ಮೂಡಲಗಿ 03; ಸಮೀಪದ ಸುಣಧೋಳಿ ಹತ್ತಿರ ಘಟಪ್ರಭ ನದಿಯ ಬ್ರೀಜ್ ಕಂ ಬ್ಯಾರೇಜ್ ಸೇತುವೆ ಮೇಲೆ ಶುಕ್ರವಾರ ಮುಂಜಾನೆ 9ಕ್ಕೆ ಸೈಕಲ್ ಮೇಲೆ ಶಾಲೆ ಹೋಗುವಾಗ ಎದುರಿಗೆ ಬಂದ ಟಂ.ಟಂ ವಾಹನವೂ ವಿದ್ಯಾಥರ್ಿಗೆ ತಾಗಿದ ಪರಿಣಾಮ ಆಯತಪ್ಪಿ ನೀರುಪಾಲಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಬಾಲಕ ನದಿಗೆ ಬಿದ್ದ ವಿಷಯ ತಿಳಿಯುತ್ತಿದಂತೆ ಮೂಡಲಗಿ, ಕುಲಗೋಡ ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಅಗ್ನಿ ಶಾಮಕದಳ ಸಿಬ್ಬಂದಿಯು ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಸಹಕಾರದಿಂದ ಬಾಲಕ ಶೋಧಕ್ಕಾಗಿ ಕಾಯರ್ಾಚರಣೆ ನಡೆಸಿದರು ಭಾರಿ ನೀರಿನ ರಭಸದಿಂದ ಬಾಲಕ ಪತ್ತೆಯಾಗದಿರುವದರಿಂದ ನದಿಯ ನೀರನ್ನು ತಗ್ಗಿಸಲು ತಿಗಡಿ ಸೇತೆವೆಗೆ ನೀರನ್ನು ತಡೆಯುವ ಕಾರ್ಯವನ್ನು ಕೈಕೊಂಡು ನಂತರ ಸುಣಧೋಳಿಯ ಬ್ರೀಜ್ ಕಂ ಬ್ಯಾರೇಜಿನ ಸೇತುವೆಗೂ ಸಹ ನೀರನ್ನು ತಡೆಯಲು ಕಬ್ಬಿನ ಪಳೆಗಳನ್ನು ಅಳವಡಿಸಿದರು. ಸುಮಾರು 6 ಘಂಟೆಗಳ ಕಾಯರ್ಾಚರಣೆ ನಂತರ ಬಾಲಕನ ಸೈಕಲ್ ಮಾತ್ರ ಪತ್ತೆಯಾಯಿತು. ನಂತರ 4 ಗಂಟೆ ಸುಮಾರಿಗೆ ಬಾಲಕನ ಶೋಧ ಕಾರ್ಯಕ್ಕಾಗಿ ಬೆಳಗಾವಿಯಿಂದ ನುರಿತ ಈಜುಗಾರರ ಜೊತೆ ಸ್ಥಳಿಯರು ಶೋಧ ಕಾಯರ್ಾಚರಣೆ ನಡೆಸಿದಾಗ ಸೇತುವೆಯಿಂದ ಸುಮಾರು 400 ಮೀಟರ ದೂರದಲ್ಲಿ ಬಾಲಕನ ಶವ ಪತ್ತೆಯಾಯಿತು.
