯಾಗಿ ನೆರವೇರಿತು  ತಾಲೂಕಿನ ಸಮಸ್ತ ಉಪ್ಪಾರ ಸಮಾಜದವರು ಭಗೀರಥ ಮಹರ್ಷಿಯ ಭಾವಚಿತ್ರದ ಮೆರವಣಿಗೆಯನ್ನು ಮಾಜಿ ಶಾಸಕ ಸುರೇಶ್ ಗೌಡ ಪಾಟೀಲ ಚಾಲನೆ ನೀಡಿದರು. ಮೆರವಣಿಗೆಯು ಸಕಲ ವಾದ್ಯಗಳೊಂದಿಗೆ ವಿಜೃಂಭಣೆಯಿಂದ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ತಹಶೀಲ್ದಾರರ ಕಾರ್ಯಾಲಯ ತಲುಪಿತುನಂತರ ತಹಶೀಲ್ದಾರ್ ಕಛೇರಿಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಶಾಸಕ ಬಸವರಾಜ ಶಿವಣ್ಣನವರು ಭಗೀರಥರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ನಾನು ಹಲವು ಜಯಂತಿಗಳನ್ನು ಆಚರಿಸಲು ಇಲ್ಲಿ ಬಂದಿದ್ದೇನೆ ಎಲ್ಲ ಜಯಂತಿಗಳಲ್ಲಿ ಜನಗಳ ಕೊರತೆ ಇರುತ್ತದೆ ಆದರೆ ಇಂದಿನ ಭಗೀರಥ ಜಯಂತಿಯಲ್ಲಿ ನೂರಾರು ಜನ ಸೇರಿದ್ದು ಭಗೀರಥನ ಮೇಲಿರುವ ಪ್ರೀತಿಯನ್ನು ತೋರಿಸುತ್ತದೆ ತಾಲೂಕಿನಲ್ಲಿ ಉಪ್ಪಾರ ಸಮಾಜ ಅಲ್ಪಸಂಖ್ಯಾತರಿದ್ದು ಬ್ಯಾಡಗಿಯಲ್ಲಿ ಕೇವಲ 45-50 ಕುಟುಂಬಗಳು ಇದ್ದರೂ ಸಹ ಇಷ್ಟು ಸಂಖ್ಯೆಯಲ್ಲಿ ಕೂಡಿರುವುದು ಸಂತೋಷದ ವಿಷಯ ಎಂದೆಂದೂ ಬ್ಯಾಡಿಗಿಯಲ್ಲಿ ನಡೆಯದಂತ ಭಗೀರಥ ಜಯಂತಿ ಇಂದು ವಿಜೃಂಭಣೆಯಿಂದ ನಡೆದಿದೆ. ನಮ್ಮನ್ನು ಒಳಗೊಂಡು ಎಲ್ಲ ಗಣ್ಯ ಮಾನ್ಯರನ್ನು ಇಲ್ಲಿ ಕರೆಸಿರುವುದು ಇದಕ್ಕೆ ಮುಖ್ಯ ಕಾರಣ ಒಂದು ಸಮಾಜ ಅಭಿವೃದ್ಧಿ ಆಗಬೇಕೆಂದರೆ ಸಮಾಜದ ಮಕ್ಕಳು ಸುಶಿಕ್ಷತರಾಗಬೇಕು ಅಂದಾಗ ಮಾತ್ರ ಆರ್ಥಿಕವಾಗಿ ರಾಜಕೀಯವಾಗಿ ಮುಂದೆ ಬರಲು ಸಾಧ್ಯ ಸಮಾಜ ಸಂಘಟನೆ ಆಗಲು ಸಾಧ್ಯ ನಿಮ್ಮ ಅಧ್ಯಕ್ಷ ಮಂಜುನಾಥ ಉಪ್ಪಾರರು ಉತ್ತಮ ನಾಯಕತ್ವ ಗುಣ ಹೊಂದಿದ್ದಾರೆ ಅವರಿಗೆ ನೀವೆಲ್ಲರೂ ಸರಿಯಾದ ಸಹಕಾರ ನೀಡಿದಲ್ಲಿ ಉಳಿದ ಸಮಾಜಗಳಂತೆ ನಿಮ್ಮ ಸಮಾಜವೂ ಸಹಿತ ಬೆಳವಣಿಗೆ ಆಗಲಿದೆ ಎಂದರು.