ಟಿನೇಜ್ ಹುಡುಗರ ಮನಸ್ಥಿತಿ ತಿಳಿಸುವ ಒಂದು ಸುಂದರ ಕಥೆ

A beautiful story that conveys the mood of teenage boys.

ಟಿನೇಜ್ ಹುಡುಗರ ಮನಸ್ಥಿತಿ ತಿಳಿಸುವ ಒಂದು ಸುಂದರ ಕಥೆ   

.ಗದಗ:05:ಟಿನೇಜ್ ಹುಡುಗರ ಮನಸ್ಥಿತಿ ತಿಳಿಸುವ ಒಂದು ಸುಂದರ ಕಥೆ  ಹೆಬ್ಬುಲಿ ಚಿತ್ರದಲ್ಲಿದ್ದು,ಮೇ-23 ರಂದು ಚಿತ್ರ ತೆರೆಗೆ ಬರಲಿದ್ದು, ಗದಗ ನ ಕೆಲವು ಅನುಭವಿ ಕಲಾವಿದರು ಹಾಗೂ ಚಿತ್ರದಲ್ಲಿ ಹೆಚ್ಚಿಗೆ ಪಳಗಿದವರು  ನಮ್ಮ ಚಲನಚಿತ್ರದಲ್ಲಿದ್ದಾರೆ. ಅನೇಕ ನಿರ್ದೇಶಕರು ನಮ್ಮ ಚಿತ್ರದ ಕಥೆಯನ್ನ ಒಪ್ಪಿ ನಮಗೆ ಬೆಂಬಲಿಸಿದ್ದಾರೆ ಎಂದು ಹೆಬ್ಬುಲಿ ಕಟ್ ಚಿತ್ರದ ನಿರ್ದೇಶಕ ಭೀಮರಾವ್ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಇದೇ ವೇಳೆ ಹೆಬ್ಬುಲಿ ಕಟ್ ಚಿತ್ರದ ನಟ ಮೌನೇಶ ನಟರಂಗ ಮಾತನಾಡಿ ಚಿತ್ರವು ಹಳ್ಳಿ ಹುಡುಗನ ಕಥೆಯನ್ನ ಆಧರಿಸಿದ್ದು, ಇದರಲ್ಲಿ ತತ್ವ ಪದಗಳು,ಕವಾಲಿ ಸೇರಿ ಉತ್ತರ ಕನ್ನಡ ಭಾಷೆಯನ್ನ ಈ ಚಿತ್ರದಲ್ಲಿ ಬಳಕೆ ಮಾಡಿದ್ದು, ಉತ್ತರ ಕನ್ನಡದ ಸೊಗಡಿನ ಭಾಷೆ ಸೇರಿ ಭೌಗೋಳಿಕ ವ್ಯಾಪ್ತಿಯ ವಿಷಯ ತಿಳಿಸಲಾಗಿದೆ ಎಂದರು. ಪತ್ರಿಕಾ ಗೋಷ್ಠಿ ವೇಳೆ ಕುಮಾರ ಎಂ ಎಂ, ನಟಿ ಅನನ್ಯ ನಿಹಾರಿಕಾ ಸೇರಿದಂತೆ ಇತರರಿದ್ದರು.