ಮೃತ ಬಾಲಕ ಮೂಲತಃ ರಾಯಭಾಗ ತಾಲೂಕಿನ ಕಪಲ್ಲಗುದಿ ಗ್ರಾಮದ ಬಸವರಾಜ ಭರಮಪ್ಪ
ಶುಭಾನಿ(14) ಈತನು ಚಿಕ್ಕಂದಿನಿಂದಲೂ ತನ್ನ ತಾಯಿ ತವರು ಮನೆಯಾದ ಸುಣಧೋಳಿ ಗ್ರಾಮದ ಗಂಗವ್ವಾ ಪಾಶಿ ಮನೆಯಲ್ಲಿ ವಾಸಿಸುತ್ತಿದ್ದು, ತನ್ನ ಪ್ರಾಥಮಿಕ ಶಿಕ್ಷಣವನ್ನು ಕಮಲದಿನ್ನಿ ಗ್ರಾಮದ ಶಾಲೆಯಲ್ಲಿ ಮುಗಿಸಿ 8ನೇ ತರಗತಿ ವಿದ್ಯಾಭ್ಯಾಸಕ್ಕಾಗಿ ಸುಣಧೋಳಿ ಶ್ರೀ ಬಿ.ವ್ಹಿ.ಎನ್ ಸರಕಾರಿ ಪ್ರೌಢ ಶಾಲೆಗೆ ಪ್ರವೇಶ ಪಡೆದು ಪ್ರತಿದಿನ ಶಾಲೆಗೆ ತನ್ನ ಸೈಕಲ್ ಮೇಲೆ ಹೋಗಿ ಬರುತ್ತಿದ. ಆದರೆ ದುರದುಷ್ಟವಶಾತ್ ಶುಕ್ರವಾರ ಎಂದಿನಂತೆ ಶಾಲೆಗೆ ಹೋಗುವಾಗ ಸೇತುವೆ ಮೇಲೆ ಮೂಡಲಗಿಕಡೆ ಬರುತಿದ ಟಂ. ಟಂ ವಾಹನದ ಚಾಲಕನ ನಿರ್ಲಕ್ಷತನದಿಂದ ಸೈಕಲಿಗೆ ತಾಗಿ ಬಾಲಕ ಸೈಕಲ್ ಸಮೇತವಾಗಿ ನದಿಗೆ ಬಿದ್ದಿದಾನೆ.
ಈ ನದಿಯ ಬ್ರಿಜ್ ಕಂ ಬ್ಯಾರೇಜಿಗೆ ರಕ್ಷಣಾ ಗೋಡೆಯಿಲ್ಲದಿರುವದರಿಂದ ಈ ಅವಘಡ ಸಂಭವಿಸಲು ಕಾರಣ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸುತ್ತಿದರು.
ಘಟನಾಸ್ಥಳಕ್ಕೆ ಆಗಮಿಸಿದ ಗೋಕಾಕ-ಮೂಡಲಗಿ ತಹಶೀಲ್ದಾರ ಜಿಎಸ್.ಮಳಗಿ ಅವರು ಈ ಸೇತುವೆ ಚಿಕ್ಕ ನೀರಾವರಿ ಇಲಾಖೆಯ ವ್ಯಾಪ್ತಿಗೆ ಬರುತ್ತಿದ್ದು, ಇಲಾಖಾ ಅಧಿಕಾರಿಗಳನ್ನು ಸಂಪಕರ್ಿಸಿದಾಗ ಈ ಸೇತುವೇಯು ಬ್ರಿಜ್ ಕಂ ಬ್ಯಾರೇಜ್ ಇರುವದರಿಂದ ಪ್ರವಾಹ ಬಂದ ಸಂಧರ್ಭದಲ್ಲಿ ತೊಂದರೆ ಉಂಟಾಗುತ್ತದೆ ಎನ್ನುವ ಕಾರಣ ದಿಂದ ರಕ್ಷಣಾ ಗೋಡೆ ನಿಮರ್ಿಸಿರುವದಿಲ್ಲಾ ಎಂದು ತಿಳಿಸಿದ್ದಾರೆ. ಈ ಕುರಿತು ಮೇಲಾಧಿಕಾರಿಗಳೊಂದಿಗೆ ಚಚರ್ಿಸಿ ಸೂಕ್ತ ಕ್ರಮ ಕೈಕೋಳ್ಳುವದಾಗಿ ತಿಳಿಸಿದರು.
ಪಾಲಕರ ಆಕ್ರಂದನ: ಬಾಲಕ ತಂದೆ ಬರಮಪ್ಪ, ತಾಯಿ ಸವೀತಾ, ಅಜ್ಜಿ ಗಂಗವ್ವಾಳ ಹಾಗೂ ಕುಂಟುಬಂದವರ ಆಕ್ರಂದನ ಮುಗಿಲು ಮುಟಿತ್ತು.