ಅಧ್ಯಕ್ಷ ಮಂಜುನಾಥ ಉಪ್ಪಾರ ಮಾತನಾಡಿ ನಮ್ಮ ಮನವಿಯನ್ನು ಸ್ವೀಕರಿಸಿ ಆಗಮಿಸಿದ ಎಲ್ಲ ಗಣ್ಯರಿಗೆ ಧನ್ಯವಾದ ತಿಳಿಸಿ ಬ್ಯಾಡಗಿಯಲ್ಲಿ ನಮ್ಮ ಸಮಾಜದ ಬಂಧುಗಳು ಅತಿ ಕಡಿಮೆ ಸಂಖ್ಯೆಯಲ್ಲಿ ಇದ್ದು ಅತಿ ಹಿಂದುಳಿದ ವರ್ಗದವರಾಗಿದ್ದಾರೆ. ಈಗಲೂ ಸಹಿತ ಅನೇಕ ಜನ ಕೂಲಿ ಕಾರ್ಮಿಕರು ಇದ್ದು ಆರ್ಥಿಕವಾಗಿ ಬಹಳ ಹಿಂದುಳಿದವರಿದ್ದಾರೆ ಹೀಗಾಗಿ ಸಮಾಜದ ಕಾರ್ಯಗಳಿಗೆ ಸಮಯದ ಅಭಾವ ಸಹಾಯ ಸಹಕಾರದ ಕೊರತೆ ಇರುವುದರಿಂದ ಇಲ್ಲಿವರೆಗೂ ನಾವು ಅಭಿವೃದ್ಧಿ ಹೊಂದಿಲ್ಲ ನಮ್ಮ ಸಮಾಜ ಇರುವುದೇ ಅನೇಕ ಗಣ್ಯ ವ್ಯಕ್ತಿಗಳಿಗೆ ರಾಜಕಾರಣಿಗಳಿಗೆ ಕಂಡುಬಂದಿಲ್ಲ ಇಂದು ಆಗಮಿಸಿದಂತೆ ಸಹಕಾರ ನೀಡಿದಂತೆ ಮುಂದಿನ ದಿನಗಳಲ್ಲಿ ತಾವೆಲ್ಲರೂ ನನಗೆ ಸಹಕಾರ ಪ್ರೋತ್ಸಾಹ ನೀಡಿದಲ್ಲಿ ನಾವು ರಾಜಕೀಯವಾಗಿ ಸಾಮಾಜಿಕವಾಗಿ ಮುಂದೆ ಬಂದು ಸರಕಾರದಿಂದ ಸಿಗುವ ಎಲ್ಲಾ ಸವಲತ್ತುಗಳ ತಿಳಿದು ನಮ್ಮ ಸಂಘವನ್ನು ಬೆಳೆಸುವಲ್ಲಿ ಪ್ರಾಮಾಣಿಕವಾಗಿ ಭಗೀರಥ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ಶಂಕರ್ ಉಪ್ಪಾರ ಇವರು ಭಗೀರಥ ಜಯಂತಿಯ ಬಗ್ಗೆ ಉಪನ್ಯಾಸ ನೀಡಿದರು ಶಿಕ್ಷಕರಾದ ಶ್ರೀನಿವಾಸ ಕರ್ನೂಲ ಇವರು ನಿರೂಪಣೆ ನಡೆಸಿಕೊಟ್ಟರು ಲಿಂಗರಾಜ ಹರ್ಲಾ ಸ್ವಾಗತಿಸಿದರು. ಶಿವಬಸಪ್ಪ ಉಪ್ಪಾರ ವಂದನಾರೆ​‍್ಣ ಮಾಡಿದರುಈ ಸಂದರ್ಭದಲ್ಲಿ ಚಂದ್ರು ಆಟದವರ ಮಾಲತೇಶ ಉಪ್ಪಾರ ಶಿವ ಮೂರ್ತಿ ಶಿವನಗೌಡ ಪಾಟೀಲ, ಪುರಸಭೆ ಮುಖ್ಯ ಅಧಿಕಾರಿ ವಿನಯಕುಮಾರ ಹೊಳೆಪಗೋಳ, ಮುರಿಗೆಪ್ಪ ಶೆಟ್ಟರ, ಬಸವರಾಜ ಸುಂಕಾಪುರ, ಪುರಸಭೆ ಸದಸ್ಯ ಗಾಯಿತ್ರಿ ರಾಯ್ಕರ, ಚನ್ನಬಸಪ್ಪ ಹುಲ್ಲತ್ತಿ, ಉಪ್ಪಾರ ಸಮಾಜದ ಅಧ್ಯಕ್ಷ ಮಂಜುನಾಥ ಉಪ್ಪಾರ ಕಾರ್ಯದರ್ಶಿ ಲಿಂಗರಾಜ ಹರ್ಲಾಪುರ ಇದ್ದರು. ವೆಂಕಟೇಶ ಉಪ್ಪಾರ ಕೃಷ್ಣಪ್ಪ ಉಪ್ಪಾರ ಹಾಗೂ ಬ್ಯಾಡಗಿ ಪಟ್ಟಣದ ಉಪ್ಪಾರ ಸಮಾಜದ ಮಹಿಳೆಯರು ಯುವಕರು ಹಾಗೂ ಬಂಧುಗಳು ಮತ್ತು ಭಗೀರಥ ಉಪ್ಪಾರ ಸಮಾಜ ಸಂಘದ ಪದಾಧಿಕಾರಿಗಳು ಸದಸ್ಯರು ಕಾಸಂಬಿ, ಗುಂಗುರಗೊಪ್ಪ ಗ್ರಾಮಗಳ ಮುಖಂಡರು ಉಪಸ್ಥಿತರಿದ್ದರು.