ಲೋಕದರ್ಶನ ವರದಿ
ಭರಪುರ ಕೊಡುಗೆ ನೀಡಿದ 16ನೇ ಭಾರಿ ಬಜೆಟ್: ಶಾಸಕ ಯಾಸೀರಖಾನ ಪಠಾಣ
ಶಿಗ್ಗಾವಿ 21: ವಿಧಾನ ಸಭೆ ಅಧಿವೇಶನದ ಸಮಯದಲ್ಲಿ ಸಿಕ್ಕ ಅವಕಾಶದಲ್ಲಿಶಿಗ್ಗಾವಿ-ಸವಣೂರಕ್ಷೇತ್ರದ ಶಾಸಕಯಾಶೀರಖಾನ ಪಠಾಣ ಮಾತನಾಡಿಬಸವಣ್ಣನವರು ಹಾಗೂ ಕುವೆಂಪು ಅವರ ನಾಣ್ಣುಡಿಯಂತೆ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬಂತೆ ಸಿ.ಎಂ ಸಿದ್ದರಾಮಯ್ಯನವರ ಐತಿಹಾಸಿಕ ದಾಖಲೆಯ 16 ನೇ ಮುಂಗಡ ಪತ್ರ ಮಂಡಿಸುವ ಮೂಲಕ ದೇಶದಲ್ಲಿ 16 ಭಾರಿ ಬಜೆಟ್ ಮಂಡಿಸಿದ ಏಕೈಕ ಮುಖ್ಯಮಂತ್ರಿಅಲ್ಲದೇ 4,09,549 ಕೋಟಿರೂದಾಖಲೆಗಾತ್ರದ ಬಜೆಟ್ ಮಂಡಿಸಿದ್ದಾರೆ ಅಲ್ಲದೆ ಕ್ಷೇತ್ರದ ಸವಣೂರ ಸರಕಾರಿಆಸ್ಪತ್ರೆಯ ನಿರ್ಮಾಣಕ್ಕೆ 45 ಕೋಟಿ ಹಣವನ್ನು ಮುಂಗಡ ಪತ್ರದಲ್ಲಿಅನುಧಾನ ಮೀಸಲಿಟ್ಟಿದ್ದು ಹಾಗೂ ಆಶಾ ಕಾರ್ಯಕರ್ತೆಯರಿಗೆ, ಸಹಾಯಕಿಯರಿಗೆಗೌರವಧನ ಹೆಚ್ಚಳ ಮಾಡಿದ್ದು, ಕುಸ್ತಿ ಪಠುಗಳಿಗೆ ಮಾಶಾಸನ ಹೆಚ್ಚಿಗೆ ಮಾಡಲಾಗಿರೈತರ, ಕಾರ್ಮಿಕರ, ಸರ್ವ ಸಮುದಾಯಗಳ ಹಿತಕಾಪಾಡುವ ಸಲುವಾಗಿ ಒಳ್ಳೆಯ ಯೋಜನೆಗಳನ್ನು ಜಾರಿಗೆತರಲು ಮುಂದಾಗಿದ್ದುಅವರಿಗೆಕ್ಷೇತ್ರದ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.
ಅಲ್ಲದೇಬಸವಣ್ಣನವರಅನುಭವ ಮಂಟಪದಲ್ಲಿಇದ್ದ ಹಾಗೆ ಎಲ್ಲ ಸಮುದಾಯದವರಿಗೆಒಳಗೊಂಡು ಸಂಪುಟರಚನೆ ಮಾಡಿಸಚಿವ ಸ್ಥಾನ ನೀಡಿದಕೀರ್ತಿ ಸಿ.ಎಂ.ಸಿದ್ದರಾಮಯ್ಯನವರಿಗೆ ಸಲ್ಲುತ್ತದೆಎಂದು ಸದನದಲ್ಲಿ ಶಾಸಕ ಯಾಶೀರಖಾನ ಪಠಾಣ ಹೇಳಿದರು.
ಶಿವಾಜಿ ಮಹಾರಾಜರ ಬಲಗೈ ಬಂಟ ಶೇರಖಾನಎಂದುಯಾರು ಹೇಳುವುದಿಲ್ಲ ಮತ್ತು ಸೈನ್ಯದಲ್ಲಿ ಶೇ 50 ರಷ್ಟು ಕ್ಕೂ ಹೆಚ್ಚು ಮುಸ್ಲಿಂ ಸಮುದಾಯದ ಸೈನಿಕರಿದ್ದರು ಹಾಗೂ ಪಠಾಣ ಸಮುದಾಯದ ವಂಶಸ್ಥರು ಶಿವಾಜಿ ಮಹಾರಾಜರಆಪ್ತರಾಗಿದ್ದರು ಮತ್ತುಒಂದು ದಿನ ಸದನದ ಸಮಯಾವಕಾಶ ಪಡೆದು ಬಸವಣ್ಣ, ಅಂಬೇಡ್ಕರ್, ಶಿವಾಜಿ ಮಹಾರಾಜ ಆಪ್ತ ಶೇರಖಾನ ಪಠಾಣ, ಅಕ್ಬರನ ಆಪ್ತ ಬೀರಬಲ್ಲ, ಟಿಪ್ಪು ಸುಲ್ತಾನ್ ಆಪ್ತ ಪೂರ್ಣಯ್ಯಎಂದುಸದನಕ್ಕೆಗೊತ್ತಾಗಬೇಕುಎಂದು ಶಿಗ್ಗಾವಿ ಶಾಸಕ ಯಾಶೀರಖಾನ ಪಠಾಣ ಒತ್ತಾಯಿಸಿದರು.