ಅಂಬೇವಾಡಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿ.ಟಿ.ಯು.) ಕೌಶಲ್ಯಾಭಿವೃದ್ಧಿ ಕೇಂದ್ರದ ಆವರಣದಲ್ಲಿ ಏಕಕಾಲದಲ್ಲಿ 16 ಹೆಬ್ಬಾವಿನ ಮರಿಗಳು ಪತ್ತೆ
16 baby pythons were found simultaneously in the premises of the Visvesvaraya Technological Universi
ದಾಂಡೇಲಿ 10: ದಾಂಡೇಲಿಯ ಅಂಬೇವಾಡಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿ.ಟಿ.ಯು.) ಕೌಶಲ್ಯಾಭಿವೃದ್ಧಿ ಕೇಂದ್ರದ ಆವರಣದಲ್ಲಿ ಏಕಕಾಲದಲ್ಲಿ 16 ಹೆಬ್ಬಾವಿನ ಮರಿಗಳು ಪತ್ತೆಯಾಗಿರುವ ಘಟನೆ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯಲ್ಲಿ ಆತಂಕ ಮೂಡಿಸಿದೆ. ಅರಣ್ಯ ಇಲಾಖೆಯ ಸಹಯೋಗದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಲ್ಲಾ ಹೆಬ್ಬಾವಿನ ಮರಿಗಳನ್ನು ಸುರಕ್ಷಿತವಾಗಿ ಸೆರೆಹಿಡಿದು ಸಮೀಪದ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.ಕಾಲೇಜು ಆವರಣದ ಮೈದಾನದಲ್ಲಿ ವಿದ್ಯಾರ್ಥಿಗಳು ಸಂಚರಿಸುತ್ತಿದ್ದ ವೇಳೆ ಅನೇಕ ಹೆಬ್ಬಾವಿನ ಮರಿಗಳು ಹರಿದಾಡುತ್ತಿರುವುದನ್ನು ಗಮನಿಸಿ ತಕ್ಷಣ ಕಾಲೇಜಿನ ಪ್ರಾಂಶುಪಾಲರಿಗೆ ಮಾಹಿತಿ ನೀಡಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪ್ರಾಂಶುಪಾಲರು ಕೂಡಲೇ ಅರಣ್ಯ ಇಲಾಖೆಯನ್ನು ಸಂಪರ್ಕಿಸಿದ್ದು, ಇಲಾಖೆ ಉರಗ ತಜ್ಞ ರಜಾಕ್ ಅವರ ಸಹಕಾರದೊಂದಿಗೆ ಕಾರ್ಯಾಚರಣೆ ಕೈಗೊಂಡಿದೆ. ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಉರಗ ತಜ್ಞರ ತಂಡವು ಸಮನ್ವಯದಿಂದ ಕಾರ್ಯನಿರ್ವಹಿಸಿ ಒಟ್ಟು 16 ಹೆಬ್ಬಾವಿನ ಮರಿಗಳನ್ನು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಡುಗಡೆ ಮಾಡಿದೆ. ಒಂದು ತಿಂಗಳ ಹಿಂದೆ ಇದೇ ಆವರಣದಲ್ಲಿ ಸುಮಾರು 15 ಅಡಿ ಉದ್ದದ ಬೃಹತ್ ಹೆಬ್ಬಾವು ಕಾಣಿಸಿಕೊಂಡಿದ್ದು, ಅದನ್ನು ಉರಗ ತಜ್ಞ ರಜಾಕ್ ಹಿಡಿದು ಕಾಡಿಗೆ ಬಿಟ್ಟಿದ್ದರು. ಇದೀಗ ಪತ್ತೆಯಾದ ಮರಿಗಳು ಅದೇ ಹೆಬ್ಬಾವಿನ ಸಂತತಿ ಆಗಿರುವ ಸಾಧ್ಯತೆ ಇದೆ ಎಂದು ರಜಾಕ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ವಿದ್ಯಾರ್ಥಿಗಳು ಕಾಲೇಜಿನ ಸುತ್ತಲೂ ಬಲಿಷ್ಠ ಮತ್ತು ಸುರಕ್ಷಿತ ಆವರಣ ಗೋಡೆ ನಿರ್ಮಿಸುವಂತೆ ಆಡಳಿತ ಮಂಡಳಿ ಹಾಗೂ ಸಂಬಂಧಿಸಿದ ಇಲಾಖೆಗೆ ಮನವಿ ಮಾಡಿದ್ದಾರೆ.
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್ 